ಕರ್ನಾಟಕ

ಐಎಎಸ್ ಅಧಿಕಾರಿ ಡಿ.ಕೆ ರವಿಯದ್ದು ಕೊಲೆಯಲ್ಲ ಆತ್ಮಹತ್ಯೆ: ಸಿಬಿಐ ಪ್ರಾಥಮಿಕ ವರದಿ

Pinterest LinkedIn Tumblr

dk_ravi

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವು ಕೊಲೆಯಲ್ಲ ಅದೊಂದು ಆತ್ಮಹತ್ಯೆ ಎಂದು ಸಿಬಿಐ ತನ್ನ ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.

ಸಿಬಿಐ ನ ಪ್ರಾಥಮಿಕ ವರಿದ ಬಹಿರಂಗವಾಗಿದ್ದು, ಅದರಲ್ಲಿ ಆತ್ಮಹತ್ಯೆಗೆ ಕಾರಣವಾದ ಅಂಶಗಳ ವಿಶ್ಲೇಷಣೆ ಮಾಡಲಾಗಿದೆ. ಸಿಬಿಐ ತನ್ನ ವರದಿಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು.

ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಲು ಡಿ.ಕೆ ರವಿ ಯತ್ನಿಸಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.  ರವಿ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಆರ್ ಅಂಡ್ ಎಚ್ ಪ್ರಾಪರ್ಟೀಸ್ ಹೆಸರಿನಲ್ಲಿ ರವಿ ಮತ್ತು ಅವರ ಸ್ನೇಹಿತ ಹರಿ ಸೇರಿಕೊಂಡು ಚಿಕ್ಕಬಳ್ಳಾಪುರದಲ್ಲಿ 50 ಎಕರೆ ಜಮೀನು ಖರೀದಿ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಹಲವರ ಬಳಿ ಆರ್ಥಿಕ ಸಹಾಯ ಕೂಡ ಕೇಳಿದ್ದರು ಎಂದು ಸಿಬಿಐ ಅಧಿಕಾರಿಗಳ ವಿಚಾರಣೆ ವೇಳೆ ಹರಿ ತಿಳಿಸಿದ್ದಾರೆ.

ಈಗಾಗಲೇ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ರವಿ, ಅವರ ಬ್ಯಾಚ್ ಮೇಟ್ ವೊಬ್ಬರ ಪತಿಯಿಂದ ಹಣ ಕೂಡ ಪಡೆದಿದ್ದರು. ನಿರೀಕ್ಷೆಯಂತೆ ರವಿ ಅವರಿಗೆ 50 ಎಕರೆ ಜಾಗ ಖರೀದಿ ಮಾಡಲು ಸಾಧ್ಯವಾಗಿರಲಿಲ್ಲ. ಉದ್ಯಮದಲ್ಲಿ ಹಣ ಹೂಡಿರುವವರು ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿಬಿಐ ಅಂತಿಮ ವರದಿ ಏನು ಹೇಳುತ್ತದೆ ಎನ್ನುವುದು ಸದ್ಯದ ಕೂತೂಹಲ.

Write A Comment