ಡಿ.ಕೆ ರವಿ ಅವರ ಸಾವಿನ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆ ಹಲವು ಗೊಂದಲಗಳಿಗೆ ಕಾರಣವಾಗಿದ್ದು ಈ ಸಾವಿನ ಹಿಂದೆ ಕಾಣದ ‘ಕೈ’ಗಳು ಕೆಲಸ ಮಾಡಿವೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿರುವುದರ ಜತೆ ಹಲವು ಪ್ರಶ್ನೆಗಳು ಉದ್ಭವವಾಗಿದೆ.
1.ರವಿ ಅವರು ಬೆಳಗ್ಗೆ 11.30ಕ್ಕೆ ಕಚೇರಿಯಿಂದ ಮನೆಗೆ ಬಂದಿದ್ದು ಏಕೆ, ಯಾರನ್ನಾದರೂ ಭೇಟಿ ಮಾಡುವ ಉದ್ದೇಶವಿದ್ದರೆ, ಅವರನ್ನು ಕಚೇರಿಯಲ್ಲೇ ಭೇಟಿ ಮಾಡ ಬಹುದಿತ್ತು . ಅಷ್ಟೊಂದು ದಕ್ಷ ಅಧಿಕಾರಿಯಾಗಿದ್ದ ಅವರು ಒಂದೊಮ್ಮೆ ಅಂದರೆ ಸರ್ಕಾರದ ಪ್ರಭಾವಿ ಒಬ್ಬರ ಸೂಚನೆ ಇಲ್ಲದೇ ಯಾರಾದರೂ ಒಬ್ಬ ಬಿಲ್ಡರ್ ಗೆ ಹೆದರಿ ಮನೆಗೆ ಬರುತ್ತಿದ್ದರಾ..?
2.ರವಿ ಅವರ ಸೆಂಟ್ ಜಾನ್ಸ್‌ವುಡ್ ಅರ್ಪಾಟ್‌ಮೆಂಟ್ಸ್‌ಗೆ ಮಧ್ಯಾಹ್ನ 12.30ಕ್ಕೆ ಭೇಟಿ ನೀಡಿದ ಮೂವರು ಅನಾಮಿಕರು ಯಾರು.? ಅವರು ಬಂದು ಹೋಗಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿರಬಹುದಲ್ಲವೇ..? ಅವರನ್ನು ವಿಚಾರಣೆಗೊಳಪಡಿಸಿದ್ದರೆ ಸತ್ಯ ಹೊರಬರುತ್ತಿತ್ತು. ಸತ್ಯ ಹೊರಬಂದರೆ ಸರ್ಕಾರಕ್ಕೆ ಸಮಸ್ಯೆ ಇದೆಯೇ..?
3.ಅನಾಮಿಕರು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಲು ಬಂದಿದ್ದರು ಎನ್ನುವಾಗ ಅಂತಹ ಭದ್ರತೆ ಉಳ್ಳ ಅಪಾರ್ಟ್ ಮೆಂಟ್ ನಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ಹೆಸರು ನಮೂದಿಸುವುದು ಕಡ್ಡಾಯ. ಅವರಿಂದ ಈ ಕೃತ್ಯ ನಡೆದಿಲ್ಲ ಎಂದಾದರೆ ಅವರ ನೈಜ ಹೆಸರು ಹಾಗೂ ದೂರವಾಣಿ ಸಂಖ್ಯೆ ಇರಲೇಬೇಕಲ್ಲವೇ..?
4.ಅಪಾರ್ಟ್‌ಮೆಂಟ್‌ನಲ್ಲಿ ಮೊದಲೇ ಮೂವರು ಬಂದಿದ್ದರೇ ಅವರನ್ನು ಸಮರ್ಪಕವಾಗಿ ತಪಾಸಣೆ ಮಾಡಲಾಗಿತ್ತೆ ? ಅಥವಾ ಅವರು ಅಲ್ಲಿಯೂ ತಮ್ಮ ಪ್ರಭಾವ ಬೀರಿ ಒಳಗಡೆ ಹೋಗಿದ್ದಾರೆಯೇ..?
5.ರವಿ ಅವರ ಪತ್ನಿ ಕುಸುಮಾ ತಮ್ಮ ಬಳಿ ಬೀಗದ ಕೈ ಬಳಸಿ ಅರ್ಪಾಟ್‌ಮೆಂಟ್ ಪ್ಲಾಟ್‌ನ ಬಾಗಿಲು ತೆಗೆಯುತ್ತಿದ್ದಂತೆ ಬೇರೆಯವರೆಲ್ಲಾ ಒಳನುಗ್ಗಲು ಪೊಲೀಸರು ಅವಕಾಶ ನೀಡಿದ್ದೇಕೆ. ಇದು ಸಾಕ್ಷ್ಯ ನಾಶ ಪಡಿಸುವ ಪೂರ್ವನಿಯೋಜಿತ ಸಂಚಲ್ಲವೇ ?
6.ಆತ್ಮಹತ್ಯೆಗೆ ಒಳಗಾದ ವ್ಯಕ್ತಿಯ ಒದ್ದಾಟದಿಂದ ಬಟ್ಟೆ ಸುಕ್ಕಾವುದು ಸಾಮಾನ್ಯ. ಅಲ್ಲದೇ ರವಿ ಅವರು ಧರಿಸಿದ್ದ ಷರ್ಟ್‌ನ ಇನ್‌ಶರ್ಟ್ ಕೂಡ ಸುಕ್ಕಾಗದಿರುವುದು ಹೇಗೆ..?
7. ಮೊದಲು ಬಂದಿದ್ದ ರವಿ ತಮ್ಮ ಕೀ ಬಳಸಿ ಮನೆಯ ಬಾಗಿಲು ತೆರೆದಿದ್ದಾರೆ. ನಂತರ ಪತ್ನಿ ತಮ್ಮ ಬಳಿ ಇದ್ದ ಬೀಗದ ಕೈನಿಂದ ಬಾಗಿಲು ತೆರೆದಿದ್ದಾರೆ. ಹಾಗಾದರೆ ರವಿ ಅವರು ತಂದಿದ್ದ ಬೀಗದ ಕೈ ಎಲ್ಲಿದೆ .? ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಯೇ..?
8. ಒಬ್ಬ ಸಾಮಾನ್ಯ ವ್ಯಕ್ತಿಯೂ ಸಾಯುವಾಗ ಡೆತ್ ನೋಟ್ ಬರೆದಿಟ್ಟಿರುತ್ತಾನೆ ಅಂತಹುದರಲ್ಲಿ ಒಬ್ಬ ಐ ಎ ಎಸ್ ಅಧಿಕಾರಿಗೆ ಡೆತ್ ನೋಟ್ ಸಾಮಾನ್ಯ ಜ್ಞಾನವಿಲ್ಲವೇ..? ಅಥವಾ ಅದನ್ನು ಮಹಜರು ಮಾಡಿದರೆ ಪ್ರಭಾವಿಗಳ ರಹಸ್ಯ ಹೊರಬರುತ್ತದೆ ಎಂದು ಮುಚ್ಚಿಡಲಾಗಿದೆಯಾ..?
9.ಒಂದೊಮ್ಮೆ ರವಿ ಅವರು ನೇಣು ಹಾಕಿಕೊಂಡಿದ್ದರೆ ಸೀಲಿಂಗ್ ಫ್ಯಾನ್ ಬಾಗಿರಬೇಕಿತ್ತು. ಆದರೆ ಅದಕ್ಕೆ ಏನೂ ಆಗಿಲ್ಲ. ಸ್ಟೂಲ್ ಸಹ ಜಾರಿಲ್ಲವೆಂದರೆ ಅವರ ಸಾವು ನೇಣಿನಿಂದ ಸಂಭವಿಸಿಲ್ಲ ಎಂಬ ಅರ್ಥವಲ್ಲವೇ..? ತಮ್ಮ ಅವಧಿಯಲ್ಲಿ ಇಂತಹ ಸಾವಿರಾರು ಕೇಸ್ ಗಳನ್ನೂ ನೋಡಿರುವ ಆಯುಕ್ತರಿಗೆ ಈ ಕಲ್ಪನೆಯೂ ಬಂದಿಲ್ಲವೇ..? ಅಥವಾ ಯಾರದ್ದಾದರೂ ಒತ್ತಡದಿಂದ ಹೇಳಿಕೆ ನೀಡಿದ್ದಾರೆಯೇ..?
10.ಸಾಮಾನ್ಯವಾಗಿ ನೇಣು ಬಿಗಿದ ಸಂದರ್ಭದಲ್ಲಿ ಬಲಭಾಗಕ್ಕೆ ಬಿಗಿಯುವ ಸಾಧ್ಯತೆ ಹೆಚ್ಚು. ಆದರೆ ಅವರ ಆಸ್ಥಿತಿಯಲ್ಲಿನ ಫೋಟೋ ಗಮನಿಸಿದರೆ ಕುತ್ತಿಗೆಯ ಎಡ ಭಾಗಕ್ಕೆ ಹಗ್ಗ ಬಿಗಿದಂತೆ ಕಂಡು ಬರುತ್ತಿದೆ ಇದು ಹೇಗೆ..?
11. ಕೋಲಾರ ಜಿಲ್ಲಾಧಿಕಾರಿಯಾಗಿದ್ದ ರವಿ ಅವರು ವರ್ಗಾವಣೆಯಾದ ಸಮಯದಲ್ಲಿ ಕೋಲಾರದ ಶಾಸಕ ವರ್ತೂರು ಪ್ರಕಾಶ್ ಮತ್ತು ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ ಸಿಹಿ ಹಂಚಿದ್ದಾರೆ ಎಂದರೆ ಅವರಿಗೆ ಇವರ ಮೇಲಿನ ಆಕ್ರೋಶ ಇತ್ತು ಎಂಬುದು ಶತಃ ಸಿದ್ದ. ಇಂತಹ ಪ್ರಕರಣಗಳಲ್ಲಿ ವಿರೋಧಿಗಳನ್ನು ತನಿಖೆಗೆ ಒಳಪಡಿಸುವುದು ತನಿಖೆಯ ಒಂದು ಭಾಗವಲ್ಲವೇ..?
12.ರವಿ ಸಾವನ್ನಪ್ಪಿರುವುದನ್ನು ನೋಡಲು ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಅವರ ಪುತ್ರ ರಾಣಾ ಜಾರ್ಜ್ ಎಲ್ಲರಿಗಿಂತಲೂ ಮುಂಚಿತವಾಗಿ ಬಂದಿದ್ದಾರೆ ಎನ್ನಲಾಗಿದ್ದು, ಒಂದೊಮ್ಮೆ ಗೃಹ ಸಚಿವರಾಗಿರುವ ಕಾರಣದಿಂದ ಜಾರ್ಜ್ ಬಂದಿದ್ದರೆ, ಆಕ್ಷೇಪವಿಲ್ಲ, ಆದರೆ ರಾಣಾ ಜಾರ್ಜ್ ಹಾಗೂ ರವಿ ಅವರಿಗೆ ಏನು ಸಂಬಂಧ..? ಅವರು ಬರುವ ಅಗತ್ಯತೆ ಏನಿತ್ತು ..?
13. ಸಾಯುವ ಕೊನೆ ಕ್ಷಣದಲ್ಲಿ ರವಿ ಮಾತನಾಡಿರುವ ಕರೆ ಯಾರದು ? ಅದು ಮಹಿಳಾ ಅಧಿಕಾರಿಗೆ ಕರೆ ಮಾಡಿದ್ದು, ಹಾಗೂ ಮೆಸೇಜ್ ಕಳುಹಿಸಿದ್ದಾರೆ ಎನ್ನುವುದಾದರೆ ಕೊಲೆ ಮಾಡಿದವರೂ ಆ ಕೆಲಸ ಮಾಡಿರಬಹುದಲ್ಲ, ಇದಕ್ಕೇನು ಎನ್ನುತ್ತೀರಿ ..?
14.ಸಿಐಡಿ ಇರಲಿ ಯಾವುದೇ ಇರಲಿ ತನಿಖೆಯ ಗೌಪ್ಯತೆ ಕಾಯ್ದುಕೊಳ್ಳುವುದು ಅಧಿಕಾರಿಗಳ ಕರ್ತವ್ಯ. ಈ ವಿಷಯದಲ್ಲಿಯೇ ಎಡವಿದ ಅಧಿಕಾರಿಗಳು ತನಿಖೆಯನ್ನು ಸಮರ್ಪಕವಾಗಿ ನಡೆಸುವ ಸಾಧ್ಯತೆ ಇದೆಯಾ ..? ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ಪ್ರಕರಣದ ಬಗೆಗೆ ಮಾಹಿತಿ ಸೋರಿಕೆಯಾಗುತ್ತಿದೆ (ಅಸತ್ಯವಾದ ಮಾಹಿತಿ ಆದರೂ ಕೂಡ) ಎಂಬ ವಿಷಯ ಗಮನಕ್ಕೆ ಬಂದರೂ ಸರ್ಕಾರ ಸುಮ್ಮನಿರುವುದೇಕೆ..? ಅಥವಾ ಮಾಧ್ಯಮಗಳಲ್ಲಿ ಬಂದಿರುವುದು ಸಿಐಡಿಯ ಮಾಹಿತಿಯಲ್ಲ, ಹಾಗಾಗಿ ಅದನ್ನು ನಂಬಬೇಕಿಲ್ಲ ಎಂಬ ಹೇಳಿಕೆಯನ್ನಾದರೂ ನೀಡಬಹುದಿತ್ತಲ್ಲವೇ..? ಹಾಗಾಗಿ ನಿಮ್ಮ ಉದ್ದೇಶವಿರುವುದು ಜನರ ಆಕ್ರೋಶವನ್ನು ಈ ರೀತಿ ತಣ್ಣಗಾಗಿಸಿ ನಿಮ್ಮ ಆಪ್ತರನ್ನು ರಕ್ಷಣೆ ಮಾಡಲು ಎಂಬುದು ಸತ್ಯವಲ್ಲವೇ..?
15.ರವಿ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಆಸ್ಪತ್ರೆಯ ಶವಾಗಾರದ ಬಳಿ ವೈದ್ಯರು ಹಾಗೂ ವಿಭಾಗಾಧಿಕಾರಿಗೆ ಮಾತ್ರ ಅಲ್ಲಿ ಹಾಜರಿರಲು ಸಾಧ್ಯ. ಆದರೆ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಅಲ್ಲಿ ಹಾಜರಿದ್ದದ್ದು ಏಕೆ ? ನೀವು ಗೌರವ ಸೂಚಿಸಬೇಕ್ಕಿದ್ದರೆ ಅಪಾರ್ಟ್ ಮೆಂಟ್ ಗೆ ಹೋಗಬಹುದಿತ್ತು . ಅಥವಾ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಭಾಗವಹಿಸಬಹುದಿತ್ತು. ಅದನ್ನು ಬಿಟ್ಟು ನಾನು ನಾಡಿನ ಮುಖ್ಯಮಂತ್ರಿ ಎಂದು ಕಾನೂನು ಮೀರಲು ಸಾಧ್ಯವೇ ಅಥವಾ ಒಬ್ಬ ಕಾನೂನು ಅಭ್ಯಾಸ ಮಾಡಿದ ಮುಖ್ಯಮಂತ್ರಿಗಳಿಗೆ ಅದರ ಸಾಮಾನ್ಯ ಜ್ಞಾನವೂ ಇಲ್ಲವೇ ..?
16.ರವಿ ಕುರಿತ ಬ್ಲಾಕ್‌ಮೇಲ್ ಸಿಡಿ ಇದೆ ಎಂಬ ಮಾತು ಹರಿದಾಡುತ್ತಿದೆ. ಆ ಸಿಡಿಯಲ್ಲಿ ಇರುವುದು ಏನು..? ಅದರ ಪರಿಶೀಲನೆ ನಡೆಸಿದ್ದೀರಾ..? ಒಬ್ಬ ಐಎಎಸ್ ಅಧಿಕಾರಿಗೆ ಸಿನಿಮಾದ ಸಿಡಿಯನ್ನಂತೂ ಕಳುಹಿಸಿರಲಿಕ್ಕಿಲ್ಲ. ಹಾಗಾಗಿ ಅದರಲ್ಲಿರುವ ರಹಸ್ಯವಾದರೂ ಏನು..? ನಿಮ್ಮ ಛೇಲಾಗಳ ಮೂಲಕ ಮೊಬೈಲ್ ನ ಮಾಹಿತಿಯನ್ನು ಬಹಿರಂಗಪಡಿಸಿದ ನಿಮ್ಮ ಸರ್ಕಾರ ಸಿಡಿಯಲ್ಲಿದ್ದ ಅಂಶಗಳ ಬಗೆಗೂ ಮಾಹಿತಿ ಸೋರಿಕೆ ಮಾಡಬಹುದಿತ್ತಲ್ಲ. ಅದೇಕೆ ಸೋರಿಕೆಯಾಗಿಲ್ಲ..?
17.ಇಷ್ಟು ದಿನ ಕಳೆದ ಮೇಲೆ ಸಿಬಿಐ ಗೆ ಕೊಡುವ ಬದಲು ಆವಾಗಲೇ ನೀಡಿದ್ದರೆ ನಿಮಗೇನು ಸಮಸ್ಯೆ ಇತ್ತು. ಈ ವಿಳಂಬ ನೀತಿಯಿಂದ ಸಾಕ್ಷಿ ನಾಶ ಮಾಡುವ ಉದ್ದೇಶವಿತ್ತೇ..?
ಸರ್ಕಾರದ ವರ್ತನೆ ಈಗಾಗಲೇ ಇಂತಹ ಸಾವಿರಾರು ಪ್ರಶ್ನೆಗಳನ್ನು ಸಾರ್ವಜನಿಕರಲ್ಲಿ ಹುಟ್ಟುಹಾಕಿವೆ. ಇಂತಹ ವರ್ತನೆ ಮತ್ತಷ್ಟು ಪ್ರಶ್ನೆಯನ್ನು ಹುಟ್ಟುಹಾಕಬಹುದು. ಆದರೆ ಇದಕ್ಕೆಲ್ಲ ಸರ್ಕಾರವೇ ಉತ್ತರಿಸಬೇಕು.