ಅಂತರಾಷ್ಟ್ರೀಯ

ಮತ್ತೆ ಕಂಪಿಸಿದ ನೇಪಾಳ ; ಪ್ರಾಣ ಭೀತಿಯಲ್ಲಿ ಜನತೆ

Pinterest LinkedIn Tumblr

Nepal-Earthquake-again

ಕಠ್ಮಂಡು,ಮೇ 4- ಮೊದಲೇ ಹೆದರಿದವರ ಮೇಲೆ ಹಾವು ಬಿಟ್ಟಂತೆ ಕಳೆದ ವಾರದ ಭೂಕಂಪದಿಂದ ತತ್ತರಿಸಿ ಹೋಗಿರುವ ನೇಪಾಳದಲ್ಲಿ ಇಂದು ಮುಂಜಾನೆ ಮತ್ತೆ ಭೂಮಿ ನಡುಗಿದ್ದು, ಜನತೆ ಪ್ರಾಣಭೀತಿಯಿಂದ ಕಂಗಲಾಗಿದ್ದಾರೆ. ಕಂಪನದ ತೀವ್ರತೆ 4.6ರಷ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಎರಡು ದಿನಗಳ ಹಿಂದಷ್ಟೆ  ಕೊಂಚ ಧೈರ್ಯ ತಂದುಕೊಂಡು, ಅಳಿದುಳಿದ ತಮ್ಮ ಮನೆಗಳನ್ನು ಪ್ರವೇಶಿಸಲು ಮುಂದಾಗಿದ್ದ ನೇಪಾಳಿಗಳು ಇಂದಿನ ಭೂಕಂಪನದಿಂದ ಮತ್ತೆ ಎಲ್ಲೆಂದರಲ್ಲಿ ಎಲ್ಲಾ ಬಿಟ್ಟು ಮನೆಗಳಿಂದ ರಸ್ತೆಗೆ ಓಡಿ ಬಂದಿದ್ದಾರೆ.

ನ್ಯೂಜಿಲೆಂಡ್‌ನಲ್ಲೂ ಕಂಪನ: ಇಂದು ಬೆಳಗ್ಗೆ ನ್ಯೂಜಿಲೆಂಡ್‌ನಲ್ಲಿ ಹಲವೆಡೆ ಭೂಕಂಪನ ಸಂಭವಿಸಿದ್ದು ಜನ ಭಯಭೀತರಾಗಿದ್ದಾರೆ. ಭೂಮಿಯ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6ರಷ್ಟಿತ್ತು ಎಂದು ಸರ್ಕಾರದ ಮೂಲಗಳು ಹೇಳಿವೆ.  ನ್ಯೂಜಿಲೆಂಡ್ ರಾಜಧಾನಿ ವೆಲ್ಲಿಂಗ್ಟನ್‌ನಲ್ಲೂ ಭೂಮಿ ಅಲ್ಲಲ್ಲಿ ನಡುಗಿದ್ದು, ನಾಗರಿಕರನ್ನು ಮನೆಗಳಿಂದ ತೆರವುಗೊಳಿಸಲಾಗಿದೆ. ಆದರೆ ಸದ್ಯಕ್ಕೆ ಯಾವುದೇ ಸಾವುನೋವಿನ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಎಂಥದೇ ಸಂದರ್ಭ ನಿಭಾಯಿಸಲು ಸೇನೆ ಸನ್ನದ್ದವಾಗಿದೆ ಎಂದು ಸರ್ಕಾರ ಹೇಳಿದೆ.
-ಈ ಸಂಜೆ

Write A Comment