ಕರ್ನಾಟಕ

ಕಿಸ್‌ ಆಫ್‌ ಲವ್‌ ಆಯೋಜಕರ ವಿರುದ್ಧ ಕ್ರಮಕ್ಕೆ ಆದೇಶ

Pinterest LinkedIn Tumblr

pic_couple_kiss

ಬೆಂಗಳೂರು: ‘ಕಿಸ್‌ ಆಫ್‌ ಲವ್‌’­ ಆಂದೋ­ಲ­ನದ ಆಯೋ­­­­ಜಕರ ವಿರುದ್ಧ ಕ್ರಮ ಕೈಗೊ­ಳ್ಳು­ವಂತೆ 6ನೇ ಎಸಿಎಂಎಂ ನ್ಯಾಯಾಲಯ ಎಸ್‌.­ಜೆ.ಪಾರ್ಕ್ ಠಾಣೆ ಪೊಲೀಸರಿಗೆ ಶನಿವಾರ ಸೂಚನೆ ನೀಡಿದೆ.

ಆಂದೋಲನ ನಡೆಸಲು ಅನುಮತಿ ನೀಡಬಾರದು ಎಂದು ಶ್ರೀರಾಮಸೇನೆ, ಹಿಂದೂ ಮಹಾಸಭಾ, ವಕೀಲ ಅಮೃ­ತೇಶ್‌ ಸೇರಿದಂತೆ ವಿವಿಧ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಆ ಅರ್ಜಿಯ ವಿಚಾ­ರಣೆ ನಡೆಸಿದ ನ್ಯಾಯಾಲಯ, ಆಂದೋ­ಲನದ ಸಂಯೋಜಕರಾದ ರಚಿತಾ ತನೇಜಾ, ವಿಜ­ಯನ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ನಗರ ಪೊಲೀಸ್‌ ಕಮಿಷ­ನರ್‌ ಎಂ.­ಎನ್‌.-­­ರೆಡ್ಡಿ ಅವರು, ‘ಕಿಸ್‌ ಆಫ್‌ ಲವ್‌’­ಗೆ ಅನುಮತಿ ನೀಡಲು ನಿರಾಕರಿ­ಸಿ­ದ್ದಾರೆ. ಆದರೂ ಆಯೋಜಕರು  ಆಂದೋಲನ ನಡೆ­ಸ­ಲು ಮುಂದಾಗಿದ್ದಾರೆ ಎಂದು ಅರ್ಜಿ­ದಾರರು ಹೇಳಿದರು.

ಅನುಮತಿ ನೀಡದಿದ್ದರೂ ಆಂದೋ­ಲನ ನಡೆಸುವುದು ಸರಿ­ಯಲ್ಲ. ಅದನ್ನು ಮೀರಿ ಆಯೋ­ಜಕರು ‘ಕಿಸ್‌ ಆಫ್ ಲವ್’ ಏರ್ಪಡಿಸಿ­ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನ್ಯಾಯಾ­ಲಯ ಪೊಲೀ­ಸರಿಗೆ ಸೂಚಿಸಿದೆ.

ಭಾನುವಾರ (ನ.30) ನಡೆಸಲು ಉದ್ದೇ­­­ಶಿಸಲಾಗಿರುವ ಆಂದೋಲನವು ನಡೆ­ಯಿತೇ, ಇಲ್ಲವೇ ಎಂಬುವುದರ ಬಗ್ಗೆ ಡಿ.3ರಂದು ವರದಿ ನೀಡುವಂತೆಯೂ ನ್ಯಾಯಾಲಯ ಹೇಳಿದೆ.

Write A Comment