ಮುಂಬೈ,ನ.24: ಬೇಬೋ ಕರೀನಾಳಿಂದ ಬ್ರೇಕಪ್ ಆದ್ಮೇಲೆ ಶಹೀದ್ ಗೆ ನಸೀಬೆ ಚೆನ್ನಾಗಿಲ್ಲ ಅಂತ ಕಾಣುತ್ತೆ. ಮೊನ್ನೆಮೊನ್ನೆಯಷ್ಟೇ ರಿಲೀಸ್ ಆದ ‘ಹೈದರ್’ ಚಿತ್ರದ ಬಗ್ಗೆ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದ್ದರೂ, ಚಿತ್ರ ಗಳಿಕೆ ಮಾಡುವಲ್ಲಿ ಯಶಸ್ವಿಯಾಗ್ಲಿಲ್ಲ. ಸಾಲು ಸಾಲು ಸೋಲಿನ ಸಿನಿಮಾಗಳನ್ನೇ ನೀಡುತ್ತಿರುವ ಶಹೀದ್ ಗೆ ಕಡೆಗೂ ಒಂದೊಳ್ಳೆ ಅವಕಾಶ ಹುಡುಕಿಕೊಂಡು ಬಂದಿದೆ. ಅಂಥಾ ಅವಕಾಶ ಬೇರಾವುದು ಅಲ್ಲ, ಟಾಲಿವುಡ್ ಇತಿಹಾಸದಲ್ಲೇ ಎಲ್ಲಾ ರೆಕಾರ್ಡ್ ಗಳನ್ನ ಉಡೀಸ್ ಮಾಡಿದ ‘ಮಗಧೀರ’ ಚಿತ್ರದ ರೀಮೇಕ್ ಆಫರ್. ಬಾಲಿವುಡ್ ನಲ್ಲಿ ಹಿಂದೆಂದಿಗಿಂತಲೂ ರಿಚ್ ಆಗಿ ರೆಡಿಯಾಗುವ ‘ಮಗಧೀರ’ನಾಗಲಿದ್ದಾರೆ ಚಾಕಲೇಟ್ ಬಾಯ್ ಶಹೀದ್ ಕಪೂರ್.
ಅದಾಗ್ಲೇ ಬಾಲಿವುಡ್ ನ ಖ್ಯಾತ ನಿರ್ಮಾಪಕ ಸಾಜಿದ್ ನಾದಿಯಡ್ವಾಲಾ ಟಾಲಿವುಡ್ ನಿಂದ ‘ಮಗಧೀರ’ ರೀಮೇಕ್ ರೈಟ್ಸ್ ಖರೀದಿಸಿದ್ದಾಗಿದೆ. ಮುಂದಿನ ವರ್ಷ ಈ ಚಿತ್ರ ಸೆಟ್ಟೇರಲಿದ್ದು, ಶಹೀದ್ ಕಪೂರ್ ನ ಬಾಲಿವುಡ್ ‘ಮಗಧೀರ’ನನ್ನಾಗಿ ಮಾಡಲು ಹೊರಟಿದ್ದಾರೆ ಸಾಜಿದ್. ತಮ್ಮ ನಿರ್ಮಾಣ ಸಂಸ್ಥೆಗೆ 60 ನೇ ವರ್ಷ ಪೂರೈಸಿದ ಸಂಭ್ರಮದಲ್ಲಿ ಸಾಜಿದ್ ಈ ವಿಚಾರವನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸಿದರು. ಸದ್ಯಕ್ಕೆ ಶಹೀದ್ ಮಾತ್ರ ‘ಮಗಧೀರ’ನಾಗುವುದಕ್ಕೆ ಸೆಲೆಕ್ಟ್ ಆಗಿದ್ದು, ಬಾಕಿ ತಾರಾಗಣದಲ್ಲಿ ಯಾರ್ಯಾರು ಇರಲಿದ್ದಾರೆ ಅಂತ ನಿರ್ಧಾರ ಮಾಡಿಲ್ಲವಂತೆ.
‘ಶಾನ್ದಾರ್’ ಮತ್ತು ‘ಫರ್ಜಿ’ ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಶಹೀದ್, ‘ಮಗಧೀರ’ ಅವಕಾಶವನ್ನು ಕಣ್ಮುಚ್ಚಿಕೊಂಡು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಮುಂದಿನ ವರ್ಷದ ಏಪ್ರಿಲ್ ಹೊತ್ತಿದೆ ಕತ್ತಿ-ಗುರಾಣಿ ಹಿಡಿದು ಶಹೀದ್ ಪುನರ್ಜನ್ಮಕ್ಕೆ ತೆರಳಿದ್ದಾರೆ. ಅಲ್ಲಿಗೆ ಬಾಲಿವುಡ್ ನಲ್ಲಿ ಮತ್ತೊಂದು ದಕ್ಷಿಣದ ಸಿನಿಮಾದ ಕಾರ್ಬನ್ ಕಾಪಿ ವೈಭವೋಪೇತವಾಗಿ ತೆರೆಗೆ ಬರಲಿದೆ. ‘ಮಗಧೀರ’ನ ಕೃಪೆಯಿಂದ ಶಹೀದ್ ಮತ್ತೆ ಫಾರ್ಮ್ ಗೆ ಬರಲಿ ಅನ್ನೋದೇ ಅವರ ಅಭಿಮಾನಿಗಳ ಆಸೆ.