ಕೆ.ಆರ್.ಪುರ, ಮೇ 15- ಚುನಾವಣೆ ಹತ್ತಿರ ಬರುತ್ತಿದೆ. ಬಾಲ ಬಿಚ್ಚಿದರೆ ನಿಮ್ಮ ಬಾಲ ಕಟ್ಟಾಗುತ್ತೇ ಹುಷಾರ್…. ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ನೇತೃತ್ವದ ತಂಡ ಇಂದು ಬೆಳಗ್ಗೆ ಕೆ.ಆರ್.ಪುರಂ, ಸಂಜಯ್‌ನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ರೌಡಿ ಶೀಟರ್ಸ್ಗ ಹಾಗೂ ಆರೋಪಿಗಳ ಮನೆಗೆ ತೆರಳಿ ಖಡಕ್ ಎಚ್ಚರಿಕೆ ನೀಡಿದ ಪರಿ ಇದು. ಪೊಲೀಸರ ಮೇಲೆ ಜನರಿಗೆ ನಂಬಿಕೆ ಇದೆ. ಇದೇ ನಂಬಿಕೆ ಉಳಿಸಿಕೊಂಡು ಹೋಗಬೇಕಾದರೆ ಈ ಭಾಗದಲ್ಲಿ ಯಾವುದೇ ಅಪರಾಧ ನಡೆಯಬಾರದು.
ಈ ಹಿನ್ನೆಲೆ ರೌಡಿ ಶೀಟರಸ್ರ ಗಳಿಗೆ ಎಚ್ಚರಿಕೆ ನೀಡಲಾಗಿದೆ. ಜನರು ಯಾವುದೇ ಭಯ ಬೀಳದೆ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಬಹುದು ಎಂದು ಹೇಳಿದರು. ಸರ ಕಳ್ಳತನ, ರಾಬರಿ, ಮನೆ ಕಳವು ಸೇರಿದಂತೆ ಅಪರಾಧಗಳಲ್ಲಿ ಹೆಸರು ಇರುವವರ ಏರಿಯಾಗಳಿಗೆ ಭೇಟಿ ನೀಡಿದ್ದು, ಚುನಾವಣೆ ಮುಗಿಯುವವರೆಗೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ಮೇಲೆ ನಿಗಾ ಇಡುವಂತೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ತಿಳಿಸಲಾಗಿದೆ ಎಂದರು.
ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸುವ ಹಿನ್ನೆಲೆಯಿಂದ ಖುದ್ದಾಗಿ ರೌಡಿ ಶೀಟರ್‌ಗಳ ಮನೆಗಳಿಗೆ ಭೇಟಿ ನೀಡಿರುವುದಾಗಿ ಹೇಳಿದ ಅವರು, ನಿಮಗೆ ಯಾವುದೇ ತೊಂದರೆಯಾದಲ್ಲಿ ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಡಿಸಿಪಿ ಸತೀಶ್‌ಕುಮಾರ್, ಎಸಿಪಿ ಭದ್ರಿನಾಥ್, ಇನ್ಸ್‌ಪೆಕ್ಟರ್‌ಗಳಾದ ಸಂಜೀವರಾಯಪ್ಪ, ಮೋಹನ್‌ಕುಮಾರ್, ರಮೇಶ್, ಶ್ರೀನಿವಾಸ್, ಸಬ್‌ಇನ್ಸ್‌ಪೆಕ್ಟರ್‌ಗಳಾದ ಮೆಲ್ವಿನ್ ಫ್ರಾನ್ಸಿಸ್, ಬಾರ್ಕಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
