ಕರ್ನಾಟಕ

ಸದನದಲ್ಲಿ ಮೊಬೈಲ್ ಬಳಕೆಗೆ ನಿಷೇಧ

Pinterest LinkedIn Tumblr

pvec11Priyanka

ಬೆಳಗಾವಿ(ಪಿಟಿಐ): ವಿಧಾನ ಮಂಡಲದಲ್ಲಿ ಕಲಾಪ ನಡೆಯುವ ವೇಳೆ ಮೊಬೈಲ್ ಬಳಕೆ ನಿಷೇಧಿಸಿ ಶುಕ್ರವಾರ ನಿರ್ಧಾರ ಕೈಗೊಳ್ಳಲಾಗಿದೆ.

ಬಿಜೆಪಿ ಶಾಸಕ ಪ್ರಭು ಚವಾಣ್ ಅವರು ವಿಧಾನಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಚಿತ್ರವನ್ನು ಮೊಬೈಲ್ ನಲ್ಲಿ ವೀಕ್ಷಿಸಿದ ಘಟನೆ ಗುರುವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಈ ಘಟನೆ ಸಂಬಂಧ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಶಾಸಕ ಪ್ರಭು ಚವಾಣ್ ಅವರನ್ನು ಶುಕ್ರವಾರ ಒಂದು ದಿನದಮಟ್ಟಿಗೆ ಅಮಾನತು ಗೊಳಿಸಿದರು.

ವಸತಿ ಸಚಿವ ಅಂಬರೀಷ್ ಹಾಗೂ ಕಾಂಗ್ರೆಸ್ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕೂಡ ಸದನದಲ್ಲಿ ಮೊಬೈಲ್ ಮೂಲಕ ವಿಡಿಯೊ ವೀಕ್ಷಿಸಿದ್ದಾರೆ ಎಂಬ ಆರೋಪ ಅದರೊಂದಿಗೆ ತಳಕು ಹಾಕಿಕೊಂಡಿತ್ತು.

‘ಸದನದಲ್ಲಿ ಕಲಾಪ ನಡೆಯವ ವೇಳೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಅಧಿವೇಶನ ನಡೆಯುವ ವೇಳೆ ಬಿಜೆಪಿ ಶಾಸಕ ಪ್ರಭು ಚವಾಣ್ ಅವರು ಮೊಬೈಲ್ ನಲ್ಲಿ ಚಿತ್ರ ವೀಕ್ಷಿಸಿದ್ದರಿಂದ ಅವರನ್ನು ಒಂದು ದಿನದಮಟ್ಟಿಗೆ ಅಮಾನತು ಮಾಡಲಾಗಿದೆ’ ಎಂದು ಕಾಗೋಡು ತಿಮ್ಮಪ್ಪ ಅವರು ಸದನಕ್ಕೆ ತಿಳಿಸಿದರು.

ಚವಾಣ್ ಸದನದ ಕ್ಷಮೆ ಯಾಚಿಸಬೇಕು ಮತ್ತು ಎರಡು ದಿನಗಳ ಮಟ್ಟಿಗಾದರೂ ಅವರನ್ನು ಅಮಾನತು ಮಾಡಬೇಕು ಎಂದು ಶುಕ್ರವಾರ ಕಾಂಗ್ರೆಸ್ ಪಟ್ಟು ಹಿಡಿದಿತ್ತು.

Write A Comment