ಕರ್ನಾಟಕ

ಇದು ಪೊಲೀಸ್ ಜೀಪು.. ತಳ್ಳು-ನೂಕು ಐಸಾ..

Pinterest LinkedIn Tumblr

Police-vehicle

ಬೆಂಗಳೂರು, ಮೇ 4- ಕಾನೂನು ಸುವ್ಯವಸ್ಥೆ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆ ಆಧುನಿಕರಣಕ್ಕೆ ಎಷ್ಟೇ ಕೋಟಿಗಳಾದರೂ ಹಣ ನೀಡಲು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಎಲ್ಲಾ ಕಾರ್ಯಕ್ರಮಗಳಲ್ಲೂ ಹೇಳುತ್ತಿರುತ್ತಾರೆ. ಇಲ್ಲಿ ನೋಡಿ ದಿನದ 24 ಗಂಟೆಯೂ ಗಸ್ತು ತಿರುಗಿ ಅಪರಾಧಿಗಳ ಬೆನ್ನು ಹತ್ತಬೇಕಾದ ಹೊಯ್ಸಳ ವಾಹನ ತಳ್ಳು-ನೂಕು ಐಸಾ ಎಂದು ನಡು ರಸ್ತೆಯಲ್ಲಿ ಕೆಟ್ಟುನಿಂತಿದೆ. ನಗರ ಪೊಲೀಸರಿಗೆ ಒದಗಿಸಿರುವ ಹೊಯ್ಸಳ ವಾಹನಗಳು ಬಹಳ ಹಳೆಯವಾಗಿವೆ.

ಒಮ್ಮೆ ನಿಲ್ಲಿಸಿದರೆ ಮತ್ತೆ ಸ್ಟಾರ್ಟ್ ಆಗುವುದೇ ಇಲ್ಲ. ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಈ ಡಬ್ಬಾ ಜಿಪ್‌ಗಳನ್ನು  ಖಾಕಿಧಾರಿಗಳು ತಳ್ಳಿ-ನೂಕಿ ಸುಸ್ತಾಗುತ್ತಿದ್ದಾರೆ. ಮೊನ್ನೆ ಕಾರ್ಮಿಕ ಜಯಂತಿ ಯಂದು ಕೆಪಿಸಿಸಿ ಕಚೇರಿ ಹಿಂಬಾಗ ಕಾರ್ಯಕ್ರಮ ಏರ್ಪಾಡಿಸಲಾಗಿತ್ತು.

ಅಲ್ಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ ಎಂಬ ಸುದ್ದಿಯಿತ್ತು. ಕ್ವೀನ್ಸ್ ರಸ್ತೆಯುದ್ದಕ್ಕೂ ಪೊಲೀಸರು ಹೆಜ್ಜೆ ಹೆಜ್ಜೆಗೂ ಕಾವಲು ನಿಂತಿದ್ದರು. ಆದರೆ ಮುಖ್ಯಮಂತ್ರಿ ಬರುವುದಿಲ್ಲ ಎಂಬುದು ಖಚಿತವಾಯಿತು. ಕಾವಲಿಗೆಂದು ಅಲ್ಲಿಗೆ ಬಂದಿದ್ದ ಕೆಲ ಪೊಲೀಸರು ಜಾಗ ಖಾಲಿ ಮಾಡಿದರು. ಚಿತ್ರದಲ್ಲಿರುವ ಈ ಹೊಯ್ಸಳ ವಾಹನದ ಸಿಬ್ಬಂದಿಗಳು ಹೊರಡಬೇಕು ಎನ್ನುವಾಗ ಜೀಪು ಮುಷ್ಕರ ಆರಂಭಿಸಿತು. ಎಷ್ಟೇ ಕೀ ತಿರುಗಿಸಿದರು ಒತ್ತಿದರೂ ಸ್ಟಾರ್ಟ್ ಆಗಲೇ ಇಲ್ಲ. ಪೊಲೀಸರು ಜೀಪು ನೂಕಲು ಮುಂದಾದರು. ಆದರೆ, ಕಾರ್ಯಕ್ರಮಕ್ಕೆ ಬಂದಿದ್ದ ಜನರ ಮುಂದೆ ನಗೆಪಾಟಲಿಗೆ ಈಡಾಗಬಾರದು ಎಂಬ ಕಾರಣಕ್ಕೆ ಪೊಲೀಸ್ ಸಿಬ್ಬಂದಿಗಳು ಕೆಲ ಕಾಲ ಸುಮ್ಮನಾದರು. ಕಾರ್ಯಕ್ರಮ ಮುಗಿದ ಬಳಿಕ ಜನ ಖಾಲಿಯಾದಾಗ ಅಲ್ಲಿಯೇ ಕಾವಲಿಗೆ ನಿಂತಿದ್ದ ಕೆಎಸ್‌ಆರ್‌ಪಿ ಸಿಬ್ಬಂದಿಗಳ ನೆರವಿನಲ್ಲಿ ಹೊಯ್ಸಳ ಪೊಲೀಸರು ಜಿಪ್ ನೂಕಿಸಿಕೊಂಡರು. ಪಾಪ ತಳ್ಳಲು ಹೊದ ಸಿಬ್ಬಂದಿಗೆ ಜಿಪ್ ಕ್ವಿಂಟಾಲ್‌ಗಟ್ಟಲೆ ಕಪ್ಪು ಹೊಗೆ ಉಗುಳಿ ಬುರ್ರೆಂದು ಮುಂದೆ ಹೊಯಿತು.

ಪೊಲೀಸರಿಗೆ ನೀಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾಲ್ಕು ತಿಂಗಳಿನಿಂದಲೂ ಪೊಲೀಸರಿಗೆ ಅಕ್ಕಿ ನೀಡಿಲ್ಲ. ಇಲ್ಲಿ ನೋಡಿದರೆ ಕಿತ್ತು ಹೋಗಿರುವ ಜೀಪ್‌ಗಳಿವೆ. ಇವುಗಳನ್ನು ಇಟ್ಟುಕೊಂಡು ಕಳ್ಳರನ್ನು ಹಿಡಿಯುವುದು ಹೇಗೆ ಸರ್ ಜೀಪ್ ತಳ್ಳಿ ಬಂದ ಪೊಲೀಸ್ ಸಿಬ್ಬಂದಿಯೊಬ್ಬರು ಗೊಣಗಿಕೊಂಡರು.
-ಈ ಸಂಜೆ

Write A Comment