ಕರ್ನಾಟಕ

ಅತ್ಯಾಚಾರ ತಡೆಗೆ ವೇಶ್ಯಾವೃತ್ತಿ ಕಾನೂನು ಬದ್ಧಗೊಳಿಸಿ: ಮಾತೆ ಮಹಾದೇವಿ

Pinterest LinkedIn Tumblr

mate mahadevi

ಧಾರವಾಡ, ಅ.13: ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ವೇಶ್ಯಾವೃತ್ತಿಯನ್ನು ಕಾನೂ ನು ಬದ್ಧಗೊಳಿಸಬೇಕು ಎಂದು ಕೂಡಲಸಂಗಮ ಬಸವಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೇಶ್ಯಾವೃತ್ತಿಯನ್ನು ಕಾನೂನು ಬದ್ಧ ಗೊಳಿಸಿದರೆ, ಅತ್ಯಾಚಾರ ಪ್ರಕರಣಗಳನ್ನು ತಡೆಗ ಟ್ಟಬಹುದು.ಹಾಗೂ ಈ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಬಡ ಮಹಿಳೆಯರಿಗೆ ನೆರವು ನೀಡಿದಂತಾಗುತ್ತದೆ ಎಂದರು.

ಸರಕಾರ ಕಾನೂನು ಮೂಲಕ ಎಷ್ಟೇ ಬಿಗಿಯಾದ ಕ್ರಮಗಳನ್ನು ಕೈಗೊಂಡರೂ ವೇಶ್ಯಾವಾಟಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.ಮಹಿಳೆಯರು ಬಡತನ ಹಾಗೂ ಇನ್ನಿತರ ಸಾಮಾಜಿಕ ಕಾರಣಗಳಿಂದಾಗಿ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಲಾಗಿದೆ ಎಂದು ಅವರು ಹೇಳಿದರು.

ಅತ್ಯಾಚಾರಗಳು ನಡೆಯಲು ಮಹಿಳೆಯರು ಧರಿಸುವ ಬಟ್ಟೆಗಳು ಕಾರಣ.ಆದುದರಿಂದ, ಮಹಿಳೆಯರು ತಮ್ಮ ಅಂ ಗಾಂಗಗಳು ಪ್ರದರ್ಶನಗೊಳ್ಳುವ ಬಟ್ಟೆಗಳನ್ನು ಧರಿಸಬಾರದು.ರಾತ್ರಿ ವೇಳೆ ಮನೆಯಿಂದ ಹೊರಗೆ ಬರಬಾರದು. ನೈತಿಕ ವೌಲ್ಯಗಳು ಹಾಗೂ ಧಾರ್ಮಿಕ ಸಂಸ್ಕಾರದ ಕೊರತೆಯೂ ಅತ್ಯಾಚಾರ ಪ್ರಕರಣಗಳು ಹೆಚ್ಚಳವಾಗಲು ಕಾರಣವಾಗಿದೆ ಎಂದು ಅವರು ತಿಳಿಸಿದರು.

ರಾಮಕಥಾ ಗಾಯಕಿ ಪ್ರೇಮಲತಾ, ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧದ ದಾಖ ಲಿಸಿರುವ ಅತ್ಯಾಚಾರ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯಾಂಶ ಹೊರಬರಬೇಕು ಎಂದು ಮಾತೆ ಮಹಾದೇವಿ ಆಗ್ರಹಿಸಿದರು.

Write A Comment