ಕರ್ನಾಟಕ

ಮಹಾತ್ಮ ಗಾಂಧೀಜಿ ಬೆಂಗಳೂರಿಗೆ ಕಾಲಿಟ್ಟು ನೂರು ವರ್ಷ

Pinterest LinkedIn Tumblr

07-1431007784-gandhi

ಬೆಂಗಳೂರು, ಮೇ. 7 : ಮಹಾತ್ಮ ಗಾಂಧೀಜಿ ಬೆಂಗಳೂರಿಗೆ ಕಾಲಿಟ್ಟು ಮೇ 8 ಕ್ಕೆ ನೂರು ವರ್ಷಗಳು ಸಂದಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಗಾಂಧೀಜಿ ಅಂಚೆ ಚೀಟಿ ಬಿಡುಗಡೆ, ಛಾಯಾಚಿತ್ರ ಪ್ರದರ್ಶನ, ಪಾದಯಾತ್ರೆ, ಭಜನೆ, ಪುಸ್ತಕ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಈ ಸವಿನೆನಪಿನ ಅಂಗವಾಗಿ ದಿನವಿಡೀ ಹಮ್ಮಿಕೊಳ್ಳಲಾಗಿದೆ

ಬೆಳಗ್ಗೆ 9 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪಾದಯಾತ್ರೆ ಹೊರಡಲಿದೆ. 10 ಗಂಟೆಗೆ ಕುಮಾರಕೃಪಾ ರಸ್ತೆಯ ಗಂಧಿ ಭವನದಲ್ಲಿ ಅಪರೂಪದ ಛಾಯಾಚಿತ್ರ ಪ್ರದರರ್ಶನಕ್ಕೆ ಸಚಿವ ರೋಷನ್ ಬೇಗ್ ಚಾಲನೆ ನೀಡಲಿದ್ದಾರೆ. 11 ಗಂಟೆಗೆ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗಾಂಧೀಜಿಯವರ ಮೊದಲ ಭೇಟಿಯ ನೆನಪಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Write A Comment