ಕರ್ನಾಟಕ

3 ದಿನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಅಮಿತ್ ಶಾ ಚಾಲನೆ

Pinterest LinkedIn Tumblr

bjp1

ಬೆಂಗಳೂರು: `ಅಚ್ಛೆ ದಿನ್ ಆನೇವಾಲೆ ಹೈ’ ಎಂಬ ಘೋಷವಾಕ್ಯದೊಂದಿಗೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ರಾಷ್ಟ್ರಾದ್ಯಂತ ಬಿಜೆಪಿ ಬಲವರ್ಧನೆಯ ಮಂತ್ರ ಜಪಿಸುತ್ತಿದ್ದಾರೆ. ಇದೇ ಮೂಲೋದ್ದೇಶದೊಂದಿಗೆ ದಕ್ಷಿಣ ಭಾರತವನ್ನು ಗಮನದಲ್ಲಿರಿಸಿಕೊಂಡು ಪಕ್ಷದ ಮುಂದಿನ ಅಜೆಂಡಾ ರೂಪಿಸುವ ರಾಷ್ಟ್ರೀಯ ಕಾರ್ಯಕಾರಿಣಿಗೆ ` ಭಾರತದ ಸಿಲಿಕಾನ್ ಸಿಟಿ’ ವೇದಿಕೆಯಾಗಿದೆ.

ಕಲಾಪಕ್ಕೆ ಬೆಂಗಳೂರಿನ ಅಶೋಕ ಹೋಟೆಲ್ ಸರ್ವ ಸಜ್ಜು
ಪ್ರಧಾನಿ ಮೋದಿ ಸೇರಿ ಘಟಾನುಘಟಿ ನಾಯಕರ ಪಾಲ್ಗೊಳ್ಳುವಿಕೆ
ದಕ್ಷಿಣ ಭಾರತ ಕೇಂದ್ರೀಕರಿಸಿ ಅಜೆಂಡಾ ರೂಪಿಸುವ ನಿರೀಕ್ಷೆ
ಮೂರು ದಿನ ಪಕ್ಷ ಸಂಘಟನೆ, ಭವಿಷ್ಯದ ವಿಸ್ತøತ ಚರ್ಚೆ
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕದ ಮೊದಲ ಕಾರ್ಯಕಾರಿಣಿ ಕಾರ್ಯಕರ್ತರಷ್ಟೇ ಅಲ್ಲ, ದೇಶದ ಜನತೆಯಲ್ಲೂ ಇದೆ ಕುತೂಹಲ.
ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಸಜ್ಜಾದ ಬಿಜೆಪಿ ಲಾಂಛನ.

ಮೋದಿ ನೇತೃತ್ವದಲ್ಲಿ ಅಭೂತಪೂರ್ವ ಶಕ್ತಿಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಗಿದು `ಪ್ರಥಮ ರಾಷ್ಟ್ರೀಯ ಕಾರ್ಯಕಾರಿಣಿ’. ಹೀಗಾಗಿ, ಒಂದು ರೀತಿಯಲ್ಲಿ ಸರ್ಕಾರದ ಕಾರ್ಯಾವಲೋಕನವೂ ಹೌದು. ಹಾಗೆಯೇ ಪಕ್ಷ ಸಂಘಟನೆ ಮತ್ತು ವಿಸ್ತರಣೆ ದೃಷ್ಟಿಯಿಂದ ಭವಿಷ್ಯದ ನೀಲನಕ್ಷೆ ಸಿದಟಛಿಪಡಿಸಿಕೊಳ್ಳುವ ಘಳಿಗೆ ಕೂಡ. ಇಂಥ ಹೊತ್ತಿನಲ್ಲಿ ಬೆಂಗಳೂರಿನ ಕಾರ್ಯಕಾರಿಣಿ ಮಹತ್ವಪೂರ್ಣ. ಉದ್ಯಾನನಗರಿಯ ಅಶೋಕ ಹೋಟೆಲ್ ನಲ್ಲಿ ಏ.2ರಿಂದ 4ರವರೆಗೆ ಕಾರ್ಯ ಕಾರಿಣಿ ನಡೆಯಲಿದೆ. ಇದರಲ್ಲಿ ಬಿಜೆಪಿಯ ಪ್ರಮುಖ ನಾಯಕರ ಸಮಾಗಮವಾಗುತ್ತಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ಪ್ರಧಾನಿ, ಹಿರಿಯ ಮುಖಂಡರು, ಎಲ್ಲ ರಾಜ್ಯ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿಶೇಷ ಆಹ್ವಾನಿತರು ಸೇರಿ 330 ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಾರೆ ಹಿರಿ ಕಿರಿಯ ತಲೆಮಾರಿನವರೂ ಸೇರಿ `ಪಕ್ಷದ ನಡೆ, ಭವಿಷ್ಯದ ಹಾದಿ’ಯ ಬಗ್ಗೆ ಸ್ಪಷ್ಟ ಕಲ್ಪನೆ ಕಟ್ಟಿಕೊಳ್ಳಲಿದ್ದಾರೆ. ಜೊತೆಗೆ ಅದರ ಅನುಷ್ಠಾನಕ್ಕೆ ಅಗತ್ಯ ಕಾರ್ಯಕ್ರಮವ ನ್ನೂ ಇಲ್ಲಿ ರೂಪಿಸ ಲಿದ್ದಾರೆ.

ಸರ್ಕಾರಕ್ಕೆ ಮಾರ್ಗದರ್ಶನ ಯುಪಿಎ ಸರ್ಕಾರವನ್ನು ಸದೆಬಡಿದು, `ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯೊಂದಿಗೆ ಅಖಾಡಕ್ಕಿಳಿದ ಬಿಜೆಪಿಯ ಹೆಜ್ಜೆ ಗಮನಿಸುತ್ತಿರುವ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾಗೂ ದೇಶದ ಜನತೆಗೂ ಈ ಕಾರ್ಯಕಾರಿಣಿ ಮೇಲೆ ಒಂದಷ್ಟು ಕುತೂಹಲವಿದೆ. ಕೇಂದ್ರ ಸರ್ಕಾರ ಯಾವ ದಿಕ್ಕಿನತ್ತ ಸಾಗಬಹುದು? ಮುಂದಿನ ಕಾರ್ಯಕ್ರಮಗಳೇನು? ಜನರ ನಿರೀಕ್ಷೆಗಳೇನು? ಎಂಬ ವಿಷಯಗಳು ಕಾರ್ಯಕಾರಿಣಿಯಲ್ಲಿ ಚರ್ಚೆ ಗೊಳಪಡಲಿವೆ. ಇಲ್ಲಿನ ನಿರ್ಣಯ ಕೇಂದ್ರಕ್ಕೆ ಮಾರ್ಗದರ್ಶನವನ್ನೂ ಮಾಡಲಿವೆ.

ಮೋದಿಯೇ ಪ್ರಮುಖ ಆಕರ್ಷಣೆ

ಪ್ರಧಾನಿ ಮೋದಿಯೇ ಕೇಂದ್ರ ಬಿಂದು. ಸರ್ಕಾರದ 10 ತಿಂಗಳ ಆಡಳಿತದ ಬಗ್ಗೆ ಪಕ್ಷದ ಪಲ್ಸ್ ಅನ್ನು ಖುದ್ದು ಹಿಡಿಯಲಿದ್ದಾರೆ. ಪ್ರತಿ ರಾಜ್ಯದ ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮುಖಂಡರಿಂದ ಅಭಿಪ್ರಾಯ ಸಂಗ್ರಹ. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಲು ಮುಂದಿನ ಹೆಜ್ಜೆ, ಗುರಿ ನಿಗದಿ. ನೆಲೆ ಇಲ್ಲದ ಸ್ಥಿತಿಯಲ್ಲಿ ಕಾಂಗ್ರೆಸ್ ಇರುವಾಗ ಬಿಜೆಪಿ ಸದಸ್ಯರನ್ನು ಸಂಘಟಿಸಿ ಜೊತೆಗೆ ಕರೆದುಕೊಂಡು ಸಾಗಲು ನೀಲನಕ್ಷೆ.ಬಿಜೆಪಿ ನೆಲೆ ಇಲ್ಲದ ರಾಜ್ಯಗಳಲ್ಲಿ ತಳವೂರವ ನಿಟ್ಟಿನಲ್ಲಿ ಗಂಭೀರ ಆಲೋಚನೆ, ಕಾರ್ಯ ಯೋಜನೆ ಚರ್ಚೆ ಪಕ್ಷ ಹಾಗೂ ಸರ್ಕಾರದ ಈವರೆಗಿನ ಕ್ರಮಗಳ ಬಗ್ಗೆ ಆತ್ಮಾವ ಲೋಕನ, ಮುಂದಿನ ಹೆಜ್ಜೆಗಳ ನಿರ್ಧಾರ.

Write A Comment