ಅಂತರಾಷ್ಟ್ರೀಯ

ಮಿಸ್ಟರ್, ಮಿಸೆಸ್‌ನಂತೆ ತೃತೀಯ ಲಿಂಗಿಗಳಿಗೆ Mx

Pinterest LinkedIn Tumblr

mx

ಲಂಡನ್: ಪುರುಷರಿಗೆ ಮಿಸ್ಟರ್ (Mr.), ಕನ್ಯೆಯರಿಗೆ ಮಿಸ್ (Ms) ಅಥವಾ ವಿವಾಹಿತ ಸ್ತ್ರೀಯರಿಗೆ ಮಿಸೆಸ್ (Mrs.) ಅಂತೆಲ್ಲಾ ಹೇಳುತ್ತೇವೆ. ಆದರೆ ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂದು ಗುರುತಿಸಿಕೊಳ್ಳುವ ಅಥವಾ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಿ ಗುರುತಿಸಿಕೊಳ್ಳದ ತೃತೀಯ ಲಿಂಗಿಗಳಿಗೆ ಏನೆಂದು ಕರೆಯಬಹುದೆಂಬ ಗೊಂದಲಕ್ಕೆ ಆಕ್ಸ್‌ಫರ್ಡ್ ಡಿಕ್ಷನರಿ ತೆರೆ ಎಳೆಯುತ್ತಿದೆ. ಅವರಿಗೆ Mx ಎಂಬ ಪದನಾಮ ನೀಡಲಾಗಿದೆ.

ಬ್ರಿಟನ್‌ನಲ್ಲಿ ಅಧಿಕೃತ ದಾಖಲೆಗಳಲ್ಲಿ ಎರಡು ವರ್ಷಗಳ ಹಿಂದಿನಿಂದಲೇ ಸದ್ದಿಲ್ಲದೆ ಡೇಟಾಬೇಸ್‌ನಲ್ಲಿ ಈ ಗೌರವ ಸಂಬೋಧನೆಯ ಪದವನ್ನು ಸೇರಿಸಲಾಗಿತ್ತು. ಇದೀಗ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನ ಮುಂದಿನ ಆವೃತ್ತಿಯಲ್ಲಿ ಈ ಗೌರವ ನಾಮ ಸೇರಿಸಲಾಗುತ್ತದೆ.

ಬ್ರಿಟನ್‌ನ ಸರಕಾರಿ ಇಲಾಖೆಗಳು, ಮಂಡಳಿಗಳು, ಬ್ಯಾಂಕ್‌ಗಳು, ವಿವಿಗಳು, ರಾಜಮನೆತನ ಮೇಲ್ ಸೇವೆಗಳು, ಚಾಲನಾ ಪರವಾನಗಿ… ಮುಂತಾದ ಕ್ಷೇತ್ರಗಳಲ್ಲಿ ಇದೀಗ Mx ಸ್ವೀಕೃತವಾಗಿದೆ ಎಂದು ಸಂಡೇ ಮೇಲ್ ವರದಿ ಮಾಡಿದೆ.

ಬದಲಾಗುತ್ತಿರುವ ಸಮಾಜ ಮತ್ತು ಅದರ ಮಾನಸಿಕ ಸ್ಥಿತಿಗತಿಗೆ ತಕ್ಕಂತೆ ಆಕ್ಸ್‌ಫರ್ಡ್ ಡಿಕ್ಷನರಿ ಜತೆಗೆ ಆಂಗ್ಲ ಭಾಷೆಯೂ ಬದಲಾಗುತ್ತಿದೆ. ಕೇಂಬ್ರಿಜ್, ಬರ್ಮಿಂಗ್‌ಹ್ಯಾಂ ಮತ್ತು ಪೋರ್ಟ್ಸ್‌ಮೌತ್ ವಿವಿಗಳು, ವಿವಿ ನೇಮಕಾತಿ ಸೇವೆ ಯುಕಾಸ್ ಕೂಡ Mx ಅನ್ನು ಬಳಸುತ್ತಿವೆ.
-ವಿಜಯ ಕನಾಱಟಕ

Write A Comment