ಕರ್ನಾಟಕ

ವಿದ್ಯುತ್ ತಂತಿ ಹಿಡಿದು ಬಾಲಕರಿಬ್ಬರು ಸ್ಥಳದಲ್ಲೇ ಸಾವು

Pinterest LinkedIn Tumblr

2-Boys-Killed

ಬಾಗೇಪಲ್ಲಿ, ಏ.2- ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ತಂತಿ ಆಕಸ್ಮಿಕವಾಗಿ ತಗುಲಿ ಆಟವಾಡುತ್ತಿದ್ದ ಬಾಲಕರಿಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ಯಲ್ಲಂಪಲ್ಲಿ ಗ್ರಾಮದ ದಲಿತ ಕಾಲೋನಿಯಲ್ಲಿ ನಡೆದಿದೆ. ಯಲ್ಲಂಪಲ್ಲಿ ಗ್ರಾಮದ ದಲಿತ ಕೇರಿಯ ಜನಾರ್ಧನ್ (6) ಹಾಗೂ ಸಂಜಯ್(4) ಮೃತಪಟ್ಟ ದುರ್ದೈವಿಗಳು. ಬೀದಿ ಬದಿಯಲ್ಲಿದ್ದ ವಿದ್ಯುತ್ ಕಂಬದ ತಂತಿಯು ಬಟ್ಟೆ ಒಣಗಲು ಅಳವಡಿಸಿರುವ ತಂತಿಗೆ ತಾಗಿ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಇದು ಅರಿಯದ ಬಾಲಕರಿಬ್ಬರು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ತಂತಿ ತಾಗಿ ಶಾಕ್‌ನಿಂದ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಸಿ.ವಸಂತ್ ಆಗಮಿಸಿ ಪೋಷಕರಿಂದ ಮಾಹಿತಿ ಸಂಗ್ರಹಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಪಂ ಸದಸ್ಯೆ ಬಿ.ಸಾವಿತ್ರಮ್ಮ ಆಗಮಿಸಿ ಕುಟುಂಬದ ಪೋಷಕರಿಗೆ ಸಾಂತ್ವನ ತಿಳಿಸಿದರು.

Write A Comment