ಕರ್ನಾಟಕ

ಲಿಮ್ಕಾ ದಾಖಲೆಗೆ ಹೆಸರು ಸೇರ್ಪಡಿಸಿದ ಬಾಲ ಕನ್ನಡಿಗ ವಿಕ್ರಮಾದಿತ್ಯ..!

Pinterest LinkedIn Tumblr

44

ಬೆಂಗಳೂರು, ಜೂ.6: ನಗರದ ಲಗ್ಗೆರೆ ಈಶ್ವರ್ ಕುಮಾರ್ ಅವರ ಪುತ್ರ 10ನೆ ತರಗತಿ ವಿದ್ಯಾರ್ಥಿ ವಿಕ್ರಮಾದಿತ್ಯ ಒಂದು ನಿಮಿಷದಲ್ಲಿ 42 ಕಾರ್ಟ್‌ವೀಲ್‌ಅನ್ನು ಕೈಮುಷ್ಟಿಯಿಂದ ಮುರಿಯುವ ಮೂಲಕ ಲಿಮ್ಕಾ ದಾಖಲೆಗೆ ತನ್ನ ಹೆಸರು ಸೇರ್ಪಡೆಗೊಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಈ ಸಾಹಸ ಪ್ರದರ್ಶಿಸಿದ ವಿಕ್ರಮಾದಿತ್ಯ ತನ್ನ 8ನೇ ವಯಸ್ಸಿಗೆ ಗ್ರಾನೈಟ್‌ಗಳನ್ನು ತುಂಡು ಮಾಡಿದ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 9ನೇ ವಯಸ್ಸಿನಲ್ಲಿ 3 ಸೆಕೆಂಡ್‌ನಲ್ಲಿ 6 ಗ್ರಾನೈಟ್‌ಗಳ್ನು ಛಿದ್ರಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಸಾಹಸವನ್ನು ದಾಖಲಿಸಿದ್ದಾನೆ ಎಂದು ಆತನ ತಂದೆ ಈಶ್ವರ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

2011 ನ.13ರಂದು ಒಂದು ನಿಮಿಷದಲ್ಲಿ 36 ಸೈಕಲ್‌ಗಳನ್ನು ತನ್ನ ಹೊಟ್ಟೆಯ ಮೇಲೆ ಹತ್ತಿಸಿಕೊಂಡು ವಿಶ್ವದಾಖಲೆ ಮಾಡಿದ್ದಾನೆ. ಕಳೆದ ವರ್ಷ ಮೇ 14ರಂದು 8 ಸೆಕೆಂಡಿನಲ್ಲಿ 262 ಟ್ಯೂಬ್ ಲೈಟ್‌ಗಳನ್ನು ಪುಡಿ ಮಾಡುವ ಮೂಲಕ ಸ್ಯೂಪರ್ ಹ್ಯೂಮನ್ ಮತ್ತು ಗಿನ್ನಿಸ್ ದಾಖಲೆ ಮಾಡಿದ್ದಾನೆ. ಇದುವರೆಗೆ ಈತನಿಗೆ 99 ಪ್ರಶಸ್ತಿಗಳು ದೊರೆತಿವೆ.

ಕೇವಲ ಸಾಹಸ ಮಾತ್ರವಲ್ಲ ನಟನೆಯಲ್ಲೂ ಈತ ಎತ್ತಿದ ಕೈ. ಅದ್ಧೂರಿ, ಸಾರಥಿ, ಜಟಾಯು, ಪವರ್ ಸ್ಟಾರ್ ಅಭಿನಯದ ಯಾರೇ ಕೂಗಾಡಲಿ, ಲಿಟ್ಲ್‌ಮಾಸ್ಟರ್, ಸುಪ್ರೀಂ, ಪರಬ್ರಹ್ಮ, ಚತುರ್ಭುಜ, ಮರ್ಯಾದೆ ಹಾಗೂ ದುನಿಯಾ ವಿಜಿ ಅಭಿನಯದ ಕೋಬ್ರಾ ಮತ್ತು ಸಿಂಹಾದ್ರಿ ಬೊಂಬೆಯಾಟ, ಬಣ್ಣದ ಕನಸು, ಕೂಗು ಅರಿವು ಮುಂತಾದ ಚಿತ್ರಗಳಲ್ಲಿ ವಿಕ್ರಮಾದಿತ್ಯ ಅಭಿನಯಿಸಿದ್ದಾನೆ ಎಂದು ಅವರು ತಿಳಿಸಿದರು.

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವಿಕ್ರಮಾದಿತ್ಯನನ್ನು ರಾಜಭವನ್‌ಗೆ ಕರೆಸಿ ಮಾತನಾಡಿಸಿ, ಗೌರವಿಸಿದ್ದರು. ಈತನಿಗೆ ಹಲವು ಮಠಾಧೀಶರು, ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ. ಪ್ರಸಕ್ತ ವಿಕ್ರಮಾದಿತ್ಯ ನೃತ್ಯ, ಜಿಮ್ನಾಸ್ಟಿಕ್ ಕಲಿಯುತ್ತಿದ್ದು, ಮುಂದೆ ಐಎಎಸ್ ಅಧಿಕಾರಿಯಾಗಬೇಕೆಂಬ ಹೆಬ್ಬಯಕೆ ಹೊಂದಿದ್ದಾನೆ, ಅದಕ್ಕಾಗಿ ಉನ್ನತ ಶಿಕ್ಷಣ ಕಲಿಯುವ ಇಚ್ಛೆ ಹೊಂದಿದ್ದಾನೆ. ಆತನ ಸಾಧನೆಯನ್ನು ಗುರುತಿಸಿ ಸರ್ಕಾರ, ಸಮಾಜ ಆತನ ಕನಸು ನನಸು ಮಾಡಲು ಮುಂದೆ ಬರಬೇಕು ಎಂದು ಅವರು ಮನವಿ ಮಾಡಿದರು.

Write A Comment