ಕರ್ನಾಟಕ

ರೈತರ ಕಷ್ಟ ಕಾರ್ಪಣ್ಯಗಳಿಗೆ ಸರ್ಕಾರ ಸ್ಪಂದಿಸಲಿ: ಕವಿ ಡಾ. ಸಿದ್ದಲಿಂಗಯ್ಯ

Pinterest LinkedIn Tumblr

pvec233Asuggi

ಕೆಂಗೇರಿ: ರೈತರ ಶ್ರಮಕ್ಕೆ ತಕ್ಕ ಫಲ ಸಿಗುವಂತೆ ಸರ್ಕಾರ ಕಾಳಜಿ ವಹಿಸ­ಬೇಕೆಂದು ಕವಿ ಡಾ. ಸಿದ್ದಲಿಂಗಯ್ಯ  ಅವರು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಲ್ಲತ್ತ­ಹಳ್ಳಿಯ ಕನ್ಯಾಕುಮಾರಿ ವಿದ್ಯಾ ಸಂಸ್ಥೆ, ರಾಜರಾಜೇ­ಶ್ವರಿ ನಗರ ವಿಧಾನ ಸಭಾ ಕ್ಷೇತ್ರ ಕಸಾಪ  ಮತ್ತು ‘ರಂಗಸಮುದ್ರ‘ದ ಸಂಯುಕ್ತ ಆಶ್ರಯದಲ್ಲಿ  ಏರ್ಪ­ಡಿ­ಸಿದ್ದ ಜಿಲ್ಲಾ­ಮಟ್ಟದ ಗ್ರಾಮೀಣ ಸಂಸ್ಕೃತಿ  ಉತ್ಸವ, ರೈತ ಹಬ್ಬ, ಸುಗ್ಗಿ-ಹುಗ್ಗಿ- ಉತ್ಸವಕ್ಕೆ ಚಾಲನೆ ನೀಡಿದರು.

ಕೃಷಿಯನ್ನೆ ಮರೆಯತ್ತಿರುವ ಈ ದಿನಗಳಲ್ಲಿ ಸಾರ್ವಜನಿಕ ಜಾಗೃತಿಯ ಅಗತ್ಯವಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ದರ ಸಿಗದೆ ರಸ್ತೆ­ಯಲ್ಲೆ ಬಿಸಾಡಿ ಹೋಗುವಂ­ತಾ­ಗುತ್ತಿದ್ದು ಅವರ ಕಷ್ಟ ಕಾರ್ಪಣ್ಯಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಗಮನ ಹರಿಸಿ ಪ್ರೋತ್ಸಾಹಿಸಬೇಕಿದೆ ಎಂದರು.

ಬೆಳೆಯುತ್ತಿರುವ  ಬೆಂಗಳೂರು ನಗರ­ದಲ್ಲಿ ಕೃಷಿ ಸಂಬಂಧ ಕಾರ್ಯ­ಕ್ರಮ­ ರೂಪಿಸುವುದರಿಂದ ಯುವ ಜನತೆಯಲ್ಲಿ ಕೃಷಿ ಆಸಕ್ತಿ ಮರು­ಕರಳಿಸ­ಬಹುದು. ರೈತರು  ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆ, ಕುರಿ­ಸಾಕಣೆ­ಯನ್ನು ಉಪ ಕಸುಬಾಗಿ ಸ್ವೀಕರಿ­ಸುವು­ದರಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದರು.

Write A Comment