ಕರ್ನಾಟಕ

ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ದಿಗ್ವಿಜಯ್‌ಸಿಂಗ್ ಅಭಯ

Pinterest LinkedIn Tumblr

Siddaramaiah CM Karnataka_0_0

ಬೆಂಗಳೂರು, ಜ.24: ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡುವ ಆರೋಪಗಳಿಗೆ ಹೆದರುವ ಅಗತ್ಯವಿಲ್ಲ. ನಿಮ್ಮ ಕೆಲಸವನ್ನು ನೀವು ಧೈರ್ಯ ವಾಗಿ ಮಾಡಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಯ ನೀಡಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ದಿಗ್ವಿಜಯ್‌ಸಿಂಗ್ ಅವರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭೇಟಿ ಮಾಡಿ ಮಾತನಾಡಿದ ವೇಳೆ ಈ ಭರವಸೆ ನೀಡಿದರು.

ರಾಜ್ಯ ರಾಜಕಾರಣ ಸೇರಿದಂತೆ ಇನ್ನಿತರ ಪ್ರಮುಖ ವಿಚಾರಗಳ ಚರ್ಚೆ ನಡೆಸುವ ವೇಳೆ ಅರ್ಕಾವತಿ ಡಿ ನೋಟಿಫಿಕೇಷನ್‌ನಲ್ಲಿನ ವಾಸ್ತವಾಂಶ ಗಳನ್ನು ಸಿದ್ಧರಾಮಯ್ಯ ದಿಗ್ವಿಜಯ್‌ಸಿಂಗ್ ಅವರ ಗಮನಕ್ಕೆ ತಂದರು.

ಈ ವೇಳೆ ದಾಖಲೆಗಳನ್ನು ಪರಿಶೀಲಿಸಿ ಕಾನೂನು ತಜ್ಞರ ಅಭಿಪ್ರಾಯ ಪಡೆದ ಅವರು ಅನಗತ್ಯವಾಗಿ ಬಿಜೆಪಿ ಮಾಡುವ ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ರಾಜಕಾರಣಕ್ಕಾಗಿ ಮಾಡುವ ಆರೋಪಗಳ ಬಗ್ಗೆ ಎಚ್ಚರದಿಂದಿರಿ ಎಂದರು. ಸದಸ್ಯತ್ವ ನೋಂದಣಿ ಅಭಿಯಾನ ದಲ್ಲಿ ನಿರೀಕ್ಷೆಗೂ ಮೀರಿ ಗುರಿ ತಲುಪಿದೆ. ಜ.30, 31 ಹಾಗೂ ಫೆ.1 ರಂದು ಸದಸ್ಯತ್ವ ನೋಂದಣಿ ಕುರಿತ ವಿವರಗಳ ಬಗ್ಗೆ ವರದಿ ಸಲ್ಲಿಸುವಂತೆ ತಿಳಿಸಿದರು. ಕಾಂಗ್ರೆಸ್ ಪಕ್ಷ ಯಾವುದೇ ಮುಜುಗರ ಒಳಗಾಗದ ರೀತಿಯಲ್ಲಿ ನಡೆದುಕೊಳ್ಳಿ. ಸರ್ಕಾರಕ್ಕೆ ಮುಜುಗರ ವಾಗುವಂತಹ ಯಾವುದೇ ಹೇಳಿಕೆ ಗಳನ್ನು ನೀಡಬೇಡಿ ಎಂದು ಸಲಹೆ ಮಾಡಿದರು.

ಒಂದೇ ಊರಿನಲ್ಲಿದ್ದೀರಿ. ಪ್ರಸ್ತುತ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದ ರೀತಿಯಲ್ಲಿ ಹೇಳಿಕೆ ನೀಡಿ. ಆರೋಪ ಗಳನ್ನೇ ಮಾಡುತ್ತಾ ಕೂರುವುದು ತರವಲ್ಲ. ಎಲ್ಲೆಡೆ ಸೋಲಿನ ಹಾದಿಯೇ ಹೆಚ್ಚಾಗಿರುವ ಈ ದಿನಗಳಲ್ಲಿ ಜಾಗರೂ ಕತೆಯಿಂದ ಮಾತನಾಡು ವುದು ಒಳಿತು. ಇದರಿಂದ ಕರ್ನಾಟಕದಲ್ಲಿನ ಕಾಂಗ್ರೆಸ್ ಅಧಿಪತ್ಯಕ್ಕೆ ಯಾವುದೇ ತೊಡಕುಂಟಾಗ ದಂತೆ ನೋಡಿಕೊಳ್ಳಲು ತಾಕೀತು ಮಾಡಿದರು. ಆರೋಪ-ಪ್ರತ್ಯಾರೋಪಗಳೇನೇ ಇರಲಿ ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಉತ್ತಮ ಕೆಲಸ ನಿರ್ವಹಿಸಿ ಎಂದು ಸಲಹೆ ಮಾಡಿದ ಅವರು, ಮುಂದಿನ ಸಂಪುಟ ವಿಸ್ತರಣೆ ವೇಳೆ ನಿಮ್ಮನ್ನು ಪರಿಗಣಿಸುವುದಾಗಿ ಪರಮೇಶ್ವರ್‌ಗೆ ಹೇಳಿದ ಅವರು ಅನಗತ್ಯ ಹೇಳಿಕೆ ಗಳಿಂದ ದೂರವಿರಲು ಸೂಚಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತ ಮುಖ್ಯಮಂತ್ರಿ ಕಾಗೋಡು ತಿಮ್ಮಪ್ಪ ಹೇಳಿಕೆಗಳು ಸೇರಿದಂತೆ ಇನ್ನೂ ಕೆಲವು ವ್ಯವಹಾರಿಕ ಹಾಗೂ ಖಾಸಗಿ ವಿಷಯಗಳ ಬಗ್ಗೆ ಕೂಲಂಕಷ ಚರ್ಚೆ ಮಾಡಿ ಸಲಹೆ, ಸೂಚನೆಗಳನ್ನು ಪಡೆದರು. ಈ ಸಂದರ್ಭದಲ್ಲಿ ಸಚಿವ ಕೆ.ಜೆ. ಜಾರ್ಜ್ ಉಪಸ್ಥಿತರಿದ್ದರು.

Write A Comment