ಕರ್ನಾಟಕ

ಯದುವೀರ್‌ ದತ್ತು ಸ್ವೀಕಾರ: ಅರಮನೆ ಸಜ್ಜು

Pinterest LinkedIn Tumblr

arama

ಮೈಸೂರು: ಯದುವಂಶದ ದತ್ತು ಪುತ್ರ ಸ್ವೀಕಾರ ಸಮಾರಂಭಕ್ಕೆ ಅರಸರ ಊರಿನ ಅಂಬಾವಿಲಾಸ ಅರಮನೆ ಮದುವ­ಣ­ಗಿತ್ತಿಯಂತೆ ಸಿಂಗಾರ­ಗೊಂಡಿದ್ದು, ಈ ಅದ್ಧೂರಿ ಕಾರ್ಯ­ಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಅರಮನೆಯ ಕಲ್ಯಾಣಮಂಟಪದಲ್ಲಿ ಫೆ. 23ರಂದು ಮಧ್ಯಾಹ್ನ 1.20ರಿಂದ 1.50ರವರೆಗೆ ಮಿಥುನ ಲಗ್ನದಲ್ಲಿ ತ್ರಿಪುರಸುಂದರಿದೇವಿ ಮತ್ತು ಸ್ವರೂಪ್‌ ಆನಂದ್‌ ಗೋಪಾಲ್‌ರಾಜ್‌ ಅರಸ್‌ ಅವರ ಪುತ್ರ ಯದುವೀರ್‌ ಗೋಪಾಲ್‌­ರಾಜ್‌ ಅರಸ್‌ ಅವರನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ದತ್ತು ಸ್ವೀಕರಿಸಲಿದ್ದಾರೆ. ದತ್ತು ಸ್ವೀಕಾರದ ನಂತರ ಯದುವೀರ್‌ ಅವರ ಹೆಸರನ್ನು ‘ಯದುವೀರ್‌ ಶ್ರೀಕೃಷ್ಣದತ್ತ ಚಾಮ­ರಾಜ ಒಡೆಯರ್‌’ ಎಂದು ಮರು­ನಾಮಕರಣ ಮಾಡಲಾಗುತ್ತದೆ.

ಕನ್ನಡಿ ತೊಟ್ಟಿಯಲ್ಲಿ ಬೆಳಿಗ್ಗೆ 6.30ಕ್ಕೆ ಗಣಪತಿ ಮತ್ತು ಚಾಮುಂಡೇಶ್ವರಿ ಪೂಜೆ­­ಯೊಂದಿಗೆ ಧಾರ್ಮಿಕ ವಿಧಿಗಳು ಮೊದಲ್ಗೊಳ್ಳಲಿವೆ. ನಂತರ ಗಣಪತಿ ಹೋಮ ಸೇರಿದಂತೆ ವಿವಿಧ ಹೋಮ­ಗಳು ನಡೆಯುತ್ತವೆ. ಅರಮನೆಯ ಮುಂಭಾಗದಲ್ಲಿ ಕಳಸ ಪೂಜೆ, ಚಪ್ಪರ ಪೂಜೆ ಮೊದಲಾದವು ನೆರವೇರಲಿವೆ.

ಮೆರವಣಿಗೆಗೆ ತಾಲೀಮು
ಅರಮನೆ ಆವರಣದಲ್ಲಿ ಸೋಮ­ವಾರ ಸಂಜೆ 6.30ಕ್ಕೆ ಬೆಳ್ಳಿ ರಥದಲ್ಲಿ ಯದುವೀರ್‌ ಅವರ ಭವ್ಯ ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪೂರ್ವ­ಭಾವಿಯಾಗಿ ಅವರು ಭಾನು­ವಾರ ಕರಿಕಲ್ಲು ತೊಟ್ಟಿಯಲ್ಲಿ ಬೆಳ್ಳಿರಥ­ದಲ್ಲಿ ಕುಳಿತು ತಾಲೀಮು ನಡೆಸಿದರು.
ರಾಜವಂಶಸ್ಥರ ಸಾಂಪ್ರದಾಯಿಕ ಪೇಟ ಧರಿಸಿ ರಥದಲ್ಲಿ ಠೀವಿಯಿಂದ ಆಸೀನ­ರಾಗಿ ಪೋಷಕರೆಡೆಗೆ ನಗೆ ಬೀರಿದರು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಪತ್ನಿ ಪ್ರಮೋದಾ­ದೇವಿ ಒಡೆಯರ್‌ ಮತ್ತು ಅವರ ಸಹೋದರಿಯರು ಅರಮನೆಯ ಕಿಟಕಿ­ಯಿಂದಲೇ ತಾಲೀಮು ನೋಡುತ್ತಾ ಯದು­­­ವೀರ್‌ಗೆ ಸಲಹೆ ನೀಡಿದರು. ಸೋಮವಾರ ನಡೆಯುವ ಯದು­ವೀರ್‌ ಅವರ ಮೆರವಣಿಗೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇದೆ.

Write A Comment