ಕರ್ನಾಟಕ

ಬೆಂಗಳೂರಿನ ಸೆಂಟ್ರಲ್ ಮಾಲ್‌ಗೆ ಬಾಂಬ್ ಬೆದರಿಕೆ

Pinterest LinkedIn Tumblr

Centrala-malaal

ಬೆಂಗಳೂರು, ಡಿ.24: ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಸೆಂಟ್ರಲ್ ಮಾಲ್‌ಗೆ ಬಾಂಬ್ ಇಡಲಾಗಿದೆ ಎಂದು ಬೆಳಿಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದ ಹಿನ್ನೆಲೆಯಲ್ಲಿ ಮಾಲ್ ಸುತ್ತ ತಪಾಸಣೆ ನಡೆಸಲಾಯಿತು. ಅಶೋಕನಗರ ಠಾಣೆ ವ್ಯಾಪ್ತಿಯ ಎಂಜಿ ರಸ್ತೆಯಲ್ಲಿರುವ ಬೆಂಗಳೂರು ಸೆಂಟ್ರಲ್ ಮಾಲ್‌ಗೆ ಬಾಂಬ್ ಇಡಲಾಗಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಬೆಳಿಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾನೆ.

ದೂರವಾಣಿ ಕರೆ ಹಿನ್ನೆಲೆಯಲ್ಲಿ ಅಶೋಕನಗರ ಪೊಲೀಸರು ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಬಾಂಬ್ ಪತ್ತೆದಳದೊಂದಿಗೆ ತೆರಳಿ ತಪಾಸಣೆ ನಡೆಸಿದಾಗ ಇದು ಹುಸಿ ಕರೆ ಎಂಬುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಕರೆ ಮಾಡಿದ ವ್ಯಕ್ತಿಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಆತಂಕ: ಸೆಂಟ್ರಲ್ ಮಾಲ್ ಸುತ್ತ ಪೊಲೀಸರು ಶ್ವಾನದಳದೊಂದಿಗೆ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ ಗ್ರಾಹಕರು ಆತಂಕಗೊಂಡಿದ್ದರು. ತದನಂತರ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆಯಲ್ಲಿ ನಿಟ್ಟುಸಿರು ಬಿಟ್ಟರು.

Write A Comment