ಕರ್ನಾಟಕ

ಕಾರ್ಮಿಕರ ಸುರಕ್ಷತೆ ಮಾಲೀಕರ ಜವಾಬ್ದಾರಿ: ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್

Pinterest LinkedIn Tumblr

pvec05dec14rjKSSI02

ಬೆಂಗಳೂರು: ‘ಕಾರ್ಮಿಕರ ಸುರಕ್ಷತೆ  ಮತ್ತು ಪರಿಸರ ರಕ್ಷಣೆಯೂ ಕೈಗಾರಿಕೆ­ಗಳ ಮಾಲೀಕರ ಜವಾಬ್ದಾರಿಯಾ­ಗಿದೆ. ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗ­ಳನ್ನು ಅಳವಡಿಸಿಕೊಂಡು ಜೀವ­ಹಾನಿ ಆಗುವುದನ್ನು ತಪ್ಪಿಸಬೇಕು’  ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್ ಅವರು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಖಾನೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ  ಮತ್ತು ಸ್ವಾಸ್ಥ್ಯ ಇಲಾಖೆಯು ನಗರ­ದಲ್ಲಿ ಗುರುವಾರ  ನಡೆದ ‘ರಾಸಾಯನಿಕ ವಿಪತ್ತು ನಿವಾರಣಾ ದಿನಾಚರಣೆ’ಯ   ಉದ್ಘಾಟನಾ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.

‘ಕೈಗಾರಿಕೆಗಳ ಆಡಳಿತ ಮಂಡಳಿಯು ರಾಸಾಯನಿಕ ಅನಿಲ ಅವಘಡಗಳ ಬಗ್ಗೆ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು. ಕಾರ್ಖಾನೆ­ಗಳಲ್ಲಿ ಅಪಾಯಕಾರಿ ರಾಸಾಯನಿಕ ವಸ್ತುಗಳ ಉಪ­ಯೋಗವನ್ನು ಕಡಿಮೆ­ಗೊ­ಳಿ­ಸಬೇಕು. ವಿಪತ್ತಿನ ಸಂದರ್ಭದಲ್ಲಿ ಕಾರ್ಮಿಕರು ಯಾವ ರೀತಿ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು ಎನ್ನುವು­ದರ ಬಗ್ಗೆ ಕಡ್ಡಾಯವಾಗಿ ತರಬೇತಿ ನೀಡಬೇಕು’ ಎಂದು ಸಲಹೆ ನೀಡಿದರು.

‘ಅಧಿಕಾರಿಗಳು ಕಾಟಾಚಾರಕ್ಕೆ  ಕೈಗಾ­ರಿಕೆ­ಗಳಲ್ಲಿನ ಬ್ಲಾಯರ್‌ಗಳ ಪರಿ­ಶೀಲನೆ  ನಡೆಸಬಾರದು. ಒಂದು ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಹೀಗಾಗಿ ಸದಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸ­ಬೇಕು’ ಎಂದು ನುಡಿದರು.

ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ  ಡಾ.ಕಿರಣ್ ಮಜುಮ್‌ದಾರ್ ಷಾ ಮಾತ­ನಾಡಿ, ‘ಕೈಗಾರಿಕೆಯಲ್ಲಿ ಸುರಕ್ಷತೆ ಸಂಬಂಧಿಸಿದಂತೆ ದೇಶದಲ್ಲಿ ಸಾಕಷ್ಟು ಕಾನೂನುಗಳಿವೆ.  ಆದರೆ, ಅವು ಸಮ­ರ್ಪ­ಕವಾಗಿ ಅನುಷ್ಠಾನ­ವಾ­ಗುತ್ತಿಲ್ಲ.  ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಅಭಿಯಾ­ನದ ಜೊತೆಗೆ ‘ಸುರಕ್ಷತೆ ಅಭಿಯಾನ­ವನ್ನು ಜಾರಿಗೊಳಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಕನ್ನಡಿಗರಿಗೆ ಉದ್ಯೋಗ: ಮಾಹಿತಿ ಕಲೆ ಹಾಕಲಾಗುತ್ತಿದೆ
‘ಡಾ.ಸರೋಜಿನಿ ಮಹಿಷಿ ವರದಿ ಪ್ರಕಾರ ರಾಜ್ಯದ ಎಲ್ಲಾ ಕೈಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸ­ಲಾಗಿದೆ. ಯಾವ ಕಂಪೆನಿಗಳು ಎಷ್ಟು ಉದ್ಯೋಗ ನೀಡಿವೆ ಎಂಬ ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳು  ಸೂಚಿಸಿ­ದ್ದಾರೆ. ಈ ಸಲುವಾಗಿ ಅಧಿ­ಕಾರಿಗಳು ಮಾಹಿತಿ ಕಲೆ  ಹಾಕುತ್ತಿ­ದ್ದಾರೆ’ ಎಂದು ಕಾರ್ಮಿಕ ಸಚಿವರು ಮಾಹಿತಿ ನೀಡಿದರು.

Write A Comment