ರಾಷ್ಟ್ರೀಯ

ಹಿಂದೂಗಳಲ್ಲದವರು ದೇವಾಲಯ ಪ್ರವೇಶಕ್ಕೆ ವಿಶೇಷ ಅನುಮತಿ ಪಡೆಯಬೇಕು: ಸೋಮನಾಥ ಟ್ರಸ್ಟ್

Pinterest LinkedIn Tumblr

somanath-temple

ಅಹಮದಾಬಾದ್: ಹಿಂದೂಗಳಲ್ಲದವರು ಇನ್ನು ಮುಂದೆ ಗುಜರಾತ್ ನ ಸೋಮನಾಥ ದೇವಾಲಯ ಪ್ರವೇಶಿಸಲು ವಿಶೇಷ ಅನುಮತಿ ಪಡೆಯಬೇಕು ಎಂದು ಸೋಮನಾಥದೇವಾಲಯ ಟ್ರಸ್ಟ್ ತಿಳಿಸಿದೆ.

ದೇವಾಲಯ ಪ್ರವೇಶಿಸಲು ಕಾರಣ ಹಾಗೂ ವಿವರಗಳನ್ನು ನೀಡಿ ಸ್ಥಳೀಯ ನಾಗರಿಕ ಅಧಿಕಾರಿಗಳಿಂದ ಅನುಮತಿ ಪಡೆಯುವಂತೆ ಟ್ರಸ್ಟ್ ಸೂಚಿಸಿದೆ.

ದಕ್ಷಿಣ ಭಾರತದ ಅನೇಕ ದೇವಾಲಯಗಳಲ್ಲಿ ಇಂಥ ನಿಯಮ ಜಾರಿಯಲ್ಲಿವೆ. ಆದರೆ ಈಗ ಗುಜರಾತ್ ನಲ್ಲಿ ಈ ರೀತಿಯ ನಿಯಮ ಜಾರಿಗೆ ತರಲು ಉದ್ದೇಶಿಸಿರುವುದರಿಂದ ಈ ವಿಷಯ ವಿವಾದ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಆಡ್ವಾಣಿ, ಕೇಶುಬಾಯಿ ಪಟೇಲ್ ಸೇರಿದಂತೆ ಹಲವು ಬಿಜೆಪಿ ನಾಯಕರುಗಳು ಸೋಮನಾಥ ದೇವಾಲಯ ಟ್ರಸ್ಟ್ ನ ಸದಸ್ಯರಾಗಿದ್ದಾರೆ.

ದೇಶದ 12 ಪುರಾತನ ಈಶ್ವರನ ದೇವಾಲಯಗಳಲ್ಲಿ ಗುಜರಾತ್ ನ ಸೋಮನಾಥ ದೇವಾಲಯವೂ ಒಂದಾಗಿದೆ. ಮುಸ್ಲಿಂ ಆಕ್ರಮಣಕಾರರು ದಂಡೆತ್ತಿ ಬಂದು ದೇವಾಲಯವನ್ನು ಧ್ವಂಸಗೊಳಿಸುತ್ತಿದ್ದರು. ಪ್ರತಿ ಭಾರಿಯೂ ಅದೇ ಜಾಗದಲ್ಲಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗುತ್ತಿತ್ತು.

ಈಗ ಇರುವ ದೇವಾಲಯವನ್ನು 5 ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದ್ದು, 1947 ರಿಂದ 1957 ರ ವರೆಗೂ ದೇವಾಲಯ ನಿರ್ಮಾಣ ಮಾಡಲು ಸಮಯ ತೆಗೆದುಕೊಂಡಿತು. ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಈ ದೇವಾಲಯವನ್ನು ಉದ್ಘಾಟಿಸಿದ್ದರು.

1 Comment

  1. ಇದು ದುರದೃಷ್ಟಕರ ನಿರ್ಧಾರ . ಒಂದು ಕಡೆ ನಾವು “ಹಿಂದೂ ಧರ್ಮ ಬಹಳ ವಿಶಾಲವಾದದ್ದು, ಆಳವಾದದ್ದು, ಮುಕ್ತವಾದದ್ದು, ಸರ್ವ ಧರ್ಮ ಸಮಭಾವ” ಇತ್ಯಾದಿ, ಇತ್ಯಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ; ಇನ್ನೊಂದು ಕಡೆ ನಮ್ಮ ದೇವರನ್ನು ಬೇರೆ ಯಾರೂ ನೋಡಬಾರದು , ಪೂಜಿಸಬಾರದು ಎಂದು ಪಕ್ಷಪಾತ ಮಾಡಿ ದೂರ ಇಡುತ್ತೇವೆ ! ಇದು ಯಾವ ರೀತಿಯಲ್ಲಿ ಸರಿ ಎಂದು ನಾವು ಹಿಂದೂಗಳು ಯೋಚಿಸಬೇಕು . ಜೇಸುದಾಸ್ , ಮೊಹಮ್ಮದ್ ರಫಿ , ಬಿಸ್ಮಿಲ್ಲಾ ಖಾನ್ , ಶೇಖ್ ಚಿನ್ನ ಮೌಲಾನ ಸಾಬ್ ಮತ್ತಿತರರು ಹಿಂದೂ ದೇವ ದೇವತೆಗಳ ಬಗ್ಗೆ ಹಾಡಬಹುದು , ಸ್ತುತಿಸಬಹುದು, ಆದರೆ ಅವರು, ಅಂತಹವರು – ಅನ್ಯ ಧರ್ಮೀಯರು – “ನೋಡುವ ಹಾಗಿಲ್ಲ” ! ಛೇ , ಇಂತಹ ಮನೋಸ್ಥಿತಿ ಯನ್ನು ನಾನು ಖಂಡಿಸುತ್ತೇನೆ .

Write A Comment