ಕರ್ನಾಟಕ

ಡಾ.ರಾಜ್‌ಕುಮಾರ್ ಪ್ರತಿಮೆಗೆ ಕಿಡಿಗೇಡಿಗಳಿಂದ ಅಪಮಾನ: ನ.23ಕ್ಕೆ ಅನಾವರಣಗೊಳ್ಳಲು ಸಿದ್ದವಾಗಿದ್ದ ಪುತ್ಥಳಿ ಅನಾವರಣ ಸ್ಥಿತಿಯಲ್ಲಿದ್ದ ಡಾ.ರಾಜ್‌ಕುಮಾರ್ ಪ್ರತಿಮೆಗೆ ಇಂದು ಬೆಳಗ್ಗೆ ಕಿಡಿಗೇಡಿಗಳ ಗುಂಪೊಂ

Pinterest LinkedIn Tumblr

Dr.Raaj

ಬೆಂಗಳೂರು: ಡಾ.ರಾಜ್‌ಕುಮಾರ್ ಪ್ರತಿಮೆಗೆ ಕಿಡಿಗೇಡಿಗಳು ಅಪಮಾನ ಮಾಡಿರುವ ಘಟನೆ ಇಂದು ಬೆಳಿಗ್ಗೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಡಾ.ರಾಜ್‌ಕುಮಾರ್ ಅಭಿಮಾನಿಗಳು ನಿರ್ಮಿಸಿದ್ದ ಈ ಪ್ರತಿಮೆಯು ನವೆಂಬರ್23ಕ್ಕೆ ಅನಾವರಣಗೊಳ್ಳಲು ಸಿದ್ದವಾಗಿತ್ತು.
ದು ಹಾನಿ ಮಾಡುವ ಮೂಲಕ ಅಪಮಾನ ಎಸಗಿದೆ. ಬಲಮುರಿ ಸೇವಾ ಸಮಿತಿಯಿಂದ ನಿರ್ಮಾಣಗೊಂಡು, ನವೆಂಬರ್ 23 ಕ್ಕೆ ಅನಾವರಣಗೊಳ್ಳಲು ಸಿದ್ದತೆ ನಡೆಸಲಾಗಿತ್ತು.

ಅಭಿಮಾನಿಗಳಿಂದ ನಿರ್ಮಾಣಗೊಂಡಿದ್ದ ಡಾ.ರಾಜ್ ಪುತ್ಥಳಿಗೆ ದುಷ್ಕರ್ಮಿಗಳ ಗುಂಪೊಂದು ಹಾನಿ ಮಾಡಿರುವುದು ಇಂದು ಬೆಳಗ್ಗೆ ತಿಳಿದುಬಂದಿದೆ. ಪುತ್ಥಳಿಗೆ ಹಾನಿ ಮಾಡಿರುವುದನ್ನು ಕಂಡ ಡಾ.ರಾಜ್ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಲ್ಲದೆ ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದು, ದುಷ್ಕರ್ಮಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಧಾವಿಸಿರುವ ರಾಜರಾಜೇಶ್ವರಿನಗರ ಠಾಣಾ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪುತ್ಥಳಿಯ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

Write A Comment