ಕರ್ನಾಟಕ

ಡಿ.ಕೆ.ರವಿ ಸಾವಿನ ನಿಗೂಢ ಪ್ರಕರಣ: ಮೇಲ್ಮನೆಯಲ್ಲಿ ವಿಪಕಕ್ಷಗಳ ಜೊತೆ ಸಿದ್ದು ವಾಗ್ಯುದ್ಧ

Pinterest LinkedIn Tumblr

siddu

ಬೆಂಗಳೂರು, ಮಾ.23: ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ನಿಗೂಢ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಇಂದೂ ಪ್ರತಿ ಪಕ್ಷಗಳು ಪಟ್ಟು ಹಿಡಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಪ್ರಸಂಗ ಮೇಲ್ಮನೆಯಲ್ಲಿ ಜರುಗಿತು. ಸಿಐಡಿಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಇರುವುದರಿಂದಲೇ ಸರ್ಕಾರ ತನಿಖೆಗೆ ಆದೇಶಿಸಿತ್ತು. ನಾವು ಪ್ರತಿ ಪಕ್ಷದ ಸ್ಥಾನದಲ್ಲಿದ್ದಾಗ ಅನೇಕ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದಾಗ. ಎಷ್ಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೀರಿ ಎಂದು ಪ್ರತಿ ಪಕ್ಷಕ್ಕೆ ಸಿದ್ದರಾಮಯ್ಯ ಛೇಡಿಸಿದರು.

ಸಿಬಿಐ ಎಂದರೆ ಶೋರ್ ಬಚಾವೊ ಇನ್ಸ್‌ಟಿಟ್ಯೂಟ್, ಕಾಂಗ್ರೆಸ್ ಬಚಾವೊ ಇನ್ಸ್‌ಟಿಟ್ಯೂಟ್ ಎಂದು ಹೇಳುತ್ತಿದ್ದವರಿಗೆ ಇಂದು ಸಿಬಿಐ ಮೇಲೇಕೆ ಇಷ್ಟು ಪ್ರೀತಿ ಬಂತು ಎಂದು ಪ್ರಶ್ನಿಸಿದರು.

ನಾನು ಪ್ರತಿ ಪಕ್ಷದ ನಾಯಕನ ಸ್ಥಾನದಲ್ಲಿದ್ದಾಗ ಅನೇಕ ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯ ಮಾಡಿದ್ದೆ. ಆದರೂ ಬಿಜೆಪಿಯವರು ಒಂದೇ ಒಂದು ಪ್ರಕರಣವನ್ನು ಕೂಡ ಸಿಬಿಐಗೆ ವಹಿಸಲಿಲ್ಲ. ಈಗ ಕೇಂದ್ರದಲ್ಲಿ ಬಿಜೆಪಿ ಇದೆ ಎಂಬ ಕಾರಣಕ್ಕಾಗಿಯೇ ಸಿಬಿಐ ಮೇಲೆ ಇಷ್ಟೊಂದು ವ್ಯಾಮೋಹ ಬಂದಿದೆಯೇ ಎಂದು ಹರಿಹಾಯ್ದರು. ಸಿಐಡಿ ಹಾಗೂ ಸಿಬಿಐ ನಾವೇ ರೂಪಿಸಿರುವ ಕಾನೂನಿಂದ ರಚಿತವಾದ ತನಿಖಾ ಸಂಸ್ಥೆಗಳು. ಸಿಐಡಿ ಎರಡೂ ಸಂಸ್ಥೆಗಳಲ್ಲಿ ಐಪಿಎಸ್ ಅಧಿಕಾರಿಗಳೇ ಪ್ರಕರಣದ ತನಿಖೆ ನಡೆಸುತ್ತಾರೆ. ಬೇರೆ ಬೇರೆ ರಾಜ್ಯಗಳ ಅಧಿಕಾರಿಗಳ ಸಿಬಿಐ ನಿಯೋಜನೆಗೊಂಡಿರುತ್ತಾರೆ. ಆದರೆ, ಯಾವುದೇ ಸರ್ಕಾರ ಅವರ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು ಹೇಳಿದರು.

ನಾನು ಸಿಐಡಿ ಅಥವಾ ಸಿಬಿಐ ಬಗ್ಗೆ ಎಂದಿಗೂ ಲಘುವಾಗಿ ಮಾತನಾಡಿಲ್ಲ. ಪ್ರತಿ ಪಕ್ಷದವರು ಆಡಳಿತದಲ್ಲಿದ್ದಾಗ ಸಿಬಿಐ ಎಂದರೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದರು. ನಾನು ಅವರ ರೀತಿ ಆರೋಪ ಮಾಡುವುದಿಲ್ಲ. ಎರಡು ಸಂಸ್ಥೆಗಳ ಮೇಲೆ ಅಪಾರವಾದ ನಂಬಿಕೆ ಇದೆ ಎಂದರು.

ಈ ವೇಳೆ ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ನಡೆಯಿತು. ರಘುಪತಿ ಭಟ್ ಆತ್ಮಹತ್ಯೆ, ಹಾಲಪ್ಪ ಪ್ರಕರಣವನ್ನು ಸಿಬಿಐ ವಹಿಸುವಂತೆ ಒತ್ತಡ ಹಾಕಿದ್ದೆವು. ಈಗ ಈ ಸಂಸ್ಥೆ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ ಎಂದು ಪ್ರಶ್ನೆ ಮಾಡಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು. ಯಾವುದೇ ಪಕ್ಷಗಳು ಅಧಿಕಾರದಲ್ಲಿರಲಿ ಇಲ್ಲದಿರಲಿ ತನಿಖಾ ಸಂಸ್ಥೆಗಳ ಅಧಿಕಾರಿಗಳ ಕಾರ್ಯಕ್ಷಮತೆ ಪ್ರಶ್ನಿಸುವ ಕೆಲಸ ಮಾಡಬಾರದು ಎಂದ ಅವರು, ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು.

1 Comment

  1. Comment…hagadre namma manya mukya mantrigalige obba daksha adikarige nyaya kodisuvudakinta prati pakshagala melina hatave hechu anta aytuu…edenu makkala aatave pratipaksha davaru powernalli eddaga Namma matinante cbi ge kodlila ànnoke.nachike agbeku nimgella

Write A Comment