ಕರ್ನಾಟಕ

ಚಿಕ್ಕಮ್ಮನ ಮೇಲೆ ಕಣ್ಣುಹಾಕಿ ಚಿಕ್ಕಪ್ಪನಿಂದ ಕೊಲೆಯಾದ ..!

Pinterest LinkedIn Tumblr

Belgum-Murder

ಬೆಳಗಾವಿ, ಮಾ.30- ತನ್ನ ಪತ್ನಿಯ ಮೇಲೆ ಕಣ್ಣು ಹಾಕಿದ ಅಣ್ಣನ ಮಗನನ್ನು ಸುಪಾರಿ ಕೊಟ್ಟು ಬೆಂಗಳೂರಿನಿಂದ ರೌಡಿಗಳನ್ನು ಕರೆಸಿಕೊಂಡು ಕೊಲೆ ಮಾಡಿಸಿರುವ ಭೀಕರ ಘಟನೆಯನ್ನು ಜಿಲ್ಲಾ ಪೊಲೀಸರು ಬಯಲಿಗೆಳೆದಿದ್ದಾರೆ. ಇತ್ತೀಚೆಗೆ ಬೆಳವಾಡಿ ಬಳಿ ನಡೆದಿದ್ದ ಮಹಾಂತೇಶ ನಾವಲಗಿ ಕೊಲೆ ಪ್ರಕರಣವನ್ನು ಬೆಳಕಿಗೆ ತಂದಿರುವ ದೊಡ್ಡವಾಡಿ ಪೊಲೀಸರು ಈ ಸಂಬಂಧ ಆತನ ಚಿಕ್ಕಪ್ಪ ರಾಯಪ್ಪ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆರೋಪಿಗಳು ಇತ್ತೀಚೆಗೆ ನಡೆದಿದ್ದ ದನಗಳ ಜಾತ್ರೆಗೆ ಮಹಾಂತೇಶನನ್ನು

ಪುಸಲಾಯಿಸಿ ಕರೆದುಕೊಂಡು ಹೋಗಿ ನಂತರ ಬೆಳವಾಡಿ ಬಳಿ ಮಾಂಸಾಹಾರದ ಹೊಟೇಲ್‌ನಲ್ಲಿ ಮದ್ಯ ಕುಡಿಸಿ, ಮಾಂಸ ತಿನ್ನಿಸಿ ಆತನನ್ನು ಹಳ್ಳವೊಂದರ ಬಳಿ ಕರೆದುಕೊಂಡು ಹೋಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.

ನಂತರ ಆರೋಪಿಗಳನ್ನು ಮಹಾಂತೇಶನ ಚಿಕ್ಕಪ್ಪನೇ ಆರೋಪಿಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ಕರೆ ತಂದು ಬೀಳ್ಕೊಡುಗೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಈ ಪ್ರಕರಣದ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಒಂದೊಂದೇ ಮಾಹಿತಿ ಸಿಕ್ಕುತ್ತಿದ್ದಂತೆ ಇದರಲ್ಲಿ ಕುಟುಂಬಸ್ಥರ ಪಾತ್ರ ಇರುವುದು ಗೊತ್ತಾಗಿತ್ತು. ತಕ್ಷಣ ಹೆಚ್ಚಿನ ವಿಚಾರಣೆ ನಡೆಸಿದಾಗ 2 ಲಕ್ಷ ರೂ.ಗೆ ಕೊಲೆ ಸುಪಾರಿ ನೀಡಿದ್ದ ರಾಯಪ್ಪ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಡೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment