ಕರ್ನಾಟಕ

ಕೈ ಭಿನ್ನಮತ ಸ್ಫೋಟ; ನಿಗಮ-ಮಂಡಳಿ ನೇಮಕ: ರಾಜಕೀಯ ಏನು ಅಂತಾ ನಮಗೂ ಗೊತ್ತು ಎಂದ ಸಚಿವ ಅಂಬರೀಷ್

Pinterest LinkedIn Tumblr

Ambarish pm-Ap 11_2014-008

ಮೈಸೂರು: ನಿಗಮ-ಮಂಡಳಿಗಳ ಅಧ್ಯಕ್ಷರ – ಉಪಾಧ್ಯಕ್ಷರ ಸಂಪೂರ್ಣ ಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ನಿಗಮ-ಮಂಡಳಿ ನೇಮಕ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮಾತಿಗೂ ಬೆಲೆ ಕೊಡಬೇಕು ಎಂದು ವಸತಿ ಸಚಿವ ಅಂಬರೀಷ್ ಅವರು ಸೋಮವಾರ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಷ್, ಪಕ್ಷಕ್ಕಾಗಿ ದುಡಿದವರು ದೊಡ್ಡ ಹುದ್ದೆ ಕೇಳುತ್ತಿಲ್ಲ. ಹೀಗಾಗಿ ಸಿಎಂ ನಮ್ಮ ಮಾತಿಗೂ ಬೆಲೆ ಕೊಡಬೇಕು. ಒಂದು ವೇಳೆ ನನ್ನ ಪರವಾಗಿ ಕೆಲಸ ಮಾಡಿದವರಿಗೆ ನಿಗಮ-ಮಂಡಳಿ ನೇಮಕದಲ್ಲಿ ಅವಕಾಶ ನೀಡದಿದ್ದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ನಾನೂ ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಮಂಡ್ಯ ರಾಜಕೀಯ ಏನು ಅಂತ ನಮಗೂ ಗೊತ್ತಿದೆ. ಸಿದ್ದರಾಮಯ್ಯ ಅವರು ಹಿಂದೆ ಆಗಿರುವುದನ್ನು ಮರೆಯಬಾರದು ಎಂದು ಅಂಬರೀಷ್ ಹೇಳಿದರು.

ಬೀದರ್ ಕಾಂಗ್ರೆಸ್‌ನಲ್ಲೂ ಭಿನ್ನಮತ ಸ್ಫೋಟಗೊಂಡಿದ್ದು, ನಿಗಮ-ಮಂಡಳಿ ನೇಮಕದಲ್ಲಿ ತಮಗೆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ್ ಅರಳಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಕಳೆದ 20 ವರ್ಷಗಳಿಂದ ನಾನು ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಆದರೂ ತಮಗೆ ಯಾವುದೇ ಸ್ಥಾನಮಾನ ನೀಡದಿರುವುದು ತುಂಬಾ ಬೇಸರ ತಂದಿದೆ ಎಂದಿದ್ದಾರೆ.

Write A Comment