ಕರ್ನಾಟಕ

ಕಾರ್ಯಕಾರಣಿಯಲ್ಲೂ ಮುನಿಸು : ಮಾತನಾಡಿಲ್ಲ ಮೋದಿ-ಅಡ್ವಾಣಿ

Pinterest LinkedIn Tumblr

Modi-Advani

ಬೆಂಗಳೂರು, ಏ.೪- ದೆಹಲಿ ವಿಧಾನಸಭಾ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಗ್ಗಿದೆ ಎಂದು ಬಯಸಿದವರಿಗೆ ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದು , ಭಾಜಪದ ಪ್ರಮುಖ ನಾಯಕರು ಇನ್ನು ಮೋದಿ ಜಪದಲ್ಲಿರುವುದು ಬೆಳಕಿಗೆ ಬಂದಿದೆ. ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಮೋದಿ ಅವರು ಗಂಭೀರವಾಗಿ ಕಡೆಗಣಿಸಿದ್ದಾರೆ ಎಂಬುದು ಹೊಸ ಸುದ್ದಿ ಏನಲ್ಲ…

ನಗರಕ್ಕೆ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅಡ್ವಾಣಿ ಅವರನ್ನು ಮೋದಿ ಅವರು ಸೌಜನ್ಯಕ್ಕೂ ಭೇಟಿ ಮಾಡಿ ಮಾತನಾಡಿಸಲಿಲ್ಲ ಎಂಬ ವಿಷಯ ಇದೀಗ ದೊಡ್ಡ ಸುದ್ದಿಯಾಗಿದೆ.

ಮೊನ್ನೆ ರಾತ್ರಿ ಅಶೋಕ ಹೊಟೇಲ್‌ಗೆ ಅಡ್ವಾಣಿ ಆಗಮಿಸುತ್ತಿದ್ದಂತೆ ಮೋದಿ ಸದ್ದಿಲ್ಲದೆ ರಾಜಭವನಕ್ಕೆ ತೆರಳಿದರು. ಅಡ್ವಾಣಿ ಅವರನ್ನು ಆಹ್ವಾನಿಸಲು ರಾಜ್ಯ ಘಟಕದ ಹಿರಿಯ ಮುಖಂಡರು ಯಾರೂ ಇರಲಿಲ್ಲ. ಎಲ್ಲರೂ ಮೋದಿ ಅವರಿಗೆ ಛತ್ರಿ-ಚಾಮರ ಹಿಡಿದು ಸೇವೆಗೆ ನಿಂತಿದ್ದರು. ಹೀಗೆಂದ ಮಾತ್ರಕ್ಕೆ ಈ ನಾಯಕರೆಲ್ಲ ಪ್ರಧಾನಿಗೆ ನಿಷ್ಠರು ಎಂದು ಭಾವಿಸಬೇಕಿಲ್ಲ. ಮತ್ತಷ್ಟು ಕಾಲ ಮೋದಿ ಮೋಡಿಯನ್ನು ಪರಿಗಣಿಸಿ ಇವರೆಲ್ಲರ ನಿಷ್ಠೆ ಬದಲಾಗಲಿದೆ. ಗಾಳಿ ಬಂದ ಕಡೆ ತೂರಿಕೊಳ್ಳುವ ನಾಯಕರು ಎಲ್ಲಾ ಪಕ್ಷಗಳಲ್ಲೂ ಇರುವಂತೆಯೇ ಬಿಜೆಪಿಯಲ್ಲೂ ಇದ್ದಾರೆ. ಹಾಗಾಗಿ ಇಟ್ಟಿಗೆ ಹೊತ್ತು ರಾಷ್ಟ್ರಾದ್ಯಂತ ರಥಯಾತ್ರೆ ನಡೆಸಿ ಪಕ್ಷವನ್ನು ಕಟ್ಟಿದ ಭೀಷ್ಮ ಅಡ್ವಾಣಿ ತಮ್ಮ ಶಿಷ್ಯನಿಂದಲೇ ಈ ಮಟ್ಟದಲ್ಲಿ ಮೂಲೆಗುಂಪಾಗುತ್ತಿರಲಿಲ್ಲ.

ಒಟ್ಟಾರೆ ನಗರದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮತ್ತು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ರ್ಯಾ ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮಿಂಚಿದ್ದು , ಅವರ ಆರಾಧನೆ ಮುಂದುವರೆದಿದೆ.

Write A Comment