ಅನುಷ್ಕಾ ಶರ್ಮ ವಲ್ರ್ಡ್ ಕಪ್ ಮುಗಿಸಿ ಮತ್ತೆ ಬಾಲಿವುಡ್‍ಗೆ ವಾಪಸ್ಸಾಗಿದ್ದಾಳೆ. ಪಾಪ ಅವಳಿಗೆ ಯಾವಾಗಲೂ ಹೀಗೇ ಆಗುತ್ತೆ. ಪೀಕೆ ಬಿಡುಗಡೆ ಆದಾಗ್ಲೂ ಆ ಹೊತ್ತಿಗೆ ಕೊಹ್ಲಿಗೋಸ್ಕರ ಆಸ್ಟ್ರೇಲಿಯಾಕ್ಕೆ ಹೋಗಿದ್ಳು. ಈ ಬಾರಿ ಎನ್ ಎಚ್ 10 ಬಿಡುಗಡೆ ಆದಾಗಲೂ ಅದೇ ಕಥೆ ಅಥವಾ ಇದು ಆಕೆಯ ಪಾಲಿಗೆ ಶುಭಶಕುನವೂ ಇರಬಹುದು.
ಅಲ್ಲಿ ಭಾರತ ಸೋತರೂ ಇಲ್ಲಿ ಆಕೆಯ ಪೀಕೆ ಮತ್ತು ಎನ್‍ಎಚ್ 10 ಚಿತ್ರಗಳು ಗೆಲುವು ಸಾಧಿಸಿವೆ. ಹೊಸ ಸುದ್ದಿ ಏನಂದ್ರೆ ಅನುಷ್ಕಾ ಚೊಚ್ಚಲ ನಿರ್ಮಾಣದ ಎನ್‍ಎಚ್10 ಗೆದ್ದಿರೋದ್ರಿಂದ ಆಕೆ ಅದರ ಎರಡನೇ ಭಾಗ ತಯಾರಿಸುವ ಯೋಜನೆ ಹಾಕಿದ್ದಾಳೆ. ಚಿತ್ರಕ್ಕೆ ಎನ್‍ಎಚ್ 12 ಎಂದು ಹೆಸರಿಡುವ ಬಗ್ಗೆ ಚಿಂತನೆ ನಡೆದಿದೆಯಂತೆ.
ಈ ಚಿತ್ರವೂ ರೋಡ್ ಜರ್ನಿಯ ಕುರಿತೇ ಇರುತ್ತದೆ ಹಾಗೂ ಪ್ರಧಾನ ಪಾತ್ರ ಅನುಷ್ಕಾಳದ್ದೇ ಆಗಿರುತ್ತದೆ. ಆದರೆ ಮಿಕ್ಕ ಪಾತ್ರವರ್ಗದ ಬಗ್ಗೆ ಮಾತ್ರ ಇನ್ನೂ ನಿರ್ಧಾರವಾಗಿಲ್ಲವಂತೆ. ಬಾಕ್ಸಾಫೀಸ್ ಗೆಲುವು ಸೋಲುಗಳನ್ನು ತಲೆಗೆ ಹಾಕಿಕೊಳ್ಳದೆ ಚಿತ್ರನಿರ್ಮಾಣ ಮುಂದುವರಿ ಸುವ ಗುರಿ ಇಟ್ಟುಕೊಂಡಿರುವ ಅನುಷ್ಕಾ, ಇನ್ನಾದರೂ ಎನ್‍ಎಚ್ 10 ಚಿತ್ರ ನೋಡಿಲ್ವಂತೆ. ಯಾಕೆ ಅಂತ ಕೇಳಿದ್ರೆ ಅದೊಂದ್ ದೊಡ್ಡ ಕಥೆ ಅಂತಾಳೆ. ಅಂದ ಹಾಗೆ ಅನುಷ್ಕಾ ನಿರ್ಮಾಪಕಿಯಾದರೂ ಅದು ವಿರಾಟ್ ಕೊಹ್ಲಿಯ ಐಪಿಎಲ್ ದುಡ್ಡು ಎಂಬ ಗುಸುಗುಸು ಬಗ್ಗೆ ಅನುಷ್ಕಾ ಏನಂತಾಳೆ ಕಾದು ನೋಡಬೇಕು.