ಕರ್ನಾಟಕ

ವಿಶ್ವಪ್ರಸಿದ್ಧ 2018ರ ಮಹಾಮಸ್ತಕಾಭಿಷೇಕಕ್ಕೆ ಇಂದಿನಿಂದಲೇ ಚಾಲನೆ

Pinterest LinkedIn Tumblr

Mahamastakabhisheka

ಶ್ರವಣಬೆಳಗೊಳ, ಮೇ 25-ವಿಶ್ವ ವಿಖ್ಯಾತ ಪ್ರವಾಸಿ ಸ್ಥಳ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯ ಶ್ರೀಕ್ಷೇತ್ರ ಶ್ರವಣಬೆಳಗೊಳದ ವಿಂದ್ಯಗಿರಿಯ ಭಗವಾನ್ ಬಾಹುಬಲಿ ಸ್ವಾಮಿಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು 2018ರ ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದೆ

ಎಂದು ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಈ ಕುರಿತು ಮಾತನಾಡಿದ ಅವರು ಗಂಗಾ ಸಾಮ್ರಾಜ್ಯದ ಸೇನಾಧಿಪತಿ ಚಾವುಂಡರಾಯ ಕ್ರಿ.ಶ.981ರಲ್ಲಿ 58.8 ಅಡಿಯ ಬಾಹುಬಲಿ ಮೂರ್ತಿ ಸ್ಥಾಪಿಸಿದ್ದು, ಮೂರ್ತಿ ಸ್ಥಾಪಿನೆಗೊಂಡಾಗಿನಿಂದ 87ನೇ ಮಹಾಭಿಷೇಕ ಇದಾಗಿದೆ. ವಿಶ್ವದ ಮೂಲೆ ಮೂಲೆಗೂ ಇದರ ಉತ್ಸವದ — ಸಾರಬೇಕಿದೆ. ಆದ್ದರಿಂದ ಬೇಗನೆ ಪ್ರಚಾರ ನೀಡುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಚಾಲನೆ ನೀಡುತ್ತಿದ್ದೇವೆ. ಕಾರ್ಯಕ್ರಮದ ಯಶಸ್ವಿಗೆ ರಾಜ್ಯ ಹಾಗೂ ಕೇಂದ್ರ ಸಕ್ರಾವು ಪ್ರಮುಖ ಪಾತ್ರ ವಹಿಸಬೇಕಿದೆ. ನಿಯೋಜಿತ ಮನವಿಯನ್ನು ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುತ್ತಿದೆ ಮತ್ತು ಈ ಮಹೋತ್ಸವಕ್ಕೆ ಪಾಲ್ಗೊಳ್ಳಲು ದೇಶ ವಿದೇಶದ ಜನಗಳು, ಮುನಿಗಳು, ಪ್ರವಾಸಿಗಳು, ಭಿಕ್ಷುಗಳು ಬರುವುದರಿಂದ ಅವರಿಗೆ ಸಮಯ ಸೌಲಭ್ಯ ಒದಗಿಸಲು ಸರಿಯಾಗುತ್ತದೆ.
ದಿಗಂಬರ ಮುನಿಗಳು ಪಾದಯಾತ್ರೆ ಮೂಲಕ ಸಾಕಷ್ಟು ಸಮಯ ಬೇಕಿರುವುದರಿಂದ ಈಗಿನಿಂದಲೇ ಚಾಲನೆ ನೀಡಲಾಗಿದೆ. ರಾಷ್ಟ್ರಪತಿ, ಪ್ರಧಾನಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸಮಿತಿ ವತಿಯಿಂದ ಆಹ್ವಾನಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ಕಾರ್ಯಕ್ರಮದ ಮತ್ತು ಯಶಸ್ವಿಗೆ ಕರ್ನಾಟಕದ ಜನತೆ ಸಹಕರಿಸಬೆಕಿದೆ ಎಂದು ತಿಳಿಸಿದರು.

Write A Comment