ಕರ್ನಾಟಕ

ರಾಜೀನಾಮೆ ನೀಡಲು ಸತೀಶ್‌ಗೆ ನಾನೇ ಸೂಚಿಸಿದೆ: ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿ

Pinterest LinkedIn Tumblr

swami

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ‘ನಮ್ಮ ಸೂಚನೆ ಮೇರೆಗೇ ಸತೀಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀ­ನಾಮೆ ಸಲ್ಲಿಸಿದ್ದಾರೆ’ ಎಂದು ರಾಜಾ­ನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾ­ನಂದಪುರಿ ಸ್ವಾಮಿ ಗುರುವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತ­ನಾಡಿದ ಅವರು,  ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ಸಮಾಜ­ವನ್ನು ಸಂಪೂರ್ಣ­ವಾಗಿ ಕಡೆಗಣಿಸಿ­ದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರು­ವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಾರಕಿ­ಹೊಳಿ ಅವರಿಗೆ ಅಬಕಾರಿ ಖಾತೆ­  ನೀಡಲಾಗಿದೆ. ಆದರೆ  ಇದರಿಂದ ಸಮಾ­ಜಕ್ಕೆ ಯಾವ ಕೊಡುಗೆಯನ್ನು ನೀಡಲು ಸಾಧ್ಯವಿಲ್ಲ. ಅದ್ದರಿಂದ ಸಮಾಜದ ಅಭಿವೃದ್ಧಿಗೆ ಪೂರಕವಾ­ಗುವಂತಹ ಸಮಾಜ ಕಲ್ಯಾಣ ಅಥವಾ ಗ್ರಾಮೀಣಾ­ಭಿವೃದ್ಧಿ­ಯಂತಹ ಪ್ರಮುಖ ಖಾತೆ ನೀಡುವಂತೆ ಈ ಹಿಂದೆ ಮುಖ್ಯಮಂತ್ರಿ­ಯವರನ್ನು ಒತ್ತಾಯಿ­ಸಿದ್ದೆವು.

ಇದಕ್ಕೆ ಅವರು ಸ್ಪಂದಿಸದ ಕಾರಣ ರಾಜೀನಾಮೆ ಸಲ್ಲಿಸುವಂತೆ ಸತೀಶ್‌ ಅವರಿಗೆ ಸೂಚಿಸ­ಲಾಯಿತು’ ಎಂದರು. ‘ಪರಿಶಿಷ್ಟ ಪಂಗಡಕ್ಕೆ ಶೇ ೭.೫ರಷ್ಟು ಮೀಸಲಾತಿ ಕಲ್ಪಿಸುವಂತೆ ಎಂಟು ತಿಂಗಳಿ­ನಿಂದಲೂ ಒತ್ತಾ­ಯಿಸುತ್ತಿದ್ದೇವೆ.  ಆದರೆ, ಯಾವ ಸರ್ಕಾರವೂ ನಮ್ಮ ಮನವಿ ಪರಿಗಣಿಸಿಲ್ಲ. ಸಿದ್ಧ­ರಾಮಯ್ಯ ಮಂತ್ರಿ ಮಂಡಲದಲ್ಲಿ ಸಣ್ಣ ಪುಟ್ಟ ಜಾತಿ­ಗಳಿಗೆ 2–3 ಮಂತ್ರಿ ಸ್ಥಾನ ನೀಡಲಾಗಿದೆ. ರಾಜ್ಯದಲ್ಲಿ ೪೫ ಲಕ್ಷ ಜನಸಂಖ್ಯೆ ಹೊಂದಿ­ರುವ ವಾಲ್ಮೀಕಿ ಜನಾಂಗಕ್ಕೆ ಕೇವಲ ಒಂದು ಮಂತ್ರಿ ಸ್ಥಾನ ಮಾತ್ರ ನೀಡ­ಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ­ಯನ್ನು ಶೇ ೭.೫ಕ್ಕೆ ಹೆಚ್ಚಿಸಬೇಕು. ಮೇಲಾಗಿ ರಾಜಕೀಯ ಮೀಸಲಾತಿ ಅನ್ವಯ ಇನ್ನೂ ಮೂವರಿಗೆ ಸಚಿವ ಸ್ಥಾನ ನೀಡಿದರೆ ಸತೀಶ್ ಜಾರಕಿಹೊಳಿ ಅವರಿಗೆ ರಾಜೀ­ನಾಮೆ ಹಿಂಪಡೆಯುವಂತೆ ಸೂಚಿಸಲಾ­ಗು­ವುದು ಎಂದರು. ಇಲ್ಲವಾದಲ್ಲಿ ಪರಿಶಿಷ್ಟ ಪಂಗ­ಡಕ್ಕೆ ಸೇರಿದ ೧೫ ವಿಧಾನಸಭಾ ಸದಸ್ಯರ ರಾಜೀನಾಮೆ ಕೊಡಿಸಲಾಗು­ವುದು’ ಎಂದು  ಅವರು ಎಚ್ಚರಿಸಿದರು.

jar

 

Write A Comment