ಕರ್ನಾಟಕ

ಅದ್ದೂರಿ ಕುರ್ಚಿಗೆ ಕೊಕ್: ಮಹಿಳೆಗೆ ಮಣೆ!: ರಾಜ್ಯಪಾಲ ವಜುಭಾಯಿ ವಾಲಾ ಸರಳ ನಡೆ

Pinterest LinkedIn Tumblr

vaju

ಕಲಬುರ್ಗಿ: ವೇದಿಕೆಯಲ್ಲಿ ತಮಗಾಗಿ ಇಟ್ಟಿದ್ದ ‘ಅದ್ದೂರಿ’ ಕುರ್ಚಿ ತೆಗೆಸಿ ‘ಸಾದಾ’ ಕುರ್ಚಿಯಲ್ಲಿ ಆಸೀನರಾದ ರಾಜ್ಯಪಾಲ ವಜುಭಾಯಿ ವಾಲಾ ಅವರು, ಉದ್ಘಾಟನೆಯ ಸಮಯದಲ್ಲಿ ಮೇಣದ ಬತ್ತಿ ಕೊಡಲು ಬಂದಿದ್ದ ಮಹಿಳೆ­ಯಿಂದಲೇ ಜ್ಯೋತಿ ಬೆಳಗಿಸಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಗ್ರಂಥಪಾಲರ ಸಂಘಟನೆ ಗ್ರಂಥಾಲಯ ವಿಷಯ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಗೆ ಶುಕ್ರವಾರ ರಾಜ್ಯಪಾಲರು ಆಗಮಿಸಿದ್ದರು.

ಸಭಾಂಗಣಕ್ಕೆ ಆಗಮಿಸಿದ ರಾಜ್ಯಪಾ­ಲರು ವೇದಿಕೆಯಲ್ಲಿ ತಮಗಾಗಿ ‘ಅದ್ದೂರಿ’ ಕುರ್ಚಿ ಇಟ್ಟಿರುವುದನ್ನು ಗಮನಿಸಿದರು. ವೇದಿಕೆ ಏರುತ್ತಲೇ ಬದಿಯಲ್ಲಿ ನಿಂತಿದ್ದ ಸಂಘಟಕರಿಗೆ ‘ಆ ಕುರ್ಚಿ’ಯನ್ನು ತೆಗೆಯುವಂತೆ ಸೂಚಿಸಿ­ದರು. ರಾಜ್ಯಪಾಲರು ತಮ್ಮ ಬಳಿ ಬಂದು ಹೀಗೆ ಹೇಳುತ್ತಿದ್ದಂತೆ ಅಲ್ಲಿ­ದ್ದವರು ಗಲಿಬಿಲಿಗೊಂಡರು. ಅಷ್ಟೊತ್ತಿ ಗಾಗಲೇ ರಾಜ್ಯಪಾಲರ ಭದ್ರತಾ ಅಧಿಕಾರಿ ‘ಅದ್ದೂರಿ ಕುರ್ಚಿ’ ತೆಗೆದು ಹಿಂದೆ ಇದ್ದ ಸಾದಾ ಕುರ್ಚಿ­ಯನ್ನು ತಂದಿಟ್ಟರು. ಆಗ ರಾಜ್ಯಪಾಲರು ಆಸೀನರಾದರು.

ರಾಜ್ಯಪಾಲರು ಜ್ಯೋತಿ ಬೆಳಗಿಸುವ ಮೂಲಕ ಸಮ್ಮೇಳನ ಉದ್ಘಾಟಿ­ಸಬೇಕಿತ್ತು. ಮಹಿಳೆಯೊಬ್ಬರು ಮೇಣದ ಬತ್ತಿ ಹಿಡಿದುಕೊಂಡು ಕೊಡಲು ಬಂದರು. ಆ ಮಹಿಳೆಯನ್ನು ತಮ್ಮೊ ಟ್ಟಿಗೆ ನಿಲ್ಲಿಸಿಕೊಂಡ ರಾಜ್ಯಪಾಲರು, ಜ್ಯೋತಿಯನ್ನು ಬೆಳಗಿಸುವಂತೆ ಅವರಿಗೆ ಸೂಚಿಸಿದರು. ರಾಜ್ಯಪಾಲರ ಸೂಚನೆ ಯಂತೆ ಆ ಮಹಿಳೆ ಜ್ಯೋತಿ ಬೆಳಗಿಸಿ ದರು. ಆ ನಂತರ ರಾಜ್ಯಪಾಲರು, ಉಳಿದವರು ಜ್ಯೋತಿ ಬೆಳಗಿಸಿ ದರು. ಸಂವಹನದ ಕೊರತೆಯಿಂದಾಗಿ ನಿರೂ­ಪ­­ಕರು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮೊಟಕು ಗೊಳಿಸಿ, ರಾಜ್ಯ ಪಾಲ­ರನ್ನು ಭಾಷಣಕ್ಕೆ ಆಹ್ವಾನಿಸಿದರು. ‘ನನಗೆ ಗಡಿಬಿಡಿ ಇಲ್ಲ. ಎಲ್ಲ ಕಾರ್ಯಕ್ರಮಗಳೂ ಪೂರ್ವ ನಿಗದಿಯಂತೆ ನಡೆಯಲಿ’ ಎಂದು ರಾಜ್ಯಪಾಲರು ಹೇಳಿದರು. ಸಭಾಂಗಣದಲ್ಲಿದ್ದವರು ರಾಜ್ಯ ಪಾಲರ ಸರಳ ನಡೆಗೆ ಚೆಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು.

Write A Comment