ಮನೋರಂಜನೆ

ಶಾಹಿದ್ ಕಪೂರ್ ಗೆ ಕೂಡಿ ಬಂದ ಕಂಕಣಭಾಗ್ಯ

Pinterest LinkedIn Tumblr

shahid-kapoor

ಗಾಸಿಪ್ ಗಳು ಇದ್ದರೂ ತಾನು ಒಂಟಿ ಎಂದು ಕುಳಿತಿದ್ದ ಬಾಲಿವುಡ್ ಹ್ಯಾಂಡ್ ಸಮ್ ಬಾಯ್ ಶಾಹಿದ್ ಕಪೂರ್ ಗೂ ಕಂಕಣ ಭಾಗ್ಯ ಕೂಡಿ ಬಂದಿದ್ದು, ದೆಹಲಿ ಮೂಲದ ಮೀರಾ ರಜಪೂತ್ ಜೊತೆ ಸಪ್ತಪದಿ ತುಳಿಯಲ್ಲಿದ್ದಾರೆ.

ಇಷ್ಟಕ್ಕೂ ಶಾಹಿದ್ ಮದುವೆಯಾಗುತ್ತಿರುವುದು ನಟಿಯನ್ನಲ್ಲ. ಚಿತ್ರರಂಗವನ್ನು ಬಿಟ್ಟು ಬೇರೆ ಕ್ಷೇತ್ರದವರನ್ನು ಮದುವೆಯಾಗಬೇಕೆಂಬುದು ಶಾಹಿದ್ ಕಪೂರ್ ಅವರ ಅಭಿಲಾಷೆಯಾಗಿತ್ತು. ಅವರ ಆಸೆಯಂತೆ ಇದೀಗ ಚಿತ್ರರಂಗವನ್ನು ಬಿಟ್ಟು ಬೇರೆ ಕ್ಷೇತ್ರದ ಹುಡಿಗಿಯನ್ನೇ ವರಿಸುತ್ತಿದ್ದಾರೆ. ಶಾಹಿದ್ ಕಪೂರ್ ಮದುವೆಯಾಗುತ್ತಿರುವ ಹುಡುಗಿ ದೆಹಲಿ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ಶ್ರೀರಾಮ ಇಂಗ್ಲೀಷ್ ಕಾಲೇಜಿನಲ್ಲಿ 3ನೇ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ.

ದೆಹಲಿ ಮೂಲದ ಮೀರಾ ರಜಪೂತ್ ಹಾಗೂ ಶಾಹಿದ್ ಕಪೂರ್ ಗೂ ಎಲ್ಲಿಂದ ಎಲ್ಲಿ ನಂಟು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು. ಅದಕ್ಕೆ ಉತ್ತರ ಶಾಹಿದ್ ಕಪೂರ್ ಹಾಗೂ ಅವರ ತಂದೆ ಧಾರ್ಮಿಕ ರಾಧಾ ಸಂತ್ಸಂಗ ಕಾರ್ಯಕ್ರಮಗಳ ಮೇಲೆ ಬಹಳಷ್ಟು ನಂಬಿಕೆ ಇಟ್ಟಿರುವುದು.ಶಾಹಿದ್ ಕಪೂರ್ ಹಾಗೂ ಅವರ ತಂದೆ ಆಗಾಗ ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿದ್ದರು. ಇದೇ ಕಾರ್ಯಕ್ರಮಗಳಿಗೆ ಮೀರಾ ಕೂಡ ಭೇಟಿ ನೀಡುತ್ತಿದ್ದರು. ಈ ವೇಳೆ ಶಾಹಿದ್ ಕಪೂರ್ ಹಾಗೂ ಮೀರಾ ಅವರ ಭೇಟಿಯಾಗಿದೆ. ಈ ಭೇಟಿಯೇ ಇದೀಗ ವಿವಾಹಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ಈಗಾಗಲೇ ಶಾಹಿದ್ ಕಪೂರ್ ತಂದೆ ಪಂಕಜ್ ಕಪೂರ್ ಅವರು ಮೀರಾ ರಜಪೂತ್ ಅವರ ಮನೆಗೆ ಹೋಗಿ ಬಂದಿದ್ದು, ಜನವರಿ 14 ಅಂದರೆ ಮಕರ ಸಂಕ್ರಾಂತಿ ಹಬ್ಬದ ದಿನದಂದು ಮೀರಾ ಜೊತೆ ಶಾಹಿದ್ ಕಪೂರ್ ಅವರ ನಿಶ್ಚಿತಾರ್ಥವೂ ಆಗಿದ್ದು, ಡಿಸೆಂಬರ್ ನಲ್ಲಿ ಶಾಹಿದ್ ಮೀರಾ ಕೈ ಹಿಡಿಯಲಿದ್ದಾರೆ. ಆದರೆ ಈ ಕುರಿತಂತೆ ಈ ವರೆಗೂ ಅಧಿಕೃತವಾಗಿ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

Write A Comment