ಕರ್ನಾಟಕ

ಅಂಬರದಲ್ಲಿ ವಿಮಾನಗಳ ಅಬ್ಬರ, ಭುವಿಯಲ್ಲಿ ಜನರ ಸಡಗರ

Pinterest LinkedIn Tumblr

vi

ಬೆಂಗಳೂರು: ಯಲಹಂಕದ ವಾಯು­ನೆಲೆ­ಯಲ್ಲಿ ಲೋಹದ ಹಕ್ಕಿಗಳು ಶನಿವಾರ ತೋರಿದ ರಂಗಿನಾಟಕ್ಕೆ ಸಾಕ್ಷಿ­ಯಾದವರು ಲಕ್ಷಕ್ಕೂ ಅಧಿಕ ಮಂದಿ.

ಜನಸಾಗರ ಕಂಡು ವಿಮಾನಗಳಿಗೆ ಹೊಸ ಹುರುಪು ಬಂದಿತ್ತು. ಬಿಸಿಲ ಝಳ­ದಲ್ಲಿ ಬಸವಳಿದವರಿಗೆ ನಾನಾ ಕಸರತ್ತು ತೋರಿ ಹುರುಪು ನೀಡಿದವು. ವಾಯು­ಪಡೆ ನೆಲೆ ಮೇಲೆ ಸುತ್ತು ಹೊಡೆದ ತಂಡಗಳು ಸಿಡಿಲಬ್ಬರದ ಸದ್ದು ಹೊರಡಿಸಿ ಜನರಲ್ಲಿ ನಡುಕ ಹುಟ್ಟಿಸಿದವು. ನೆಲ ನಡುಗುವಂತೆ ಸದ್ದು ಮಾಡಿದವು. ಸ್ವಚ್ಛಂದ­ವಾಗಿ ನೆಗೆದವು. ಮನ ಬಂದಂತೆ ಲಾಗ ಹಾಕಿದವು. ಜನ ಸಮೂಹದ ಹತ್ತಿರ­ದಲ್ಲೇ ಜಿಗಿದು ಜನರನ್ನು ಕೆಣಕಿದವು.

ಮೊದಲ ಮೂರು ದಿನವೂ ವಿಮಾನ ಸಂತೆಯಲ್ಲಿ ಹುಲಿ ಮರಿಗಳ, ಹಾರುವ ಹೋರಿಗಳ, ಸಾರಂಗಗಳ ಸದ್ದುಗದ್ದಲ ಇತ್ತು. ಇದನ್ನು ಕಣ್ತುಂಬಿಕೊಂಡವರು ಸಾವಿರಾರು ಮಂದಿ. ಆದರೆ, ವಾಯುನೆಲೆಗೆ ಶನಿವಾರ ಹೊಸ ಹುರುಪು ನೀಡಿದ್ದು ‘ಜನ ಸಂತೆ’. ಕಾಲಿಡಲು ಜಾಗ ಇಲ್ಲದ ಸ್ಥಿತಿ. ಪೈಲಟ್‌ಗಳಿಗೆ ಲಲನೆಯರ ಬೆಡಗಿನ ನೋಟದಿಂದ ಸ್ಫೂರ್ತಿ.ಬಣ್ಣ ಬಣ್ಣದ ಕೊಡೆಗಳ ಮೆರವಣಿಗೆ.

ಟೆಕ್ಕಿಗಳು ಹಾಗೂ ವಿಮಾನ ಹಕ್ಕಿಗಳ ಜುಗಲ್‌ಬಂದಿ! ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ಸಾವಿರಾರು ಮಂದಿ ವಾಯುನೆಲೆಯ ದ್ವಾರದ ಬಳಿ ಸರತಿ ಸಾಲಿನಲ್ಲಿ ನಿಂತಿದ್ದರು.

ಪ್ರದರ್ಶನ ಆರಂಭವಾಗುವ ಹೊತ್ತಿಗೆ (ಒಂಬತ್ತು ಗಂಟೆ) ವೀಕ್ಷಣಾ ಸ್ಥಳ ಕಿಕ್ಕಿರಿದು ತುಂಬಿತ್ತು. 10 ಗಂಟೆಯ ಹೊತ್ತಿಗೆ 40,000ಕ್ಕೂ ಅಧಿಕ ಸಂಖ್ಯೆಯ

ಇಲ್ಲಿ ₨50 ರಿಂದ ₨ 7 ಸಾವಿರದ ವರೆಗಿನ ಆಟಿಕೆ ವಿಮಾನಗಳಿವೆ. ಈ ಸಲದ ಪ್ರದರ್ಶನದಲ್ಲಿ ಮೊದಲ ನಾಲ್ಕು ದಿನಗಳಲ್ಲೇ ಭರ್ಜರಿ ಫಸಲು ಸಿಕ್ಕಿದೆ. ‘ಈ ಸಲ ದೊಡ್ಡ ಪ್ರಮಾಣದ ವಹಿವಾಟು ನಡೆದಿದೆ. ಈ ಹಣ ಬಡವರ ಸೇವೆಗೆ ಮೀಸಲು’ ಎಂದು ಮಳಿಗೆಯ ಸಿಬ್ಬಂದಿ ಹೇಳುತ್ತಾರೆ.
ಮಳಿಗೆಯ ಸಿಬ್ಬಂದಿ ಎಚ್‌ಎಎಲ್‌ ಹಿರಿಯ ಉದ್ಯೋಗಿಗಳ ಪತ್ನಿಯರು. ‘ಇದು ನಮ್ಮ ಪುಟ್ಟ ಸಮಾಜಸೇವೆ’ ಎಂದು ಅವರು ನುಡಿಯುತ್ತಾರೆ.

ಜನರು ಜಮಾಯಿಸಿದ್ದರು. ಮಧ್ಯಾಹ್ನದ ವೇಳೆಗೆ ಜನರ ಸಂಖ್ಯೆ ಲಕ್ಷದ ಗಡಿ ದಾಟಿತ್ತು.

ಬಿಸಿಲ ತಾಪ: ಜನರ ಪರಿತಾಪ
ಪೋಷಕರೊಂದಿಗೆ ಬಂದಿದ್ದ ಕೆಲ­ವರು ಬಿಸಿಲ ಝಳಕ್ಕೆ ಒಂದಿಷ್ಟು ಸನ್‌ಸ್ಕ್ರೀನ್ ಲೋಷನ್ ಹಚ್ಚಿ­ಕೊಂಡರು. ಸೂರ್ಯನ ತೀವ್ರ ಕಿರಣ­ಗಳು ಸೋಕದಂತೆ ತಲೆಗೆ  ಟೋಪಿ­ಯನ್ನು ಏರಿಸಿಕೊಂಡರು.

ಇದು ಪ್ರದರ್ಶನದಲ್ಲಿ ಶನಿವಾರ ಕಂಡ ಚಿತ್ರ. ಬಿಸಿಲ ತಾಪದಿಂದ ಜನರು ಪರಿತಾಪ ಪಟ್ಟರು. ಬಿಸಿಲೇರುತ್ತಿದ್ದಂತೆ ನೆರಳಿನ ತಾಣ­ಗಳನ್ನು ಹುಡುಕಿದರು. ನೂರಾರು ಮಂದಿ ಮಳಿಗೆಗಳ ಅಕ್ಕಪಕ್ಕದ ಜಾಗಗ­ಳಲ್ಲಿ ಕುಳಿತು ಪ್ರದರ್ಶನ ವೀಕ್ಷಿಸಿದರು. ಬೆಳಿಗ್ಗೆ ಎಂಟೂವರೆ ವೇಳೆಗೆ ಫ್ರಾನ್ಸ್‌ನ ‘ರಫೆಲ್‌’ ತಂಡದವರು ಜನರಿಗೆ ಪುಕ್ಕಟೆಯಾಗಿ ಟೋಪಿಗಳನ್ನು ವಿತರಿಸಿ­ದರು.

‘ಎಚ್‌ಎಎಲ್‌’ ವತಿ ಯಿಂದ ಸನ್‌ ಪ್ರೊಟೆಕ್ಟರ್‌ ಗಳನ್ನು ನೀಡಲಾ­ಯಿತು. ಬಿರು ಬಿಸಿಲಿನಲ್ಲಿ ಸುಸ್ತು ಹೊಡೆದ ಜನರು ಮಳಿಗೆಗಳಲ್ಲಿ ಸುತ್ತಾ ಡಿದರು. ಬಿಸಿಲ ಲಾಭದಿಂದ ಭರಪೂರ ಲಾಭ ಪಡೆದವರು ವ್ಯಾಪಾ ರಿಗಳು. ‘ಮೂರು ದಿನಗಳಲ್ಲಿ ವ್ಯಾಪಾರ ಲಾಭದಾಯಕವಾ ಗಿರಲಿಲ್ಲ. ಶನಿವಾರ ಒಂದೇ ದಿನ ಮೂರು ದಿನದ ಲಾಭ ಬಂದಿದೆ’ ಎಂದು ತಂಪು ಪಾನೀಯದ ವ್ಯಾಪಾರಿ ವಿಕ್ರಮ್‌ ಸಂತಸ ಹಂಚಿಕೊಂಡರು.

ಜನಸೇವೆಗೆ ಆಟಿಕೆ ವಿಮಾನ ಮಾರಾಟ!
ಎಚ್‌ಎಎಲ್‌ ಸಿಬ್ಬಂದಿಯ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘದ ಮಳಿಗೆಗಳಲ್ಲಿ ಶನಿವಾರ ವಿಪರೀತ ಜನಜಂಗುಳಿ. ಜನರು ಮುಗಿ ಬಿದ್ದು ‘ಆಟಿಕೆ ವಿಮಾನ’ಗಳನ್ನು ಖರೀದಿಸಿದರು.
ಈ ಮಳಿಗೆಯ ವ್ಯಾಪಾರ ವಹಿವಾಟಿನ ಮುಖ್ಯ ಉದ್ದೇಶ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವಂತ­ಹುದು. ಇಲ್ಲಿ ಬಂದ ಲಾಭವನ್ನು ಅಂಗವಿಕಲರಿಗೆ, ಬಡವರಿಗೆ, ವಿದ್ಯಾರ್ಥಿ­ಗಳಿಗೆ ವಿದ್ಯಾರ್ಥಿ ವೇತನ ನೀಡಲು ವಿನಿಯೋಗಿಸುತ್ತಾರೆ.

Write A Comment