ಕರ್ನಾಟಕ

ಗೊರೂರು ಕಸ ಸಂಸ್ಕರಣ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ: ಪೊಲೀಸರ ದೌರ್ಜನ್ಯ ವಿರೋಧಿಸಿ ರಸ್ತೆ ತಡೆ

Pinterest LinkedIn Tumblr

pvec30mgd2-nov

ಮಾಗಡಿ: ಪೊಲೀಸರ ದೌರ್ಜನ್ಯ ಖಂಡಿಸಿ ತಾಲ್ಲೂಕಿನ ಗೊರೂರು ಗ್ರಾಮ­ಸ್ಥರು ಶನಿವಾರ ಸೋಲೂರು ಹ್ಯಾಂಡ್ ಪೋಸ್ಟ್ ಬಳಿ ಶನಿವಾರ ರಸ್ತೆ ತಡೆ ನಡೆಸಿದರು.

ಐದಾರು ಸಾವಿರ ರೈತರು ಎರಡು ಗಂಟೆಗಳ ಕಾಲ ರಸ್ತೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಕಸ ಸಂಸ್ಕರಣ ಘಟಕ ಸ್ಥಾಪಿ­ಸುವ ನಿರ್ಧಾರವನ್ನು ಪುನರ್‌­ಪರಿ­ಶೀಲಿಸಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರನ್ನು ಉದ್ದೇಶಿಸಿ ಮಾತ­ನಾ­ಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ತ್ಯಾಜ್ಯ ವಿಲೇ­­ವಾರಿ ಮಾಫಿ­ಯಾ­ಗ­ಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿ­ವರು ಕೈಜೋ­ಡಿ­ಸಿದ್ದು ಹಳ್ಳಿ ಜನರ ಬದುಕು ಕಿತ್ತು­ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಜಿಲ್ಲಾ ­ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅಗೌರವದಿಂದ ನಡೆ­ದುಕೊಂಡು ರೈತರ ಜಮೀನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ಅಷ್ಟೊಂದು ಇಚ್ಛಾಶಕ್ತಿ ಇದ್ದರೆ ಕನಕಪುರದಲ್ಲಿ ಕಸ ವಿಲೇವಾರಿ ಘಟಕವನ್ನು ಆರಂಭಿಸಲಿ ಎಂದರು.

ಪೊಲೀಸರಿಗೆ ತರಾಟೆ: ಮಠಾಧೀಶರು, ಅಮಾಯಕ ರೈತರ ಮೇಲೆ ಪೊಲೀಸರು ಪೌರುಷ ತೋರಿಸ್ತೀರಾ, ಹೆಣ್ಣು­ಮಕ್ಕಳನ್ನ ಅಟ್ಟಾಡಿಸಿಕೊಂಡು ಹೊಡೀ­ತೀರಾ ಅವರ ಸ್ಥಾನದಲ್ಲಿ ನಿಮ್ಮ ಮನೆಯ ಹೆಣ್ಣುಮಕ್ಕಳಿದ್ದರೆ ಹಾಗೆಯೇ ಹೊಡೀತಿದ್ರಾ ನೀವು, ನೀವು ಸರ್ಕಾರದ, ಸಚಿವರ ಗುಲಾಮರಂತೆ ವರ್ತಿಸಬೇಡಿ ಎಂದು ಕುಮಾರಸ್ವಾಮಿ ಅವರು ಪೊಲೀ­­ಸರನ್ನು ತರಾಟೆಗೆ ತೆಗೆದುಕೊಂಡರು.
ವಿಧಾನಸಭಾ ಅಧಿವೇಶನಕ್ಕೂ ಮುನ್ನ ಸರ್ವಪಕ್ಷದ ಮುಖಂಡರ ಸಭೆ ಕರೆದು ಮೊದಲು ಸರ್ಕಾರ ಮುಖ್ಯ­ಮಂತ್ರಿ­ಗಳು, ಸಚಿವರು ಚರ್ಚೆ ನಡೆಸ­ಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಆಂಜನಮೂರ್ತಿ, ಸೋಲೂರು ಚಿಲು­ಮೆ­­­ಮಠದ ಬಸವಲಿಂಗ­ಸ್ವಾಮೀಜಿ, ಕಂಚು­ಗಲ್ ಬಂಡೇಮಠದ ಮಹಾಂತ­ಸ್ವಾಮೀಜಿ, ಗುಡೇ­ಮಾರನ­ಹಳ್ಳಿ ಜಗ­ಣ್ಣಯ್ಯ ಮಠದ ಚೆನ್ನಬಸವ ಸ್ವಾಮೀಜಿ, ನೆಲ­ಮಂಗಲ ಶಾಸಕ ಡಾ.­ಶ್ರೀನಿ­ವಾಸ್ ಮೂರ್ತಿ, ಮಾಜಿ ಶಾಸಕ ನಾಗ­ರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಜಿ.ಪಂ ಮಾಜಿ ಸದಸ್ಯ ವೀರಪ್ಪ ಹಾಗೂ ಸೋಲೂರು ಹೋಬಳಿಯ ಯುವ­ಕರು, ಮಹಿಳೆ­ಯರು, ಕರ್ನಾಟಕ ಪ್ರಾಂತ
ರೈತ ಸಂಘದ ರಾಜ್ಯ ಪ್ರತಿನಿಧಿ ವನಜ, ನಾಗೇಶ್ ಹಾಗೂ ಗೊರೂರು, ಕನಕೇ­ನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.
………………………………………..

ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಗೊರೂರು ಗ್ರಾಮದ ಬಳಿ ಕಸ ಸಂಸ್ಕರಣ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಾರ್ವಜನಿಕರ ಮೇಲಿನ ಪೊಲೀಸ್‌ ದೌರ್ಜನ್ಯವನ್ನು ಖಂಡಿಸಿ ಬೆಂಗಳೂರು ನಗರ ಘಟಕದ ಯುವ ಜನತಾದಳದ (ಜಾತ್ಯತೀತ) ಸದಸ್ಯರು ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಎದುರು ಶನಿವಾರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು

pvec30BRY-JDS-1

ಬೆಂಗಳೂರು: ಗೊರೂರು ಗ್ರಾಮದ ಬಳಿ ಕಸವನ್ನು ಸಂಸ್ಕರಿಸುವ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಾರ್ವ­ಜನಿಕರ ಮೇಲೆ ದೌರ್ಜನ್ಯ ನಡೆ­ಸಿದ ಪೊಲೀಸರ ಕ್ರಮವನ್ನು ಖಂಡಿಸಿ  ಬೆಂಗ­ಳೂರು ನಗರ ಘಟಕದ ಯುವ ಜನತಾ­ದಳದ  (ಜಾತ್ಯತೀತ) ಸದಸ್ಯರು ಆನಂದ­ರಾವ್‌ ವೃತ್ತದ ಗಾಂಧಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೂ ಮುನ್ನ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಪಕ್ಷದ ಕಚೇರಿ­ಯಿಂದ ಆನಂದರಾವ್‌ ವೃತ್ತದ­ವ­ರೆಗೆ ಜಾಥಾ ನಡೆಸಿದರು.

ಯುವ ಜನತಾದಳದ ನಗರ ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಮಾತ­ನಾಡಿ, ‘ಗೊರೂರು ಗ್ರಾಮದ ಬಳಿ ಕಸ ಸಂಸ್ಕರಿಸುವ ಘಟಕ ಸ್ಥಾಪನೆಗೆ ಸಾರ್ವ­ಜನಿಕರು, ರೈತರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಕೇಳದೆ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದು­ಕೊಂಡಿದೆ. ಇಂದು ಖಂಡನೀಯ­ವಾ­ಗಿದ್ದು ಕೂಡಲೇ ಈ ನಿರ್ಧಾರವನ್ನು ಹಿಂಪ­­ಡೆಯಬೇಕು’ ಎಂದು ಆಗ್ರಹಿಸಿದರು.

ಅಲ್ಲದೇ, ಕಸ ಸಂಸ್ಕರಣಾ ಘಟಕದಿಂದ ವಿದ್ಯುತ್‌ ಉತ್ಪಾದನೆ ಮಾಡಲಾ­ಗು­ವುದು ಎಂದು ಅಧಿಕಾರಿಗಳು ಹೇಳಿ­ದ್ದಾರೆ. ಆದರೆ, ಆ ಘಟಕದಿಂದಾಗುವ ಸಾಧಕ ಬಾಧಕಗಳ ಬಗ್ಗೆ ಮನವರಿಕೆ ಮಾಡಿ­ಕೊಡದೆ ಏಕಾಏಕಿ ದೌರ್ಜನ್ಯ ನಡೆಸಿ­ರುವುದು ಸರಿಯಲ್ಲ ಎಂದು ದೂರಿದರು.

Write A Comment