ಕರ್ನಾಟಕ

ಡಿ.8ರಂದು ‘ಕರ್ನಾಟಕ ಮೊಬೈಲ್‌ಒನ್‌’ ಸೇವೆಗೆ ಚಾಲನೆ: ಆಹ್ವಾನಪತ್ರದಲ್ಲಿ ಸಿ.ಎಂ ಧ್ವನಿ…!

Pinterest LinkedIn Tumblr

pvec04BRYo Invite 07

ಬೆಂಗಳೂರು: ‘ನಾಡ ಬಾಂಧವರೇ, ನಾನು ನಿಮ್ಮ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಮಾತ­ನಾಡುತ್ತಿದ್ದೇನೆ. ಕರ್ನಾ­­­­ಟಕ ಸರ್ಕಾರದ ಮೊಬೈಲ್‌ ಆಡ­ಳಿತ­­­ವನ್ನು ನಾಡಿಗೆ ಸಮರ್ಪಿಸಲಾ­ಗು­ತ್ತಿದೆ ಎಂದು ಪ್ರಕಟಿ­ಸಲು ಹರ್ಷಿಸುತ್ತೇನೆ. ಭಾರ­ತದ ಘನತ­ವೆತ್ತ ರಾಷ್ಟ್ರಪತಿಗಳು ‘ಕರ್ನಾ­ಟಕ ಮೊಬೈಲ್‌ಒನ್‌’ ಸೇವೆ­ಯನ್ನು ಉದ್ಘಾಟಿ­ಸಲು ಒಪ್ಪಿರುತ್ತಾರೆ…’
–ಇದು ಮುಖ್ಯಮಂತ್ರಿಗಳು ಯಾವುದೋ ಸಮಾರಂಭದಲ್ಲಿ ಮಾಡಿದ ಭಾಷಣ ಎಂದು ಭಾವಿಸಿದರೆ ಆ ಊಹೆ ತಪ್ಪು. ಬದಲಾಗಿ ‘ಮೊಬೈಲ್‌­ಒನ್‌’ ಯೋಜನೆ ಉದ್ಘಾಟನಾ ಸಮಾ­ರಂ­ಭದ ಆಹ್ವಾನ ಪತ್ರಿಕೆಯಲ್ಲಿರುವ ಸಿದ್ದರಾಮಯ್ಯ ಅವರ ಧ್ವನಿ ಇದು.

ಸೋಮವಾರ (ಡಿ.8) ಬೆಂಗಳೂರು ಅಂತರ­ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ­ದಲ್ಲಿ ನಡೆಯಲಿರುವ ಕಾರ್ಯ­ಕ್ರಮಕ್ಕೆ ಕಳಿಸಲಾಗಿರುವ ‘ಎಲೆಕ್ಟ್ರಾನಿಕ್‌ ಆಹ್ವಾನ ಪತ್ರ’ದಲ್ಲಿ ಸ್ವತಃ ಸಿ.ಎಂ, ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಯಲ್ಲಿ ರಾಜ್ಯದ ಜನರನ್ನು ಆಮಂತ್ರಿಸಿದ್ದಾರೆ. ಆಹ್ವಾನ ಪತ್ರಿಕೆಯ ಪುಟ ತೆಗೆಯು­ತ್ತಿ­ದ್ದಂತೆ ಅವರ ಮುದ್ರಿತ ಧ್ವನಿ ಆಲಿಸಬಹುದು.

‘… ರಾಷ್ಟ್ರದಲ್ಲಿ ಪ್ರಪ್ರಥಮ ಬಾರಿಗೆ ಅನುಷ್ಠಾನವಾಗುತ್ತಿರುವ ‘ಕರ್ನಾಟಕ ಮೊಬೈಲ್‌ಒನ್‌’ ಯೋಜನೆಯಡಿ ಸರ್ಕಾ­­­­­­ರದ ಸೇವೆಗಳನ್ನು ನಿಮ್ಮ ಬೆರಳ ತುದಿ­ಯಲ್ಲಿಯೇ ಪಡೆಯಲು ದಯ­ಮಾಡಿ ಸಂಖ್ಯೆ 161ಕ್ಕೆ ಕರೆ ಮಾಡಿ. ಪ್ರಾರಂಭ­ದಲ್ಲಿ ಸರ್ಕಾರಿ, ಖಾಸಗಿ ವಲ­ಯದ ನಾಲ್ಕು ಸಾವಿರಕ್ಕೂ ಹೆಚ್ಚಿನ ಸೇವೆ­ಗಳು ಈ ಯೋಜನೆಯಲ್ಲಿ ಸಾರ್ವಜನಿಕ­ರಿಗೆ ಲಭ್ಯ. ಇನ್ನೂ ಅಧಿಕ ಸೇವೆಗಳು ಸದ್ಯ­ದ­ಲ್ಲಿಯೇ ಲಭ್ಯವಾ­ಗ­ಲಿವೆ. ಸರ್ಕಾರದ ಈ ಮಹತ್ವದ ಸಮಾ­ರಂ­ಭಕ್ಕೆ ತಮ್ಮೆಲ್ಲ­ರನ್ನು ಆತ್ಮೀಯ­ವಾಗಿ ಆಮಂತ್ರಿಸುತ್ತೇನೆ. ಈ ಕೂಡಲೇ 161ಕ್ಕೆ ಕರೆ ಮಾಡಿರಿ’ ಎಂಬ ಧ್ವನಿ ಕೇಳಬಹುದು.

ಏನಿದು ‘ಮೊಬೈಲ್‌ಒನ್‌’: ಸರ್ಕಾರ, ಖಾಸಗಿ ವಲಯದ ವಿವಿಧ ರೀತಿಯ ಸೇವೆ­ಯನ್ನು ಮೊಬೈಲ್‌ ಮೂಲಕ ಅಂದರೆ ‘ಕರ್ನಾಟಕ ಮೊಬೈಲ್‌­­­­­­­ಒನ್‌’ ಸೇವೆ­ಯಡಿ ಪಡೆ­ಯ­ಬಹುದು. ಸರ್ಕಾರದ 37 ಇಲಾಖೆಗಳ 637 ಸೇವೆಗಳು ಮೊಬೈಲ್‌ ಮೂಲಕವೇ ಲಭ್ಯ. ಖಾಸಗಿ ಸಂಸ್ಥೆಗಳು ಕೂಡ 3500ಕ್ಕೂ ಹೆಚ್ಚು ಸೇವೆ ನೀಡು­ತ್ತಿದ್ದು, ಅವುಗಳಿಗೂ ಸರ್ಕಾ­ರದ ಮೊಬೈಲ್ ಆ್ಯಪ್‌ನಲ್ಲಿ ವೇದಿಕೆ ಕಲ್ಪಿಸಲಾ­ಗಿದೆ.

ಮನೆ ಅಥವಾ ನಿವೇಶನದ ಆಸ್ತಿ ತೆರಿಗೆ­ಯಿಂದ ಹಿಡಿದು ವಿದ್ಯುತ್‌, ನೀರು ಮತ್ತು ದೂರವಾಣಿ ಬಿಲ್‌ಗಳನ್ನೂ ಮೊಬೈ­ಲ್‌­­­ನಿಂದಲೇ ಪಾವತಿಸಬಹುದು. ಬಸ್‌ ಟಿಕೆಟ್‌ ಕಾಯ್ದಿರಿಸಬಹುದು. ಕಡತ­ಗಳ ವಿಲೇವಾರಿ ಮೇಲ್ವಿ­ಚಾ­ರಣೆ, ಪಾಸ್‌­ಪೋರ್ಟ್‌, ‘ಸಕಾಲ’ ಅರ್ಜಿ­ಗಳ ವಿಲೇವಾರಿ ಕುರಿತ ಮಾಹಿತಿ ಕೂಡ ಮೊಬೈಲ್‌ನಿಂದಲೇ ಪಡೆಯಬಹುದು. ಮೊದಲ ಆರು ತಿಂಗಳು ಉಚಿತ ಸೇವೆ ಲಭ್ಯವಿ­ರುತ್ತದೆ.

Write A Comment