ಕರ್ನಾಟಕ

ಪರೀಕ್ಷೆ ಮುಗಿದ ನಂತರ ಬಂದ ಪ್ರವೇಶ ಪತ್ರ

Pinterest LinkedIn Tumblr

pvec30BRY cnh1

ಚಿಕ್ಕನಾಯಕನಹಳ್ಳಿ (ತುಮಕೂರು ಜಿಲ್ಲೆ): ಪರೀಕ್ಷೆ ಮುಗಿದು ಒಂದು ವಾರದ ಬಳಿಕ ಪ್ರವೇಶ ಪತ್ರ ಅಭ್ಯರ್ಥಿಯ ಕೈ ಸೇರಿರುವ ಪ್ರಕರಣ ಪಟ್ಟಣದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಗೆ ಬರುವ ಖಾಲಿ ಹುದ್ದೆಗಳ ನೇಮಕಾತಿಗೆ ಹುಬ್ಬಳ್ಳಿ ವಿಭಾಗದ ರೈಲ್ವೆ ನೇಮಕಾತಿ ಘಟಕ 2013ನೇ ಸಾಲಿನಲ್ಲಿ ಅರ್ಜಿ ಆಹ್ವಾನಿಸಿತ್ತು. ನ. 2, 9, 16 ಮತ್ತು 30ರಂದು ಲಿಖಿತ ಪರೀಕ್ಷೆ ನಡೆಯಿತು.

ನ. 16ರಂದು ನಡೆಯಲಿರುವ ಲಿಖಿತ ಪರೀಕ್ಷೆಗೆ ಹಾಜರಾಗುವಂತೆ ರೈಲ್ವೆ ಇಲಾಖೆ ಕಳಿಸಿರುವ ಪ್ರವೇಶ ಪತ್ರ ನ. 21ರಂದು ಪಟ್ಟಣದ ಅಭ್ಯರ್ಥಿ ಸಿ.ಆರ್.­ಮೋಹನ್‌ಕುಮಾರ್ ಕೈ ಸೇರಿದೆ.

‘ಪ್ರವೇಶ ಪತ್ರಕ್ಕಾಗಿ ಪ್ರತಿದಿನ ಅಂಚೆ ಕಚೇರಿಗೆ ಎಡತಾಕುತ್ತಿದ್ದೆ. ಪರೀಕ್ಷೆ ಮುಗಿದ 5 ದಿನಗಳ ನಂತರ ಪ್ರವೇಶ ಪತ್ರ ಮನೆಗೆ ತಲುಪಿದೆ. ಕಳೆದ 6 ತಿಂಗಳಿಂದ ರೈಲ್ವೆ ಲಿಖಿತ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಪರೀಕ್ಷೆ ಬರೆದು ಕೆಲಸಕ್ಕೆ ಸೇರುವ ಕನಸು ಹೊತ್ತಿದ್ದೆ. ಇಲಾಖೆಯ ವಿಳಂಭ ದೊರಣೆಯಿಂದ ಕನಸು ನುಚ್ಚುನೂರಾಗಿದೆ’ ಎಂದು ಅವರು ಅಳಲು ತೊಡಿಕೊಂಡರು.

ಪಟ್ಟಣದ ಅನೇಕರಿಗೆ ಇದೇ ರೀತಿ ಪರೀಕ್ಷೆ ಮುಗಿದ ನಂತರ ಪ್ರವೇಶ ಪತ್ರ ತಲುಪಿದೆ. ಅಂಚೆ ಕಚೇರಿ ಹಾಗೂ ರೈಲ್ವೆ ಇಲಾಖೆ ತಮ್ಮ ತಪ್ಪು ಅರಿತುಕೊಂಡು ಅನ್ಯಾಯವಾಗಿರುವ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ವೆಬ್‌ಸೈಟ್‌ನಲ್ಲಿಯೇ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದ್ದರೆ ಇಂಥ ಅನ್ಯಾಯ ಆಗುತ್ತಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Write A Comment