ಕರ್ನಾಟಕ

10,500 ಎಕರೆ ಭೂಪ್ರದೇಶದಲ್ಲಿ ದೇಶದಲ್ಲಿಯೇ ಅತಿ ದೊಡ್ಡ ಐಟಿ ಹಬ್‌ ನಿರ್ಮಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

pvec21115 mh pura cap jemini

ಮಹದೇವಪುರ: ‘ಬೆಂಗಳೂರು ಹೊರ-ವಲಯದ ದೇವನಹಳ್ಳಿಯಲ್ಲಿ ಒಟ್ಟು 10,500 ಎಕರೆ ಭೂಪ್ರದೇಶದಲ್ಲಿ ದೇಶದಲ್ಲಿಯೇ ಅತೀ ದೊಡ್ಡ ಐಟಿ ಹಬ್‌ ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

ಮೊದಲ ಹಂತದಲ್ಲಿ ಈಗಾಗಲೇ 2,073 ಎಕರೆ ಭೂಮಿಯನ್ನು ಸ್ವಾಧೀನ–ಗೊಳಿಸುವ ಕಾರ್ಯ ನಡೆದಿದೆ. ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸು-ವಂತೆ ಕೆಐಎಡಿಬಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಇಲ್ಲಿನ ವೈಟ್‌ಫೀಲ್ಡ್‌ನಲ್ಲಿರುವ ಪ್ರಮುಖ ಸಲಹೆ, ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ  ಕ್ಯಾಪ್‌ಜೆಮಿನಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

‘ದೇಶದಲ್ಲಿ ಐಟಿ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಐಟಿ ಕಂಪೆನಿಗಳು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗದೇ, ಮೈಸೂರು, ಬೆಳ-ಗಾವಿ, ತುಮಕೂರು ಸೇರಿದಂತೆ ವಿವಿಧ ಪ್ರಮುಖ ಜಿಲ್ಲೆಗಳಿಗೂ ವಿಸ್ತರಣೆಗೊಳ್ಳ-ಬೇಕು. ಅಂತಹ ವಿಸ್ತರಣೆ ಮತ್ತು ಬೆಳವಣಿಗೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಅವರು ಭರವಸೆ ನೀಡಿದರು.

ಸಚಿವ ಎಸ್‌.ಆರ್‌. ಪಾಟೀಲ್‌ ಮಾತ-ನಾಡಿ, ‘ದೇಶದಲ್ಲಿನ ಐಟಿಬಿಟಿ ಕ್ಷೇತ್ರದಲ್ಲಿ ಈಗಾಗಲೇ 40 ಲಕ್ಷ ಉದ್ಯೋ-ಗಿ-ಗಳಿದ್ದಾರೆ. ಮುಂದಿನ 2020ರ ವೇಳೆಗೆ 80 ಲಕ್ಷದಷ್ಟು ಉದ್ಯೋಗಿಗಳು ಐಟಿಬಿಟಿ ಕ್ಷೇತ್ರದಲ್ಲಿರು-ತ್ತಾರೆ. ಅಂತಹ ಬೆಳವಣಿಗೆಯ ಹಂತ-ವನ್ನು ನಾವು ಬೆಂಗಳೂರು ನಗರದಲ್ಲಿ ಕಾಣುತ್ತಿದ್ದೇವೆ’ ಎಂದು ಹೇಳಿದರು.

ಕ್ಯಾಪ್‌ಜೆಮಿನಿ ಇಂಡಿಯಾದ ಸಿಇಒ ಅರುಣಾ ಜಯಂತಿ ಮಾತನಾಡಿ, ‘ಕ್ಯಾಪ್‌ಜೆಮಿನಿ ಕಂಪೆನಿ ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ 1.4ಕ್ಕೂ ಹೆಚ್ಚು ಕಾರ್ಮಿಕರೊಂದಿಗೆ ಸಲಹೆ, ತಂತ್ರಜ್ಞಾನ ಹಾಗೂ ಹೊರಗುತ್ತಿಗೆ ಸೇವೆಗಳನ್ನು ಒದಗಿಸುತ್ತಿರುವ ಪ್ರಮುಖ ಕಂಪನಿಯಾಗಿದೆ’ ಎಂದು ತಿಳಿಸಿದರು.

‘ಬೆಂಗಳೂರು ನಗರ ನಮ್ಮ ಸಂಸ್ಥೆಯು ಬೆಳೆಯುತ್ತಿರುವ ಕೇಂದ್ರಗಳ ಪೈಕಿ ಒಂದಾ-ಗಿದ್ದು, ವಿವಿಧೆಡೆಗಳಲ್ಲಿ ಹರಡಿರುವ ನಮ್ಮ ನಾಲ್ಕು ಮುಖ್ಯ ಕಚೇರಿಗಳಲ್ಲಿ 18 ಸಾವಿರಕ್ಕೂ ಹೆಚ್ಚು ಉದ್ಯೋಗಿಳಿದ್ದಾರೆ ಎಂದರು.

ಐಟಿ ವಲಯದ ಅತೀ ದೊಡ್ಡ ಕೇಂದ್ರ-ಸ್ಥಾನವೆನಿಸಿರುವ ಬೆಂಗಳೂರಿನಲ್ಲಿ ಅತ್ಯಂತ ಪ್ರತಿಭಾನ್ವಿತ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಕಾರ್ಯತಾಂತ್ರಿಕ ಪ್ರದೇಶಗಳಲ್ಲಿ ಕ್ಯಾಪ್‌ಜೆಮಿನಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತ ಮುನ್ನಡೆಯುತ್ತಿದೆ’ ಎಂದು ಅವರು ಹೇಳಿದರು.

Write A Comment