ಚಾಮರಾಜನಗರ, ಮೇ 17: ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದವನನ್ನ್ನು ಅದೇ ರೈಲಿನ ಚಾಲಕ ರಕ್ಷಣೆ ಮಾಡಿ ರುವ ಘಟನೆ ನಿನ್ನೆ ಸಂಜೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಅಂಕಶೆಟ್ಟಿಪುರದ ಮಹದೇವು (45) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದವನಾಗಿದ್ದು, ಈತ ಜೀವನದಲ್ಲಿ ಜಿಗುಪ್ಸೆ ಹೊಂದಿ ಬಹುಶಃ ಕುಡಿದು ರೈಲಿಗೆ ಸಿಲುಕಲು ಹೋಗಿ ರೈಲಿಗೆ ಗುದ್ದಿ ಅದೃಷ್ಟಾವತ್ ಜವರಾಯನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾನೆ.
ಸಂಜೆ 6 ಗಂಟೆ ಸಮಯದಲ್ಲಿ ರೈಲು ಚಾಮರಾಜನಗರದಿಂದ ಮೈಸೂರಿಗೆ ತೆರಳುತ್ತಿದ್ದು ಅನತಿ ( 2 ಕಿ.ಮೀ) ದೂರದಲ್ಲಿ ರೈಲಿಗೆ ಡಿಕ್ಕಿ ಹೊಡೆದು ಬಿದ್ದುದರ ಪರಿಣಾಮ ಗಂಭೀರ ಸ್ವರೂಪದ ಗಾಯಗಳಾದವು. ರೈಲು ಚಾಲಕ ಇದನ್ನೆಲ್ಲ ಮನಗಂಡು ಅದೇ ರೈಲಿನಲ್ಲಿ ವಾಪಸ್ (ಚಾಮರಾಜ ನಗರ) ಕರೆ ತರುವಷ್ಟರಲ್ಲಿ 108 ಕ್ಕೆ ಕರೆ ಮಾಡಿ ಚಾಮರಾಜನಗರದ ರೈಲು ನಿಲ್ದಾಣದಲ್ಲಿ ಸಿದ್ದವಾಗಿದ್ದ ಆಂಬ್ಯುಲೆನ್ಸ್‌ಗೆ ಹಾಕಿ ಸರ್ಕಾರಿ ಜಿಲ್ಲಾಸ್ಪತ್ರೆ ದಾಖಲು ಮಾಡಲು ಸೂಚಿಸಿ ಮತ್ತೆ ಮೈಸೂರಿನತ್ತ ಪ್ರಯಾಣ ಬೆಳೆಸಿತು. ರೈಲು ಚಾಲಕನ ಸಮಯ ಪ್ರe ಹಾಗೂ ಮಾನವೀಯತೆಯನ್ನು ಪ್ರಯಾಣಿಕರು ಮೆಚ್ಚಿ ಸಂತಸ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ರೈಲ್ವೇ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.