ಅಂತರಾಷ್ಟ್ರೀಯ

ಮೆದುಳು ನಿಷ್ಕ್ರಿಯಗೊಂಡರೂ ಮಗುವಿಗೆ ಜನ್ಮ ನೀಡಿದಳು

Pinterest LinkedIn Tumblr

ci

ವಾಷಿಂಗ್ಟನ್: ಎರಡು ತಿಂಗಳಿಂದ ಮೆದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯ ಮೇಲೆ ಮಲಗಿದ್ದ 22 ವರ್ಷದ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿ ಪ್ರಾಣ ತ್ಯಜಿಸಿದ್ದಾಳೆ. ಈ ಅಚ್ಚರಿಯನ್ನು ಸಾಧ್ಯವಾಗಿಸಿದ್ದು  ವೈದ್ಯರ ಸತತ ಪರಿಶ್ರಮ.

ಅಮೇರಿಕದ ನೆಬ್ರಸ್ಕಾ ನಿವಾಸಿಯಾಗಿರುವ 22 ವರ್ಷದ ಕಾರ್ಲಾ ಪೆರೆಜ್ ಪುಟ್ಟ ಹುಡುಗಿಯಾಗಿದ್ದಾಗಿನಿಂದಲೇ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಳು. ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಅವಳು ಮಗುವಿಗೆ ಜನ್ಮ ನೀಡುವುದು ಅಸಾಧ್ಯ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರು. ಆದರೆ ಮೂರು ವರ್ಷಗಳ ಹಿಂದೆ ಕಾರ್ಲಾ ಯಾವುದೇ ತೊಡಕಿಲ್ಲದೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು.

ಮತ್ತೊಂದು ಮಗುವನ್ನು ಬಯಸಿದ್ದ ಕಾರ್ಲಾ ಸಂಧಿವಾತಕ್ಕೆ ತೆಗೆದುಕೊಳ್ಳುತ್ತಿದ್ದ ಔಷಧವನ್ನು ನಿಲ್ಲಿಸಿ ಗರ್ಭ ಧರಿಸಿದ್ದರು. ಆದರೆ 6 ತಿಂಗಳ ಗರ್ಭಿಣಿಯಾದಾಗ  ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದರಡು ತಿಂಗಳ ಹಿಂದೆ ಅವರ ಮೆದುಳು ಸಹ ನಿಷ್ಕ್ರಿಯಗೊಂಡಿತ್ತು. ಆದರೆ ಆಕೆಯ ಮಗುವನ್ನು ಉಳಿಸಲು ನಿರ್ಧರಿಸಿದ ವೈದ್ಯರು ವೆಂಟಿಲೇಟರ್ ಸಹಾಯದಿಂದ ಆಕೆಯ ಜೀವಿತಾವಧಿ ವಿಸ್ತರಿಸಲು ಮುಂದಾದರು. ಮೆಥೋಡಿಸ್ಟ್ ಹೆಲ್ತ್ ಸಿಸ್ಟ್‌ಮ್‌ನ 100 ವೈದ್ಯರ ತಂಡ  ಆಕೆಯನ್ನು ವೆಂಟಿಲೇಟರ್‌ನಲ್ಲಿಟ್ಟು ಬದುಕಿಸಿದರು.

30 ವಾರಗಳ ನಂತರ ಕಾರ್ಲಾ ಮಗುವನ್ನು ಸಿಸೇರಿಯನ್ ಮೂಲಕ ಹೊರಕ್ಕೆ ತೆಗೆಯಲಾಯಿತು. ಹುಟ್ಟುವಾಗ ಕಡಿಮೆ ತೂಕವಿದ್ದ ಗಂಡು ಮಗು ಈಗ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ. ಕಾರ್ಲಾಳ ತಾಯಿ ಮಗುವನ್ನು ನೋಡಿಕೊಳ್ಳುತ್ತಿದ್ದು, ಅದಕ್ಕೆ ಏಂಜೆಲ್ ಎಂದು ಹೆಸರಿಡಲಾಗಿದೆ.

ಕಾರ್ಲಾಳ ಕಿಡ್ನಿ, ಹೃದಯ, ಲೀವರ್‌ನ್ನು ದಾನ ಮಾಡಲಾಗಿದೆ.

Write A Comment