ಕರ್ನಾಟಕ

‘ನಿತ್ಯೋತ್ಸವ ಕವಿಗೆ -80’ ವಿಚಾರ ಸಂಕಿರಣ : ಕವಿ ಡಾ.ನಿಸಾರ್ ಅಹ್ಮ ದ್‌ಗೆ ಸಿಗದ ಪಂಪ ಪ್ರಶಸ್ತಿ: ಮೊಯ್ಲಿ ಅಸಮಾಧಾನ

Pinterest LinkedIn Tumblr

nisar__

ಬೆಂಗಳೂರು, ಫೆ. 8: ನಿತ್ಯೋತ್ಸವ ಕವಿ ಡಾ.ಕೆ.ಎಸ್. ನಿಸಾರ್ ಅಹ್ಮದ್ ‘ಪಂಪ ಪ್ರಶಸ್ತಿ’ ಪಡೆಯುವುದಕ್ಕೆ ಎಲ್ಲ ರೀತಿಯಲ್ಲಿಯೂ ಅರ್ಹರಿದ್ದರೂ, ಅದು ಅವರಿ ಗೆ ಸಿಗುತ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಡಾ. ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ಭಾಗವತರು ಸಾಂಸ್ಕೃತಿಕ ಸಂಘಟನೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಿತ್ಯೋತ್ಸವ ಕವಿಗೆ -80’ ಎಂಬ ವಿಚಾರ ಸಂಕಿರಣ ದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನಿಸಾರ್ ಅಹ್ಮದ್ ಎಲ್ಲ ರೀತಿಯ ಪ್ರಶಸ್ತಿಗಳಿಗೂ ಅರ್ಹರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಅವರು ಪ್ರಶಸ್ತಿ ಪಡೆಯುವವರ ಸಾಲಿನಲ್ಲಿ ಅತ್ಯಂತ ಹಿಂದುಳಿದಿದ್ದು, ಇದಕ್ಕೆ ಅನೇಕ ಕಾರಣಗಳಿವೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ಲೇಷಿಸಿದರು.

ಸಮಾಜದಲ್ಲಿನ ಎರಡು ಸಂಸ್ಕೃತಿಗಳ ನಡುವೆ ನಿಂತು ಬರೆಯಬೇಕಾದ ಪರಿಸ್ಥಿತಿ ಬಂದರೂ, ಅವೆರಡನ್ನೂ ಮೀರಿ ಬೆಳೆದು ಅವರು ಸಾಹಿತ್ಯಲೋಕಕ್ಕೆ ಅನನ್ಯ ಸೇವೆ ಸಲ್ಲಿಸಿ ದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಸೃಜನಶೀಲ ಹಾಗೂ ವೈವಿಧ್ಯಮಯ ಸಾಹಿತ್ಯ ನೀಡಿರುವ ಅವರು, ತಮ್ಮ ಕಾವ್ಯದಲ್ಲಿ ಪ್ರೀತಿ, ಪ್ರೇಮ, ಸಮಾಜಮುಖಿ ವಿಷಯ ಗಳಿಗೆ ಹೆಚ್ಚಿನ ಆದ್ಯತೆ ನೀಡಿ ಭಾವನಾತ್ಮಕ ಸಮನ್ವ ಯತೆಯನ್ನು ಕಾಪಾಡಿಕೊಂಡಿದ್ದಾರೆಂದು ಮೊಯ್ಲಿ ಬಣ್ಣಿಸಿದರು.

ಪ್ರಸಕ್ತದ ಸಮಾಜದಲ್ಲಿ ಸಮೂಹಸನ್ನಿ ಪ್ರಕರಣ ಗಳು ಹೆಚ್ಚಾಗುತ್ತಿದ್ದು, ಏಕವ್ಯಕ್ತಿಯ ಹಿಂದೆ ಸೃಜನಶೀಲ ತೆಯನ್ನು ಬಲಿಕೊಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ರಾಜಕೀಯ, ಸಾಮಾಜಿಕ ಹಾಗೂ ಆಧ್ಯಾತ್ಮಕ ಕ್ಷೇತ್ರ ವನ್ನೂ ಬಿಟ್ಟಿಲ್ಲ. ಇದು ಅತ್ಯಂತ ಅಪಾಯ ಕಾರಿ ಬೆಳವ ಣಿಗೆಯಾಗಿದೆ. ಆದರೆ, ನಿಸಾರ್ ತಮ್ಮ ಕಾವ್ಯವಲ್ಲಿ ಇಂತಹ ಪ್ರವೃತ್ತಿಯನ್ನು ಟೀಕಿಸಿದ್ದಾರೆ. ಅದೇ ಕಾರಣಕ್ಕಾ ಗಿಯೇ ‘ಕುರಿಗಳು ಸಾರ್ ಕುರಿಗಳು’ ಕವಿತೆ ಹುಟ್ಟಿಬಂತು. ಈ ಕವಿತೆಯಲ್ಲಿ ಸ್ವಂತಿಕೆಯನ್ನು ಮರೆತ ಜನರನ್ನು ವಿಮರ್ಶಿಸಿದ್ದಾರೆಂದು ನಿಸಾರ್ ಸಾಹಿತ್ಯ ವನ್ನು ಅವರು ಉಲ್ಲೇಖಿಸಿದರು.

ವೈಜ್ಞಾನಿಕ ಮನೋಭಾವ ಬೆಳೆಯದೆ ಈ ದೇಶಕ್ಕೆ ಮುಕ್ತಿಯಿಲ್ಲ. ಮೂಢನಂಬಿಕೆಯಿಂದ ಹೊರಬರದ ಸಮಾಜದ ಪ್ರಗತಿ ಅಸಾಧ್ಯ. ಆದರೆ, ಇತ್ತೀಚೆಗೆ ಶಿಕ್ಷಣ ಪಡೆದವರೇ ವೌಢ್ಯಗಳಿಗೆ ಜೋತು ಬೀಳುತ್ತಿದ್ದಾರೆ. ಇದು ಅತ್ಯಂತ ವಿಷಾದನೀಯ ಎಂದು ಹೇಳಿದ ಮೊಯ್ಲಿ, ನಿಸಾರ್‌ರರ ಕಾವ್ಯಗಳಲ್ಲಿ ವೈಜ್ಞಾನಿಕ ನೆಲೆಗಟ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟರು. ದಲಿತ, ಬಂಡಾಯ, ನವ್ಯ ಹಾಗೂ ನವೋದಯ ಸೇರಿ ಒಂದು ಪ್ರಕಾರಕ್ಕೆ ಅಂಟಿಕೊಳ್ಳದ ನಿಸಾರ್, ತನ್ನ ಸೃಜನಶೀಲತೆಯನ್ನೇ ಸವಾಲಾಗಿಟ್ಟುಕೊಂಡು ಕಾವ್ಯ ರಚಿಸಿದರು. ಅವರ ಎಲ್ಲ ಕಾವ್ಯಗಳಲ್ಲಿ ಅನ್ವೇಷಣಾ ದೃಷ್ಟಿಕೋನ ಇರುತ್ತದೆ. ಸಾಹಿತ್ಯ ಮನಸ್ಸನ್ನು ಒಡೆಯ ಬಾರದು. ಅದು ಮನಸ್ಸನ್ನು ಬೆಸೆಯಬೇಕು. ಆದರೆ ಕೆಲವು ಸಾಹಿತಿಗಳು ಸಮಾಜ ಒಡೆಯುವ ಕೆಲಸ ಮಾ ಡುತ್ತಿದ್ದಾರೆ. ಇದು ಅವರು ಸಮಾಜಕ್ಕೆ ಅತಿದೊಡ್ಡ ದ್ರೋಹ ಬಗೆದಂತಾಗುತ್ತದೆ ಎಂದರು.

ಖ್ಯಾತ ವಿಮರ್ಶಕ ಡಾ. ಪ್ರಭು ಶಂಕರ ಮಾತ ನಾಡಿ, ನಿಸಾರ್ ಅಹ್ಮದ್ ಅವರು ಕಾವ್ಯಗಳ ಮೂಲಕ ಸಮಾಜದ ಮನೆ-ಮನಗಳಲ್ಲಿ ಪ್ರವೇಶಿಸಿದ್ದಾರೆ. ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೇರದ ಸಾರ್ವತ್ರಿಕ ಕವಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ.ನಿಸಾರ್ ಅಹ್ಮದ್, ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ಕನ್ನಡ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ‘ಭಾಗವತರು ಸಾಂಸ್ಕೃತಿಕ ಸಂಘಟನೆ’ಯ ಮುಖಂಡ ರೇವಣ್ಣ, ಮುದ್ದುಮೋಹನ್ ಉಪಸ್ಥಿತರಿದ್ದರು.

Write A Comment