ಬೆಂಗಳೂರು: ‘ಚೈನ್ ಲಿಂಕ್’ ವ್ಯವ ಹಾರದ ಹೆಸರಿನಲ್ಲಿ ಹಣದ ಆಮಿಷ ಒಡ್ಡಿ, ಸಾರ್ವಜನಿಕರಿಂದ ಸುಮಾರು ರೂ. 50 ಕೋಟಿವರೆಗೆ ಹಣ ಸಂಗ್ರಹಿಸಿದ್ದ ನ್ಯೂಜಿಲೆಂಡ್ ದೇಶದ ಮಹಿಳೆ ಸೇರಿ ನಾಲ್ಕು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿಯೊಬ್ಬರು ಸಿಸಿಬಿಗೆ ದೂರು ಕೊಟ್ಟಿ ದ್ದರು. ದೂರನ್ನು ಆಧರಿಸಿ ಆರೋ ಪಿಗಳು ತಂಗಿದ್ದ ರಾಜಭವನ ರಸ್ತೆಯ ‘ಕ್ಯಾಪಿಟಲ್’ ಹೋಟೆಲ್ ಮೇಲೆ ಬುಧವಾರ ದಾಳಿ ನಡೆಸಲಾ ಯಿತು. ನಾಲ್ಕು ಮಂದಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ರೂ. 1.25 ಲಕ್ಷದ ಉಪಕರ ಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ನ್ಯೂಜಿಲೆಂಡ್‌ನ ಡೆನಿಸ್ (52), ಹೆಬ್ಬಾಳದ ಭುವನೇಶ್ವರಿನಗರ ನಿವಾಸಿ ಕಿರಣ್ ಜೆ.ಮೋದಿ (39), ಆತನ ಅಣ್ಣ ಹಿತೇಶ್ ಜೆ.ಮೋದಿ (42) ಹಾಗೂ ಎಲ್‌ಐಸಿ ಏಜೆಂಟ್ ಆಗಿರುವ ಎಚ್ ಬಿಆರ್ ಲೇಔಟ್‌ನ ಮಹಮದ್ ಖರಂ (44) ಎಂಬುವರನ್ನು ಬಂಧಿಸ ಲಾಗಿದೆ. ಆರೋಪಿಗಳ ವಿರುದ್ಧ ವಂಚನೆ (ಐಪಿಸಿ 420) ಹಾಗೂ ‘1978ರ ಪ್ರೈಜ್ ಚಿಟ್ ಮನಿ ಸರ್ಕ್ಯುಲೇಷನ್ ಆಕ್ಟ್’ನ ಅನ್ವಯ ಕಬ್ಬನ್‌ಪಾರ್ಕ್ ಠಾಣೆ ಯಲ್ಲಿ ಪ್ರಕರಣ ದಾಖಲಿ ಸಲಾಗಿದೆ’ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ತಿಳಿಸಿದರು.
ಹೇಗೆ ವಂಚನೆ?‘ಕಂಪ್ಯೂಟರ್ ಮತ್ತು ಅಂತರ್ಜಾಲದ ಸೌಲಭ್ಯವುಳ್ಳ ಯಾರು ಬೇಕಾದರೂ ಸುಲಭವಾಗಿ ಹಣ ಸಂಪಾ ದಿಸಬಹುದು. ಆಸಕ್ತರು www. smartmeditechnologies.com ವೆಬ್‌ಸೈಟ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ರೀತಿಯ ಸದಸ್ಯತ್ವಕ್ಕೆ ಆರಂಭದಲ್ಲಿ 130 ಡಾಲರ್ ಮತ್ತು ವೃತ್ತಿಪರ ಸದಸ್ಯತ್ವಕ್ಕೆ 405 ಡಾಲರ್ ಶುಲ್ಕ ಪಾವ ತಿಸಬೇ ಕಾಗುತ್ತದೆ. ಒಮ್ಮೆ ಸದಸ್ಯ ರಾದರೆ, ಈ ವೆಬ್‌ಸೈಟ್‌ಗೆ ಬರುವ ಜಾಹೀರಾತಿನಿಂದ ತಮ್ಮ ಆದಾಯ ವೃದ್ಧಿಯಾಗುತ್ತದೆ’ ಎಂದು ಆರೋಪಿ ಗಳು ಜನರಿಗೆ ನಂಬಿಸು ತ್ತಿದ್ದರು.
ಫೇಸ್‌ಬುಕ್ ಮಾದರಿಯಲ್ಲೇ ಈ ವೆಬ್‌ಸೈಟ್ ಬಳಸಬಹುದು. ಹೊಸ ಸದಸ್ಯರನ್ನು ನೋಂದಣಿ ಮಾಡಿಸಿದರೆ 25 ಡಾಲರ್ ಕಮಿಷನ್ ಜತೆಗೆ 100 ಪಾಯಿಂಟ್‌ಗಳು ಸಿಗುತ್ತವೆ. ಸದಸ್ಯರು ಹೆಚ್ಚು ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡುತ್ತಾ ಹೋದಂತೆ ಆದಾಯ ವೃದ್ಧಿಯಾಗುತ್ತದೆ. ಹೀಗೆ 300 ರಿಂದ 600 ಪಾಯಿಂಟ್ ಗಳಿಸಿದರೆ 25 ಡಾಲರ್ ಹೆಚ್ಚುವರಿ ಡಾಲರ್ ನೀಡಲಾ ಗುವುದು ಎಂದು ಹೇಳುವ ಮೂಲಕ ವಿಶ್ವಾಸ ಗಿಟ್ಟಿಸಿಕೊಳ್ಳುತ್ತಿದ್ದರು.
ಆರೋಪಿ ಡೆನಿಸ್ ಖಾತೆಯಲ್ಲಿ ಒಟ್ಟು 32,339 ಸದಸ್ಯರಿದ್ದಾರೆ. ಇಷ್ಟು ಮಂದಿ ಯಿಂದ ಸಂಗ್ರಹಿಸಿದ ಹಣ ಲೆಕ್ಕ ಹಾಕಿದರೆ ರೂ. 50 ಕೋಟಿ ದಾಟುತ್ತದೆ. ಅಮೆರಿಕಾದ 200, ಮಲೇಷ್ಯಾದ 28,000, ನ್ಯೂಜಿಲೆಂಡ್‌ನ 500, ದುಬೈನ 200, ಪಾಕಿಸ್ತಾನದ 100 ಹಾಗೂ ಭಾರತದ 1,700 ಮಂದಿ ಇದರಲ್ಲಿ ಸದಸ್ಯರಾ ಗಿದ್ದಾರೆ ಎಂದು ಅಧಿಕಾರಿಗಳು ವಿವರಿ ಸಿದರು.
5 ವರ್ಷಗಳಿಂದ ವಂಚನೆ: ‘ಆರೋಪಿ ಡೆನಿಸ್, ಐದು ವರ್ಷಗಳಿಂದ ಈ ವಂಚನೆ ಜಾಲದಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾಳೆ. ಅಮೆರಿಕಾ, ಭಾರತ, ಪಾಕಿಸ್ತಾನ, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಇದೇ ರೀತಿ ವಂಚನೆ ಮಾಡಿ ದ್ದಾಳೆ. ಪ್ರತಿಷ್ಠಿತ ಹೋಟೆಲ್‌ಗ ಳಲ್ಲಿ ತಂಗುವ ಈಕೆ, ‘ಚೈನ್‌ಲಿಂಕ್’ ದಂಧೆ ಮೂಲಕ ಹಣ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾಳೆ’ ಎಂದರು.
ಜುಕರ್‌ಬರ್ಗ್ ಆಗಬಹುದು
‘ಫೇಸ್‌ಬುಕ್‌ನಲ್ಲಿ ಆದಾಯವೇ ಜಾಹೀರಾತು. ನಮ್ಮ ವೆಬ್‌ಸೈಟ್ ಕೂಡ ಅದೇ ಮಾದರಿಯಲ್ಲಿರುತ್ತದೆ. ನೀವು ಸದಸ್ಯರಾದರೆ, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ನಂತೆ ಹಣ ಸಂಪಾದನೆ ಮಾಡಬಹುದು. ಒಮ್ಮೆ ಸದಸ್ಯತ್ವ ಪಡೆದುಕೊಂಡು, ಪಿರಮಿಡ್ ಮಾದರಿಯಲ್ಲಿ ಸದಸ್ಯರನ್ನು ಹೆಚ್ಚಿಸುತ್ತಾ ಕಮಿಷನ್ ಹಣ ಪಡೆದುಕೊಳ್ಳಬಹುದು. ಜತೆಗೆ ಜಾಹೀರಾತು ಕೂಡ ನಿಮಗೆ ಹಣದ ಮೂಲವಾಗುತ್ತದೆ’ ಎಂದು ಆರೋಪಿಗಳು ಆಮಿಷ ಒಡ್ಡಿದ್ದರು.
ಹಣ ಹೂಡಬೇಡಿ
‘ಈ ಚೈನ್‌ಲಿಂಕ್ ದಂಧೆ ಇಂದು ನಿನ್ನೆಯದಲ್ಲ. ಹೀಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡುವ ಜಾಲ ಜಗತ್ತಿನಾದ್ಯಂತ ಇದೆ. ಈ ಬಗ್ಗೆ ಜನ ಎಚ್ಚರ ವಹಿಸಬೇಕು. ಇಂಥ ಜಾಲಗ ಳಿಗೆ ಯಾವುದೇ ಕಾರಣಕ್ಕೂ ಹಣ ಹೂಡಬಾರದು’
– ಅಭಿಷೇಕ್ ಗೋಯಲ್, ಸಿಸಿಬಿ ಡಿಸಿಪಿ
ಹೋಟೆಲ್ ವಿರುದ್ಧ ಕ್ರಮ
ಅಕ್ಟೋಬರ್ 9ರಂದು ನಗರಕ್ಕೆ ಬಂದಿರುವ ಡೆನಿಸ್, ಕ್ಯಾಪಿಟಲ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಳು. ನಂತರ ಮಹಮದ್, ಕಿರಣ್, ಹಿತೇಶ್ ಅವರನ್ನು ಪರಿಚಯ ಮಾಡಿಕೊಂಡ ಆಕೆ, ಅವರನ್ನೂ ಜಾಲದೊಳಗೆ ಸೇರಿಸಿಕೊಂಡಳು. ತಿಂಗಳುಗಟ್ಟಲೇ ಹೋಟೆಲ್‌ನಲ್ಲಿ ತಂಗಿ, ಅವ್ಯವಹಾರದಲ್ಲಿ ತೊಡಗಿದ್ದರೂ ಈ ಬಗ್ಗೆ ಮಾಹಿತಿ ನೀಡದ ಕ್ಯಾಪಿಟಲ್ ಹೋಟೆಲ್ ವ್ಯವಸ್ಥಾಪಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.