ಕರ್ನಾಟಕ

ಮನೆಯಲ್ಲಿ ಬಿಸಿಯೂಟ ತಯಾರಿಕೆ; ಕುಕ್ಕರ್‌ ಸ್ಫೋಟ; ಮಹಿಳೆ,7 ವಿದ್ಯಾರ್ಥಿಗಳಿಗೆ ತೀವ್ರ ಗಾಯ

Pinterest LinkedIn Tumblr

pvec30BRY gpt10

ಗುಂಡ್ಲುಪೇಟೆ: ಶಾಲೆಯಲ್ಲಿ ತಯಾರಿ­ಸ­ಬೇಕಿದ್ದ ಬಿಸಿಯೂಟವನ್ನು ಅಡುಗೆ ಸಹಾ­ಯಕಿ ತನ್ನ ಮನೆಯಲ್ಲಿ ತಯಾರಿಸುತ್ತಿದ್ದ ವೇಳೆ ಪ್ರೆಷರ್‌ ಕುಕ್ಕರ್‌ ಸ್ಫೋಟಗೊಂಡು 6 ವಿದ್ಯಾರ್ಥಿಗಳೊಂದಿಗೆ ಆಕೆಯೂ ಗಾಯ­­­ಗೊಂಡ ಘಟನೆ ತಾಲ್ಲೂಕಿನ ತೆಂಕಲ­ಹುಂಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗಾಯಗೊಂಡವರನ್ನು ಪಟ್ಟಣದ ಕೆ.ಎಸ್‌. ನಾಗರತ್ನಮ್ಮ ಸರ್ಕಾರಿ ಆಸ್ಪ­ತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖ­ಲಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗಾಯಾಳು ವಿದ್ಯಾರ್ಥಿಗಳ ಕುಟುಂಬದವರಿಗೆ ಎಸ್‌ಡಬ್ಲುಎಫ್‌ ನಿಧಿಯಿಂದ ತಲಾ ₨ 5 ಸಾವಿರ, ಶಿಕ್ಷಕರ ಪತ್ತಿನ ಸಹಕಾರ ಸಂಘದಿಂದ ತಲಾ ₨ 5 ಸಾವಿರ ಪರಿಹಾರ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್‌. ರಾಜು ತಿಳಿಸಿದ್ದಾರೆ.

ಗುಂಡ್ಲುಪೇಟೆ ಠಾಣೆಯ ಪಿಎಸ್‌ಐ ಎಂ.ಎಸ್‌. ರಾಜು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ: ತಾಲ್ಲೂಕಿನ ತೆಂಕಲ­ಹುಂಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥ­ಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋ­ಜ­ನೆ ಸಹಾಯಕಿ­ಯಾಗಿ ಕಾರ್ಯ­ನಿರ್ವಹಿ­ಸುತ್ತಿದ್ದ ಮಂಜುಳಾ ಅವರು ಶನಿವಾರ ಬೆಳಿಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೆಯು­ತ್ತಿದ್ದ ಕಾರಣ ಶಿಕ್ಷಕರು ಶಾಲೆಯಿಂದ ತೆರಳಿದ್ದರು. ನಂತರ ತನ್ನ ಮನೆಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾ­ರಿ­ಸಲು ಸಹಾಯ­ಕ್ಕೆಂದು 6   ವಿದ್ಯಾರ್ಥಿ­ಗಳನ್ನು ಮಂಜುಳಾ ಕರೆ­ದೊಯ್ದಿದ್ದರು. ಈ ವೇಳೆ ರೈಸ್‌ಬಾತ್‌ ತಯಾರಿಗೆಂದು ಪ್ರೆಷರ್‌ ಕುಕ್ಕರ್‌ನಲ್ಲಿ ನೀರು ಹಾಕಿಟ್ಟು ಟಿವಿ ವೀಕ್ಷಿಸುತ್ತಿದ್ದ ವೇಳೆ ಕುಕ್ಕರ್‌ ಸ್ಫೋಟ­ಗೊಂಡು ಮಂಜುಳಾ ಮತ್ತು ವಿದ್ಯಾರ್ಥಿ­ಗ­ಳಾದ ಅನುಷಾ (ಮಂಜುಳಾ ಪುತ್ರಿ), ಜ್ಯೋತಿ, ಲಕ್ಷ್ಮೀ, ಪವನ್‌­ಕುಮಾರ್, ಸುಚಿತ್ರಾ, ಐಶ್ವರ್ಯಾ ಅವರ ಮೇಲೆ ಕುದಿಯುತ್ತಿದ್ದ ನೀರು ಚೆಲ್ಲಿದೆ.

Write A Comment