ಕರ್ನಾಟಕ

ಸುನಂದಾ ಪುಶ್ಕರ್ ಸಾವಿನ ಪ್ರಕರಣ: ಪ್ರಕರಣದ ವಿಳಂಭವೇಕೆ?

Pinterest LinkedIn Tumblr

subramanya-swamy

ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್, ತಮ್ಮ ಪತ್ನಿ ಸುನಂದಾ ಪುಷ್ಕರ್ ಸಾವಿನ ಕುರಿತು, ತರೂರ್ ತಮ್ಮ ಸಹಾಯಕನೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ಮಾಡಿದ ವರದಿಯನ್ನು, ದೆಹಲಿ ಪೊಲೀಸರು ಯಾವಾಗ ಪ್ರಕಟಿಸಲಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಪ್ರಶ್ನಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ದೆಹಲಿಯ ಲೀಲಾ ಹೋಟೆಲ್ನಲ್ಲಿ ಕಳೆದ ಜ.17ರಂದು ನಿಗೂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಆದರೆ ದೆಹಲಿ ಪೊಲೀಸರ ತನಿಖೆಯಲ್ಲಿ ಯಾವುದೇ ಮಾಹಿತಿಗಳು ಹೊರಬೀಳದಿರುವುದಕ್ಕೆ ಸುಬ್ರಮಣ್ಯ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಕುರಿತು ಸುಬ್ರಮಣ್ಯ ಸ್ವಾಮಿ, ದೆಹಲಿ ಪೊಲೀಸರು ಶಶಿ ತರೂರ್ ತಮ್ಮ ಪತ್ನಿ ಸಾವಿನ ಕುರಿತು, ತಮ್ಮ ಸಹಾಯಕನೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ಮಾಡಿದ ವರದಿಯನ್ನು, ದೆಹಲಿ ಪೊಲೀಸರು ಯಾವಾಗ ಪ್ರಕಟಿಸಲಿದ್ದಾರೆ ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.

ಸುನಂದಾ ಪುಷ್ಕರ್ ನಿಗೂಡ ಸಾವಿನ ದಿನದಂದು, ತರೂರ್ ಅವರ ಆಪ್ತ ಸಹಾಯಕ, ತರೂರ್ಗೆ ಕರೆ ಮಾಡಿ ‘ಸುನಂದಾ ಪುಷ್ಕರ್ ಇನ್ನಿಲ್ಲ’ ಎಂಬ ಸಂಭಾಷಣೆಯನ್ನು ದೆಹಲಿ ಪೊಲೀಸರು ಯಾವಾಗ ಬಹಿರಂಗಗೊಳಿಸಲಿದ್ದಾರೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಅಲ್ಲದೆ ಸುನಂದಾ ಪುಷ್ಕರ್ ಸಾವಿನ ಪ್ರಕರಣದ ವಿಳಂಭವನ್ನು ಖಂಡಿಸಿ ಹಾಗೂ ತನಿಖೆಯನ್ನು ಚುರುಕುಗೊಳಿಸುವಂತೆ ಸಾರ್ವಜನಿಕ ಹಿತಾ ಸಕ್ತಿ ಅರ್ಜಿ ಸಲ್ಲಿಸುವುದಾಗಿ ಸುಬ್ರಮಣ್ಯ ಸ್ವಾಮಿ ತಿಳಿಸಿದ್ದಾರೆ.

Write A Comment