ಕರ್ನಾಟಕ

ಮಹಿಳಾ ಕೈದಿಗಳಿಗೆ ಲೈಂಗಿಕ ಕಿರುಕುಳ ಪ್ರಕರಣ; ದೌರ್ಜನ್ಯ ನಡೆದಿಲ್ಲ: ಉಮಾಶ್ರೀ

Pinterest LinkedIn Tumblr

Umashree__

ಬೆಂಗಳೂರು, ನ.15: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಮಹಿಳಾ ಕೈದಿಗಳಿಗೆ ಲೈಂಗಿಕ ಕಿರುಕುಳ ನಡೆಯುತ್ತಿದೆಯೆಂದು ಆರೋಪಿಸಿ ನ್ಯಾಯಮೂರ್ತಿಗಳಿಗೆ ಅನಾಮಧೇಯ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹಾಗೂ ಮೇಲ್ಮನೆ ಸದಸ್ಯೆ ತಾರಾ ಅನುರಾಧಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶನಿವಾರ ಉಮಾಶ್ರೀ ಹಾಗೂ ತಾರಾ ಪ್ರತ್ಯೇಕವಾಗಿ ಮಹಿಳಾ ಕೈದಿಗಳನ್ನು ಭೇಟಿ ಮಾಡಿದ್ದು, ಕಾರಾಗೃಹದಲ್ಲಿ ಸಮಸ್ಯೆ ಹಾಗೂ ಲೈಂಗಿಕ ಕಿರುಕುಳದ ಸಂಬಂಧ ಮಹಿಳಾ ಕೈದಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮಹಿಳಾ ಕೈದಿಗಳ ಮೇಲೆ ಯಾವುದೇ ದೌರ್ಜನ್ಯ ನಡೆದಿಲ್ಲ ಎಂದು ಸ್ವತಃ ಕೈದಿಗಳೇ ತಿಳಿಸಿದ್ದಾರೆಂದು ಉಭಯ ನಾಯಕಿಯರು ಸ್ಪಷ್ಟಪಡಿಸಿದ್ದಾರೆ.
ಕಿರುಕುಳ ನಡೆದಿಲ್ಲ: ಕಾರಾಗೃಹದಲ್ಲಿನ ಮಹಿಳಾ ಕೈದಿಗಳ ಮೇಲೆ ಲೈಂಗಿಕ ಕಿರುಕುಳ ನಿಜಕ್ಕೂ ಆತಂಕ ಕಾರಿ ಸಂಗತಿ. ಆ ಹಿನ್ನೆಲೆಯಲ್ಲಿ ತಾನು ಮಹಿಳಾ ಕೈದಿಗಳನ್ನು ಖುದ್ದು ಭೇಟಿ ಮಾಡಿದೆ. ಈ ಬಗ್ಗೆ ಯಾವುದೇ ಮಾಹಿತಿಯನ್ನು ಯಾವೊಬ್ಬ ಕೈದಿಯೂ ನೀಡಿಲ್ಲ ಎಂದು ಸಚಿವೆ ಉಮಾಶ್ರೀ ಸ್ಪಷ್ಟಪಡಿಸಿ ದರು. ನ್ಯಾಯಮೂರ್ತಿಗೆ ಅನಾಮಧೇಯ ಪತ್ರ ಬಂದುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಗೃಹ ಸಚಿವ ಕೆ.ಜೆ.ಜಾರ್ಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೃಹ ಇಲಾಖೆಗಳ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದು, ಸತ್ಯ ಬಯಲಾಗಬೇಕಿದೆ ಎಂದು ಉಮಾಶ್ರೀ ತಿಳಿಸಿದರು.
ಕಾರಾಗೃಹದಲ್ಲಿ ಯಾವುದೇ ರೀತಿಯ ತೊಂದರೆ ಇದ್ದರೂ ಧೈರ್ಯವಾಗಿ ಹೇಳಿ, ಸರಕಾರ ನಿಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಕೈದಿಗಳಿಗೆ ಧೈರ್ಯ ಹೇಳಿದ ಉಮಾಶ್ರೀ, ಯಾವ ಹಿಂಜರಿಕೆ ಇಲ್ಲದೆ ಸತ್ಯ ಸಂಗತಿಯನ್ನು ತನಿಖಾ ಸಮಿತಿಯ ಮುಂದೆ ಹೇಳಿ ತನಿಖೆಗೆ ಸಹಕರಿಸಿಯೆಂದು ಕೈದಿಗಳನ್ನು ಕೋರಿದ್ದೇನೆ ಎಂದು ಹೇಳಿದರು.
ಮಹಿಳಾ ಕೈದಿಗಳ ತೇಜೋವಧೆ ಸಲ್ಲ: ಶಾಲಾ ಮಕ್ಕಳು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ರಾಜ್ಯದ ಜನತೆ ತಲೆ ತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಮಹಿಳಾ ಕೈದಿಗಳಿಗೆ ಕಿರುಕುಳ ನಾಚಿಕೆಗೇಡಿನ ಸಂಗತಿ ಎಂದು ತಾರಾ ಅನುರಾಧಾ ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಖುದ್ದು ಭೇಟಿ ಮಾಡಿದ್ದು, ಮಹಿಳಾ ಕೈದಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಯಾರೊಬ್ಬರೂ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿಲ್ಲ. ಆದರೆ, ವಿನಾಕಾರಣ ಮಹಿಳಾ ಕೈದಿಗಳ ತೇಜೋವಧೆ ಸರಿಯಲ್ಲ. ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಕಾರಾಗೃಹದಿಂದ ಹೊರಬಂದ ಬಳಿಕ ಅವರ ಮನೆಯವರು ಹೇಗೆ ಸ್ವೀಕರಿಸುತ್ತಾರೆಂಬ ಆತಂಕ ಅವರನ್ನು ಕಾಡುತ್ತಿದೆ ಎಂದು ತಾರಾ, ಈ ಬಗ್ಗೆ ಸಮಗ್ರ ತನಿಖೆ ಅಗತ್ಯ. ರಾಜ್ಯ ಸರಕಾರ ಕೂಡಲೇ ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದ ಒತ್ತಾಯಿಸಿದರು.

http://vbnewsonline.com

1 Comment

  1. madam nimma mele tumba abimanavide………….aadrru alli yenu nadedide aanta voting sistem madabahudallla… NIVU IVATT BARTIRI NALE YAARU BARTIRAMMA//// yaradru yeduralli satya heltaramma….helidre naLE BADBEKALWWA……………….. DONT give.. like rubbish things……….yarannadrru uddara madiyammma..’

Write A Comment