ಕರ್ನಾಟಕ

ಕದ್ದ ಆಭರಣ ಖರೀದಿ: ಎಚ್ಚರಿಕೆ

Pinterest LinkedIn Tumblr

pvec14215 Police 02

ಬೆಂಗಳೂರು: ‘ಕಳವು ಮಾಡಿದ ಆಭರಣ-ಗಳನ್ನು ಖರೀದಿಸುವ ಚಿನ್ನಾಭರಣ ವ್ಯಾಪಾ-ರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಪಿ.ಹರಿಶೇಖರನ್‌ ತಿಳಿಸಿದ್ದಾರೆ.

ಕೋರಮಂಗಲ ಪೊಲೀಸರು ಕನ್ನ-ಕಳವು ಆರೋಪಿಗಳನ್ನು ಬಂಧಿಸಿದ ಬಗ್ಗೆ ಅವರು ಶುಕ್ರವಾರ ಪತ್ರಿಕಾಗೋಷ್ಠಿ-ಯಲ್ಲಿ ವಿವರ ನೀಡಿದರು.

‘ಕನ್ನಕಳವು ಆರೋಪಿಗಳಿಂದ ಚಿನ್ನಾ-ಭರಣ ಖರೀದಿಸಿದ್ದ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಸಿಂಗಿ ಗೋಲ್ಡ್‌-ಹೌಸ್‌ ಮಳಿಗೆಯ ಮಾಲೀಕ ರಾಜೇಂದ್ರ-ಕುಮಾರ್‌ ಭವರ್‌ಲಾಲ್‌  ಸೇರಿದಂತೆ ಐದು ಮಂದಿಯನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ’ ಎಂದು ಹರಿಶೇಖರನ್‌ ಹೇಳಿದರು.

ಕಳವು ಮಾಡಿದ ಆಭರಣಗಳೆಂದು ಗೊತ್ತಿದ್ದರೂ ರಾಜೇಂದ್ರಕುಮಾರ್‌, ಅವು-ಗಳನ್ನು ಖರೀದಿಸಿದ್ದರು. ಈ ಕಾರಣ-ಕ್ಕಾಗಿ ಅವರನ್ನು ಬಂಧಿಸಲಾಗಿದೆ. ಅವರ ತಮ್ಮ ಜಸಂತ್‌ಕುಮಾರ್‌ ತಲೆಮರೆಸಿ-ಕೊಂಡಿದ್ದಾರೆ ಎಂದರು.

ಚಿನ್ನ–ಬೆಳ್ಳಿ ವ್ಯಾಪಾರಿಗಳ ಸಂಘದ ಸದಸ್ಯರೊಂದಿಗೆ ಈಗಾಗಲೇ ಮಾತುಕತೆ ನಡೆಸಿ, ಕದ್ದ ಆಭರಣಗಳನ್ನು ಖರೀದಿಸ-ದಂತೆ ಸೂಚಿಸಲಾಗಿದೆ. ಕಳವು ಮಾಲನ್ನು ಖರೀದಿಸುವವರು ಇಲ್ಲದಿದ್ದರೆ ಬಹಳಷ್ಟು ಅಪರಾಧ ಪ್ರಕರಣಗಳಿಗೆ ಕಡಿ-ವಾಣ ಬೀಳುತ್ತದೆ. ಆದರೆ, ನಗರದಲ್ಲಿ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ಕೆಲ ವ್ಯಾಪಾರಿಗಳು ಕಳವು ಮಾಲನ್ನು ಖರೀದಿ-ಸುವ ಮೂಲಕ ಕನ್ನಕಳವು ಹಾಗೂ ಸರ-ಗಳವು ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಂತಹ ವ್ಯಾಪಾರಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದರು.

ತಮಿಳುನಾಡಿನ ವೆಲ್ಲೂರು, ಕೃಷ್ಣಗಿರಿ, ಹೊಸೂರು, ಸೇಲಂನಿಂದ ನಗರಕ್ಕೆ ಬಂದು ಕನ್ನಕಳವು ಮತ್ತು ಸರಗಳವು ಕೃತ್ಯ ಎಸಗುವ ಆರೋಪಿಗಳು ಆಭರಣ-ಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಸ್ಥಳೀಯ ಚಿನ್ನಾಭರಣ ವ್ಯಾಪಾರಿಗಳಿಗೆ ಮಾರುತ್ತಿದ್ದಾರೆ ಎಂದು ತಿಳಿಸಿದರು.

ವಿವರ: ತಮಿಳುನಾಡು ಮೂಲದ ಸೊಹೇಲ್‌ (20), ಮೋಹನ್‌ (23) ಮತ್ತು ಕಾನೂನಿನ ಎದುರು ಸಂಘರ್ಷಕ್ಕೆ ಒಳಪಟ್ಟ ಇಬ್ಬರು ಬಾಲಕರನ್ನು ಬಂಧಿಸಿರುವ ಪೊಲೀಸರು ಸುಮಾರು ಒಂದೂಕಾಲು ಕೆ.ಜಿ ಚಿನ್ನಾಭರಣ ಸೇರಿದಂತೆ ₨ 36.79 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿ-ಕೊಂಡಿದ್ದಾರೆ.

ಆರೋಪಿಗಳು ಕಾಟನ್‌ಪೇಟೆಯ ಚಿನ್ನಾಭರಣ ಮಳಿಗೆ, ಬಸವನಗುಡಿಯ ಬಟ್ಟೆ ಅಂಗಡಿ ಮತ್ತು ಕೋರಮಂಗಲದ ಮನೆಯೊಂದರಲ್ಲಿ ಕಳವು ಮಾಡಿದ್ದರು. ನಂತರ ಆ ಆಭರಣಗಳನ್ನು ರಾಜೇಂದ್ರ-ಕುಮಾರ್‌ ಅವರಿಗೆ ಮಾರಿದ್ದರು. ಬಂಧಿತರಿಂದ ಚಿನ್ನದ ಗಟ್ಟಿ, 600 ಗ್ರಾಂ ಬೆಳ್ಳಿ ವಸ್ತುಗಳು, 14 ವಜ್ರದ ಹರಳು, ಕಾರು ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ.

ಗಿರವಿ ಅಂಗಡಿಗಳಿಗೆ ಮನವಿ
ಆಭರಣಗಳನ್ನು ಗಿರವಿ ಇಟ್ಟು-ಕೊಂಡು ಸಾಲ ನೀಡುವ ಮುತ್ತೂಟ್‌ ಮತ್ತು ಮಣಪ್ಪುರಂ ಮಳಿಗೆಗಳ ಸಿಬ್ಬಂದಿಗೆ ಕದ್ದ ಮಾಲುಗಳ ಬಗ್ಗೆ ಎಚ್ಚರ ವಹಿಸುವಂತೆ ಮನವಿ ಮಾಡಿ-ದ್ದೇವೆ. ಜತೆಗೆ ಅವರ ಬಳಿ ಇರುವ ಆಭ-ರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದು, ಅವರು ಮನವಿಗೆ ಪೂರಕ-ವಾಗಿ ಸ್ಪಂದಿಸಿದ್ದಾರೆ. ಅವರ ನೀಡುವ ವಿವರವನ್ನು ಆಧರಿಸಿ, ಸಂಬಂಧಪಟ್ಟ-ವರ ವಿಚಾರಣೆ ನಡೆಸುತ್ತೇವೆ. ಆಗ ಕೆಲ ಪ್ರಕರಣಗಳ ಪತ್ತೆಗೆ ಸಹಕಾರಿ-ಯಾಗು-ತ್ತದೆ.

–ಪಿ.ಹರಿಶೇಖರನ್‌, ಹೆಚ್ಚುವರಿ ಪೊಲೀಸ್‌ ಕಮಿಷನರ್‌

Write A Comment