ಕರ್ನಾಟಕ

ಗ್ರಾಮ ಪಂಚಾಯತ್ ಚುನಾವಣೆಗೆ ಮಹೂರ್ತ ಫಿಕ್ಸ್: ಮೇ 29, ಜೂನ್ 2ರಂದು ಮತದಾನ

Pinterest LinkedIn Tumblr

Sri

ಬೆಂಗಳೂರು,ಮೇ 5: ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಮತ್ತೊಂದು ಅಗ್ನಿಪರೀಕ್ಷೆ ಎಂದೇ ಹೇಳಲಾಗಿರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಮುಹೂರ್ತ ನಿಗಧಿಯಾಗಿದೆ. ರಾಜ್ಯದ ಒಟ್ಟು 5844 ಗ್ರಾಮ ಪಂಚಾಯ್ತಿಗಳಿಗೆ ಮೇ 29 ಮತ್ತು ಜೂನ್ 2ರಂದು ಎರಡು ಹಂತದ ಮತದಾನ ನಡೆಯಲಿದ್ದು, ಜೂ.5ರಂದು ಮತಗಳ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಕಡ್ಡಾಯ ಮತದಾನ ಜಾರಿಯಾಗಿದೆ.

ಅಲ್ಲದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ 5 ವರ್ಷಕ್ಕೆ ನಿಗಧಿಯಾಗಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ದಿನಾಂಕ ಪ್ರಕಟಿಸಿದ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸ ಚಾರಿ ಅವರು, ಅವಧಿ ಮುಗಿಯದಿರುವ 220 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯುವುದಿಲ್ಲ ಎಂದು ತಿಳಿಸಿದರು.

439 ಹೊಸ ಗ್ರಾಮ ಪಂಚಾಯ್ತಿ ಸೇರಿದಂತೆ ಒಟ್ಟು 5844 ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಮೇ 29 ಮತ್ತು ಜೂ.2ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮೇ 10ರಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಮೊದಲನೇ ಹಂತದ ಚುನಾವಣೆಗೆ ಮೇ 11ರಂದು ಅಧಿಸೂಚನೆ ಪ್ರಕಟವಾಗಲಿದೆ. ಮೇ 19ರಮದು ನಾಮಪತ್ರಗಳ ಪರಿಶೀಲನೆ, 21 ನಾಮಪತ್ರ ಹಿಂಪಡೆಗೆ ಕೊನೆ ದಿನ. 29ಕ್ಕೆ ಚುನಾವಣೆ.

2ನೇ ಹಂತ ಚುನಾವಣೆ ಮೇ 15ಕ್ಕೆ ಅಧಿಸೂಚನೆ ಪ್ರಕಟ, ಮೇ 22 ನಾಮಪತ್ರ ಸಲ್ಲಿಕೆಗೆ ಕೊನೆ ದಿನದ 23ರಂದು ನಾಮಪತ್ರ ಪರಿಶೀಲನೆ 25 ನಾಮಪತ್ರ ಹಿಂಪಡೆಯಲು ಕೊನೆ ದಿನ. ಜೂ.2ಕ್ಕೆ ಚುನಾವಣೆ ನಡೆಯಲಿದೆ.

Write A Comment