ಕರ್ನಾಟಕ

ಭಾರತದಲ್ಲೇ ತಯಾರಿಸಿ-– ಒಂದು ಕನಸಿನ ಪ್ರವಾಸ: ಐಐಎಂನ ನಿವೃತ್ತ ಪ್ರಾಧ್ಯಾಪಕ ಡಾ. ಭರತ್‌ ಜುಂಜನ್‌­ವಾಲಾ

Pinterest LinkedIn Tumblr

pvec23febmCPI-3

ಬೆಂಗಳೂರು: ‘ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಭಾರತದಲ್ಲೇ ತಯಾರಿಸಿ’ ಎಂಬುದು ಒಂದು ಕನಸಿನ ಪ್ರವಾಸ. ಇದು ಯಶಸ್ವಿಯಾಗದು’ ಎಂದು ಬೆಂಗಳೂರು ಐಐಎಂನ ನಿವೃತ್ತ ಪ್ರಾಧ್ಯಾಪಕ ಡಾ. ಭರತ್‌ ಜುಂಜನ್‌­ವಾಲಾ ಅಭಿಪ್ರಾಯಪಟ್ಟರು.

ಭಾರತೀಯ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಬೆಂಗಳೂರು ಜಿಲ್ಲಾ ಮಂಡಳಿ ಭಾನುವಾರ ಇಲ್ಲಿ ಏರ್ಪ­ಡಸಿಿದ್ದ  ‘ಭಾರ­ತ­ದಲ್ಲೇ ತಯಾರಿಸಿ: ಒಂದು ವಿಮರ್ಶೆ’ ಕುರಿತ ವಿಚಾರ ಸಂಕಿರಣ­ದಲ್ಲಿ ಅವರು ಮಾತನಾಡಿದರು.

‘ದೇಶವು ಉತ್ಪಾದನಾ ವಲಯದಲ್ಲಿ ಪ್ರಗತಿ ಸಾಧಿಸಬೇಕು ಎಂಬ ಉದ್ದೇಶ­ದಿಂದ ಮೋದಿ ಅವರು ಚೀನಾವನ್ನು ಮಾದ­ರಿ­ಯಾಗಿಟ್ಟು­ಕೊಂಡು ಈ ಯೋಜನೆ ಘೋಷಿಸಿದ್ದಾರೆ. ಆದರೆ, ಈಗ ಚೀನಾ ಇದರಿಂದ ಸಾಕಷ್ಟು ಸಮ­ಸ್ಯೆಗಳನ್ನು ಎದುರಿಸುತ್ತಿದೆ’ ಎಂದರು.
‘ಉತ್ಪಾದನಾ ವಲಯಕ್ಕೆ ಸಾಕಷ್ಟು ಸಂಪ­ನ್ಮೂಲಗಳ ಅಗತ್ಯವಿದೆ. ಪ್ರಮವಾಗಿ ಭೂಮಿ, ನೀರು ಮತ್ತು ವಿದ್ಯುತ್‌ ಬೇಕು. ನಮ್ಮ ದೇಶದಲ್ಲಿ ಅಷ್ಟು ಪ್ರಮಾ­ಣದ ಸಂಪನ್ಮೂಲಗಳಿಲ್ಲ’ ಎಂದು ಅವರು ಪ್ರತಿಪಾದಿಸಿದರು.

‘ಭಾರತ ಮತ್ತು ಚೀನಾದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ‘ಚೀನಾದಲ್ಲೇ ತಯಾರಿಸಿ’ ಎಂಬ ಅಭಿಯಾನದಿಂದ ಅಲ್ಲಿ ಹಲವು ಸಮಸ್ಯೆಗಳು ಉಂಟಾ­ಗಿವೆ.  ಪರಿಸರ ಮಾಲಿನ್ಯ ಹೆಚ್ಚಿದೆ. ಜನ­ರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ದೇಶದ ಪ್ರಗತಿ ದರ ಕುಂಠಿತ­ವಾಗು­ತ್ತಿದೆ.  ಗಮನಿಸಬೇಕಾದ ಅಂಶ ಎಂದರೆ, ರಫ್ತು ಆಧಾರಿತ ಚೀನಾದ ಉತ್ಪಾದನಾ ಕ್ಷೇತ್ರವು ಈಗ ಅವನತಿಯ ಹಾದಿ ಹಿಡಿದಿದೆ’ ಎಂದು ಅವರು ವಿವರಿಸಿದರು.

‘ಉತ್ಪಾದನಾ ವಲಯದ ಮಾರು­ಕಟ್ಟೆಗೆ ಮಿತಿ ಇದೆ. ಅದು ವೃದ್ಧಿ­ಯಾಗು­ವಂತಹದ್ದಲ್ಲ. ಗ್ರಾಹಕರು ತಮಗೆ ಅಗತ್ಯವಿರುವಷ್ಟು ವಸ್ತುಗಳನ್ನು ಮಾತ್ರ ಖರೀದಿಸುತ್ತಾರೆ. ಕಂಪೆನಿ­ಗಳು ಹೆಚ್ಚು ಹೆಚ್ಚು ಉತ್ಪನ್ನಗಳನ್ನು ತಯಾರಿಸಿ­ದರೆ ಅವುಗಳನ್ನು ಕೊಳ್ಳುವವರು ಯಾರು?’ ಎಂದು ಅವರು ಪ್ರಶ್ನಿಸಿದರು.

‘ಸಾಫ್ಟ್‌ವೇರ್‌ ಶಾಪವಲ್ಲ’
‘ಬೆಂಗಳೂರಿಗೆ ಸಾಫ್ಟ್‌ವೇರ್‌ ಉದ್ಯಮ ಶಾಪವಾಗಿ ಪರಿಣಮಿಸಿದೆ ಎಂಬ ಭಾವನೆ ಇದೆ. ಸಾಫ್ಟ್‌ವೇರ್‌ ಕಂಪೆನಿಗಳಿಂದಾಗಿ ನಗರದಲ್ಲಿ ಮನೆ ಬಾಡಿಗೆ ಸೇರಿದಂತೆ ಇತರ ಅಗತ್ಯ ಸೇವೆ­ಗಳ ದರ ಗಗನಕ್ಕೇರಿದೆ. ಜನ­ಸಾಮಾನ್ಯರಿಗೆ ಜೀವಿಸಲು ಸಾಧ್ಯ­ವಾಗುತ್ತಿಲ್ಲ ಎಂಬ ವಾದ ಇದೆ. ಆದರೆ, ನಾನು ಇದನ್ನು ಪೂರ್ಣ­ವಾಗಿ ಒಪ್ಪುವುದಿಲ್ಲ. ಜನರ ಬೇಡಿಕೆಗೆ ಅನುಗುಣ­ವಾಗಿ ಸೇವೆಗಳ ಪೂರೈಕೆ ಆದರೆ, ಬೆಲೆಗಳಲ್ಲಿ ಸ್ಥಿರತೆ ಕಾಣ­ಲಿದೆ. ಇದಕ್ಕೆ ಕೆಲವು ವರ್ಷ­ಗಳು ಬೇಕಾ­ಗ­ಬಹುದು’ ಎಂದು ಜುಂಜನ್‌­ವಾಲಾ ಹೇಳಿದರು.

Write A Comment