ಕರ್ನಾಟಕ

ತುಮಕೂರು: ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ: 9 ಸಾವು

Pinterest LinkedIn Tumblr

pvec031214sr-1

ತುಮಕೂರು: ಜಿಲ್ಲೆಯಲ್ಲಿ ಸೋಮ ವಾರ ರಾತ್ರಿ­ಯಿಂದ ಈಚೆಗೆ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ 9 ಮಂದಿ ಸಾವಿಗೀಡಾದ ಘಟನೆ ನಡೆದಿದೆ.

ಶಿರಾ ತಾಲ್ಲೂಕಿನ ತಾವರೇಕೆರೆ ಬಳಿ ಮಂಗಳವಾರ ಮಧ್ಯಾಹ್ನ ಇಂಡಿಕಾ ಕಾರೊಂದು ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಹಸು ನೀಗಿದರು.

ಮೃತರು ಶಿರಾ ತಾಲ್ಲೂಕಿನ ಬರಗೂರಿನವರು. ಮೃತರನ್ನು ಕಾರಿನ ಚಾಲಕ ಗಂಗಾಧರ (27),  ರೇಣು ಕಮ್ಮ (55), ನಯನ (5), ಪ್ರದೀಪ (6) ಎಂದು ಗುರುತಿಸಲಾಗಿದೆ.

ತೀವ್ರವಾಗಿ ಗಾಯಗೊಂಡಿರುವ ಲಕ್ಷ್ಮಮ್ಮ, ಬಾಲಕ ರಾಮಚರಣ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸ­ಲಾಗಿದೆ. ಇವರ ಸ್ಥಿತಿ ಚಿಂತಾಜನಕ­ವಾಗಿದೆ. ಚಿತ್ರದುರ್ಗಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಗ್ರಾಮದವರೇ ಆದ ಕಾರಿನ ಚಾಲಕ ನನ್ನು ತಮ್ಮನ್ನು ಶಿರಾಗೆ ಬಿಡುವಂತೆ ಕರೆದುಕೊಂಡು ಬಂದಿ ದ್ದರು. ಆದರೆ ಶಿರಾದಲ್ಲಿ ಬಸ್ ತಪ್ಪಿದ್ದರಿಂದ ಚಿತ್ರದುರ್ಗದಲ್ಲಿ ರೈಲು ಹಿಡಿಯಲು ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ.

ಐವರ ಸಾವು: ಮತ್ತೊಂದು ಘಟನೆಯಲ್ಲಿ ಸೋಮ­ವಾರ ತಡರಾತ್ರಿ ತುಮಕೂರಿನ ಕೋರಾ ಸಮೀಪ ನೆಲಹಾಳ್‌ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಕಾರು– ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿ­ದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಿವಾಸಿ ಪ್ರಮೋದ್‌ (23), ಅಂಕೋಲದ ಅಶ್ವಿನ್‌ (22), ಹಾಸನ ಜಿಲ್ಲೆ ಹೊಳೆನರಸೀಪುರದ ಹರೀಶ್‌ (21), ಬೆಂಗಳೂರಿನ ಮನೋಜ್‌ (24) ಹಾಗೂ ಟ್ರ್ಯಾಕ್ಟರ್‌ನಲ್ಲಿದ್ದ ಮಧುಗಿರಿ ತಾಲ್ಲೂಕು ಹಾವಿನ ಮಡಗು ಗ್ರಾಮದ ಚಿಕ್ಕಣ್ಣ (41) ಮೃತಪಟ್ಟವರು. ಎಲ್ಲರೂ ಬೆಂಗಳೂರಿನ ಕ್ವೆಸ್ಟ್‌ ಗ್ಲೋಬಲ್‌ ಕಂಪೆನಿಯ ಸಾಪ್ಟವೇರ್‌ ಎಂಜಿನಿಯರ್‌ಗಳು ಎಂದು ಹೇಳಲಾ­ಗಿದೆ. ಕೊಪ್ಪಳದಲ್ಲಿ ಸ್ನೇಹಿತನ ಮದುವೆಗೆ ಹೋಗಿ ವಾಪಸ್‌ ಬರುವಾಗ ದುರ್ಘಟನೆ ನಡೆದಿದೆ.

Write A Comment