ಕರ್ನಾಟಕ

‘ಜಾಗ್ವಾರ್’ ನಿಖಿಲ್ ಗೌಡ ಅಭಿನಯದ ಸಿನಿಮಾ ಟೈಟಲ್

Pinterest LinkedIn Tumblr

nikil-gowda

ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪುತ್ರ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೊಮ್ಮಗ ನಿಖಿಲ್ ಗೌಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿರೋದು ಹಳೇ ಸುದ್ದಿ. ಹೊಸ ವಿಷಯ ಏನಪ್ಪಾ ಅಂದರೆ ನಿಖಿಲ್ ಗೌಡ ಅಭಿನಯಿಸುತ್ತಿರುವ ಚಿತ್ರದ ಹೆಸರು ಜಾಗ್ವಾರ್.

ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ಜಾಗ್ವಾರ್ ಎಂದು ಶೀರ್ಷಿಕೆ ಇಡಲಾಗಿದೆ,ಈ ಮೆಗಾ ಸಿನಿಮಾ ಮೂರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಏಕಕಾಲದಲ್ಲಿ ನಿಖಿಲ್ ಗೌಡ  ಕನ್ನಡ ತಮಿಳು ಹಾಗೂ ತೆಲುಗು ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಲಿದ್ದಾರೆ. ಅದ್ದೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.

ಆಗಸ್ಟ್‌ನಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಇವಿಷ್ಟು ಸದ್ಯಕ್ಕೆ ನಿಖಿಲ್‌ ಗೌಡ ಸಿನಿಮಾದ ವಿಷಯ. ಆ ಚಿತ್ರದ ನಾಯಕಿ ಯಾರು, ಯಾರೆಲ್ಲಾ ಇರುತ್ತಾರೆ, ಎಲ್ಲೆಲ್ಲಿ, ಎಷ್ಟು ದಿನ ಶೂಟಿಂಗು, ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ ಎಂಬ ಮಾಹಿತಿ ಇನ್ನೂ ಸಸ್ಪೆನ್ಸ್‌.

ಇತ್ತೀಚೆಗಷ್ಟೇ ನಿಖಿಲ್ ಗೌಡ ನಿರ್ಮಾಪಕ ಕೆಸಿಎನ್ ಮೋಹನ್ ಪುತ್ರಿ ಹಾಗೂ ತನ್ನ ಕಾಲೇಜು ಸಹಪಾಠಿ ಸ್ವಾತಿ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Write A Comment