ಗಲ್ಫ್

ಮಸ್ಕಟ್ ನಿಂದ ಮುಂಬಯಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನದ ಟಾಯ್ಲೆಟ್ ನಲ್ಲಿ 8 ಕೆಜಿ ಚಿನ್ನ ಪತ್ತೆ

Pinterest LinkedIn Tumblr

gold-bar

ಮುಂಬಯಿ: ವಾಯುಯಾನ ಗುಪ್ತಚರ ಇಲಾಖೆ ಅಧಿಕಾರಿಗಳು ಸುಮಾರು 2ಕೋಟಿ ರೂ. ಮೌಲ್ಯದ 8 ಕೆ.ಜಿ ಚಿನ್ನವನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

ಜೆಟ್ ಏರ್ ವೇಸ್ ವಿಮಾನದ ಶೌಚಾಲಯದಲ್ಲಿ 8 ಕೆಜಿ ಚಿನ್ನ ವಶಕ್ಕೆ ಪಡೆದು ಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಕಳ್ಳ ಸಾಗಣ ಆರೋಪದಡಿ ಪ್ರಯಾಣಿಕರೊಬ್ಬರನ್ನು ಬಂಧಿಸಿದ್ದಾರೆ.

ಮಸ್ಕಟ್ ನಿಂದ ಮುಂಬಯಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ನ 9 ಡಬ್ಲ್ಯೂ-539 ವಿಮಾನದಲ್ಲಿ ಒಂದೊಂದು ಕೆಜಿ ತೂಕದ 8 ಚಿನ್ನದ ಬಾರ್ ಗಳಿವೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಸೆಗು ನೈನಾ ಎಂಬ ಪ್ರಯಾಣಿಕನನ್ನು ವಿಚಾರಣೆ ನಡೆಸಿದಾಗ ಬಾಯ್ಬಿಟ್ಟಿದ್ದಾನೆ. ಮುಂಬಯಿಯಿಂದ ಕೊಲ್ಕೋತ್ತಾಗೆ ಸಾಗಿಸಲು ಯೋಜಿಸಲಾಗಿತ್ತು ಎಂದು ತಿಳಿಸಿದ್ದಾನೆ.

Write A Comment