ಕರ್ನಾಟಕ

ನಾರಾಯಣ­ಪುರ ಬಲದಂಡೆ ನಾಲೆ: ಮೊದಲ ದಿನವೇ ಒಡೆದ ಕಾಲುವೆ

Pinterest LinkedIn Tumblr

pvec4decjhl1

ರಾಯಚೂರು: ಜಿಲ್ಲೆಯ ಸೋಮನ­ಮರಡಿ ಗ್ರಾಮದ ಹತ್ತಿರ ನಾರಾಯಣ­ಪುರ ಬಲದಂಡೆ ನಾಲೆ ವ್ಯಾಪ್ತಿಯ 9ಎ ವಿತರಣಾ ನಾಲೆ ಮಂಗಳವಾರ ರಾತ್ರಿ ಒಡೆದಿದ್ದು, ನೂರಾರು ಎಕರೆ ಭತ್ತದ ಹೊಲಕ್ಕೆ ನೀರು ನುಗ್ಗಿ ಹಾನಿಯಾಗಿದೆ.

ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿ­ರುವ ಈ ನಾಲೆಗೆ ಮಂಗಳವಾರ ರಾತ್ರಿ ಪ್ರಾಯೋಗಿಕವಾಗಿ ನೀರು ಹರಿಸಲಾ­ಗಿತ್ತು. ನೀರಿನ ಒತ್ತಡ ತಡೆಯದೇ ನಾಲೆಯ 3ನೇ ಕಿ.ಮೀ ಹತ್ತಿರದ 15 ಮೀಟರ್ ಲೈನಿಂಗ್ ನಾಲೆ ಒಡೆದಿದೆ.

ದೇವದುರ್ಗ, ಮಾನ್ವಿ ತಾಲ್ಲೂ­­ಕು­­­ಗಳ ನೀರಾವರಿ ವಂಚಿತ 45 ಹಳ್ಳಿ­ಗಳ ಜಮೀ­ನಿಗೆ  ನಾರಾಯಣಪುರ ಬಲ­ದಂಡೆ ನಾಲೆ­ಯಿಂದಲೇ ಪರ್ಯಾ­ಯ­ವಾಗಿ ನೀರಾವರಿ ಕಲ್ಪಿ­ಸಲು 150 ಕೋಟಿ ವೆಚ್ಚದಲ್ಲಿ 32 ಕಿ.ಮೀ ಉದ್ದದ ಈ ವಿಸ್ತ­ರಣಾ ನಾಲೆ ನಿರ್ಮಿಸ­ಲಾಗಿತ್ತು. 9–ಎ ಕಾಲುವೆ  ವ್ಯಾಪ್ತಿಯಲ್ಲಿ ದೇವ­ದುರ್ಗ ತಾಲ್ಲೂ­ಕಿನ ಅರಕೇರಾ ಹಾಗೂ ಮಾನ್ವಿ ತಾಲ್ಲೂ­ಕಿನ ವಡವಾಟಿ  ನೀರಾ­ವರಿ ಶಾಖೆ ರೂಪ­ಗೊಂಡಿದ್ದು, ಡಿ.ವೈ. ಉಪ್ಪಾರ ಕಂಪೆ­­ನಿಗೆ ಕಾಮಗಾರಿ ವಹಿಸಿಕೊ­ಡ­ಲಾಗಿತ್ತು.

ಒಟ್ಟು 15,250 ಹೆಕ್ಟೇರ್ ನೀರಾವರಿ ಪ್ರದೇಶ­ದಲ್ಲಿ 5,500 ಹೆಕ್ಟೇರ್ ಪ್ರದೇಶವು ದೇವದುರ್ಗ ತಾಲ್ಲೂಕಿನ ಅರಕೇರಾ ಶಾಖೆ ವ್ಯಾಪ್ತಿಗೊಳಪಟ್ಟಿದ್ದು, 8,500 ಹೆಕ್ಟೇರ್ ಪ್ರದೇಶವು ಮಾನ್ವಿ ತಾಲ್ಲೂ­ಕಿನ ವಡವಾಟಿ ಶಾಖೆ ವ್ಯಾಪ್ತಿ­ಗೊಳ­ಪಟ್ಟಿದೆ. ಅರಕೇರಾ ಶಾಖೆ ವ್ಯಾಪ್ತಿ­ಯಲ್ಲಿ ಬರುವ ಸೋಮನಮರಡಿ ಸಮೀಪ  9–ಎ ನಾಲೆ ಮಂಗಳವಾರ ರಾತ್ರಿಯೇ ಒಡೆದು ನೂರಾರು ಎಕರೆಗೆ ಕಾಲುವೆ ನೀರು ನುಗ್ಗಿ ಅದ್ವಾನವಾಗಿದೆ.

ನಾರಾಯಣಪುರ ಬಲದಂಡೆ ನಾಲೆ, ತುಂಗಭದ್ರಾ ಎಡದಂಡೆ ನಾಲೆ ಪದೇ ಪದೇ ಒಡೆಯುವುದು ಹಿಂದೆ ಸಾಮಾನ್ಯ­ವಾಗಿತ್ತು. ಒಂದೆರಡು ವರ್ಷದಿಂದ ಕಡಿಮೆ ಆಗಿದ್ದರೂ ಈಗ ಹೊಸ ನಾಲೆ ಪ್ರಾಯೋಗಿಕ ಪರೀಕ್ಷೆಯಲ್ಲೇ ಒಡೆದಿರು­ವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

‘9–ಎ ನಾಲೆ ಕಾಂಕ್ರೀಟ್ ಲೈನಿಂಗ್ ಸರಿ­ಯಾಗಿ ಹಾಕಿಲ್ಲ. ಕನಿಷ್ಠ 3 ಇಂಚು ಕಾಂಕ್ರೀಟ್ ಲೈನಿಂಗ್ ಹಾಕಬೇಕು. ಆದರೆ, ಗುತ್ತಿಗೆದಾರ 1 ಇಂಚು ಕಾಂಕ್ರೀಟ್ ಲೈನಿಂಗ್ ಹಾಕಿದ್ದಾರೆ. ನೀರಾ­ವರಿ ಇಲಾಖೆ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಈ ನಾಲೆ ಒಡೆಯಲು ಕಳಪೆ ಕಾಮಗಾರಿಯೇ ಕಾರಣ. ಗುತ್ತಿಗೆದಾ­ರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರಿಂದ ನಷ್ಟದ ಹಣ ವಸೂಲಿ ಮಾಡಬೇಕು. ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳ­ಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದ್ದಾರೆ.

Write A Comment