ಕರ್ನಾಟಕ

ಶೂಟೌಟ್ ಪ್ರಕರಣ : ಸರ್ಕಾರದ ವೆಚ್ಚದಲ್ಲೇ ಸಿರಿಷಾಳಿಗೆ ಚಿಕಿತ್ಸೆ

Pinterest LinkedIn Tumblr

sirisha

ಬೆಂಗಳೂರು, ಏ.೩- ಪ್ರಗತಿ ಹಾಸ್ಟೇಲ್‌ನಲ್ಲಿ ಅಟೆಂಡರ್ ಮಹೇಶನ ಗುಂಡೇಟಿನಿಂದ ಗಾಯಗೊಂಡಿರುವ ವಿದ್ಯಾರ್ಥಿನಿ ಸಿರಿಷಾಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಗುಂಡೆಟಿನಿಂದ ಸಿರಿಷಾಳ ಮೂಗಿನ ಹಾಗೂ ಮೆಲ್ದುಟಿ ಭಾಗಕ್ಕೆ ಗಾಯವಾಗಿದೆ. ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಈಗ ಆಕೆಯ ಆರೋಗ್ಯ ಸ್ದಿತಿ ಚೇತರಿಸಿಕೊಳ್ಳುತ್ತಿದೆ. ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ ಎಂದು ತಿಳಿಸಿದ್ದಾರೆ.

* ಶಿರಿಷಾ ಆರೋಗ್ಯ ವಿಚಾರಿಸಿದ ಉಮಾಶ್ರೀ
ಬೆಂಗಳೂರು, ಏ.3-ಪ್ರಗತಿ ಕಾಲೇಜಿನಲ್ಲಿ ಮಾ.31ರಂದು ನಡೆದ ಶೂಟೌಟ್ ಪ್ರಕರಣದಲ್ಲಿ ಗುಂಡೇಟಿನಿಂದ ಗಾಯಗೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಶಿರಿಷಾ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಕಾಡುಗೋಡಿಯ ಪ್ರಗತಿ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯರಾದ ಗೌತಮಿ ಹಾಗೂ ಶಿರಿಷಾ ಅವರ ಮೇಲೆ  ಗುಂಡಿನ ದಾಳಿ ನಡೆದಿತ್ತು.  ಈ ಪ್ರಕರಣದಲ್ಲಿ ಗೌತಮಿ ಸಾವನ್ನಪ್ಪಿದ್ದು, ಶಿರಿಷಾ ತೀವ್ರ ಗಾಯಗೊಂಡಿದ್ದರಿಂದ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಗತಿ ಕಾಲೇಜಿನ ಅಟೆಂಡರ್ ಮಹೇಶ್ ಎಂಬ ದುಷ್ಕರ್ಮಿ ಮಾ.31ರಂದು ಈ ವಿದ್ಯಾರ್ಥಿನಿಯರಿದ್ದ ಹಾಸ್ಟೆಲ್ ರೂಮ್‌ಗೆ ನುಗ್ಗಿ ಈ ಹೇಯ ಕೃತ್ಯ ನಡೆಸಿದ್ದ. ಈಗ ಮಹೇಶನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವೆ ಉಮಾಶ್ರೀ ಆಸ್ಪತ್ರೆಗೆ ಭೇಟಿ ನೀಡಿ ಶಿರಿಷಾ ಅವರ ಆರೋಗ್ಯ ವಿಚಾರಿಸಿದ್ದಾರೆ.

Write A Comment